ಬೆಂಗಳೂರು:ಕರೊನಾ ಭೀತಿ ನಡುವೆ ರಾಜ್ಯದಲ್ಲಿ ಯಾರೂ ಹಸಿವಿನಲ್ಲಿ ಇರಬಾರದು ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಏಪ್ರಿಲ್​ನಿಂದ ಜೂನ್​ವರೆಗೆ ಪಡಿತರ ಚೀಟಿದಾರರಿಗೆ ಅಗತ್ಯವಿರುವ 6.2 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಲಾಕ್​ಡೌನ್​ನಿಂದಾಗಿ ಕೂಲಿ ಕಾರ್ವಿುಕರು ಸೇರಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳ ಕೊರತೆಯಾಗಿ ಸಮಸ್ಯೆ ಅನುಭವಿಸುವಂತಾಗಿದೆ. ಅದನ್ನು ನಿವಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ‘ಗರೀಬ್ ಕಲ್ಯಾಣ ಅನ್ನ’ ಯೋಜನೆಯಲ್ಲಿ ರಾಜ್ಯಕ್ಕೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಅಗತ್ಯವಿರುವ 6.2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡಲಾಗಿದೆ. ಅದನ್ನು ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರು ಮತ್ತು ಪ್ರಯಾರಿಟಿ ಹೌಸ್ ಹೋಲ್ಡ್್ಸ (ಪಿಎಚ್​ಎಚ್) ಫಲಾನುಭವಿಗಳಿಗೆ ವಿತರಿಸಲು ಸೂಚಿಸಲಾಗಿದೆ.
ಮಾಸಿಕ 2 ಲಕ್ಷ ಮೆಟ್ರಿಕ್ ಟನ್:ಕೇಂದ್ರ ಸರ್ಕಾರ ಲೆಕ್ಕ ಹಾಕಿರುವಂತೆ ರಾಜ್ಯದಲ್ಲಿನ ಅಂತ್ಯೋದಯ ಪಡಿತರ ಚೀಟಿ ಮತ್ತು ಪ್ರಯಾರಿಟಿ ಹೌಸ್ ಹೋಲ್ಡ್್ಸ ಫಲಾನುಭವಿಗಳಿಗೆ ತಲಾ 5 ಕೆ.ಜಿ.ಯಂತೆ ಮಾಸಿಕ 2,00,965 ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಅದರಂತೆ 3 ತಿಂಗಳಿಗಾಗುವಷ್ಟು ಅಕ್ಕಿಯನ್ನು ಒಮ್ಮೆಲೇ ಬಿಡುಗಡೆ ಮಾಡಲಾಗಿದೆ.
ಆಹಾರ ಧಾನ್ಯಗಳ ವಿತರಣೆ ಸಂಬಂಧ ಕೆಲ ನಿಯಮಗಳನ್ನು ವಿಧಿಸಿರುವ ಕೇಂದ್ರ ಸರ್ಕಾರ, ಏಪ್ರಿಲ್ ಮತ್ತು ಮೇ ತಿಂಗಳ ಅಕ್ಕಿಯನ್ನು ಮೇನಲ್ಲಿ ಒಮ್ಮೆಗೆ ನೀಡಬೇಕು. ಅದರಂತೆ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ.ಯಂತೆ ಅಕ್ಕಿ ವಿತರಿಸಬೇಕು ಎಂದು ಸೂಚಿಸಲಾಗಿದೆ. ಅದೇ ರೀತಿ ಮಾಸಿಕ 1 ಕೆ.ಜಿ. ತೊಗರಿ ಬೇಳೆಯಂತೆ 2 ಕೆ.ಜಿ. ಬೇಳೆಯನ್ನೂ ನೀಡಬೇಕು ಎಂದು ತಿಳಿಸಲಾಗಿದೆ.
ಏ.25ರೊಳಗೆ ನ್ಯಾಯಬೆಲೆ ಅಂಗಡಿಗೆ:ಎರಡು ತಿಂಗಳ ಅಕ್ಕಿಯನ್ನು ಏ.23ರ ಒಳಗೆ ಭಾರತ ಆಹಾರ ನಿಗಮದಿಂದ ಕಡ್ಡಾಯವಾಗಿ ಸರಬರಾಜು ಮಾಡಬೇಕು. ಆ ಆಹಾರ ಪದಾರ್ಥಗಳು ಏ.25ರೊಳಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜಾಗಿರಬೇಕು. ಅಲ್ಲದೆ, ಏಕಕಾಲಕ್ಕೆ ಅಕ್ಕಿ ಸರಬರಾಜು ಮಾಡಲು ಅಗತ್ಯವಿರುವ ವಾಹನಗಳಿಗೆ ಮತ್ತು ಸಿಬ್ಬಂದಿಗೆ ಪರ್ವಿುಟ್ ವಿತರಿಸುವಂತೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೇ 1ರಿಂದ ವಿತರಣೆ
ನ್ಯಾಯಬೆಲೆ ಅಂಗಡಿಗೆ ಬರುವ ಅಕ್ಕಿಯನ್ನು ಮೇ 1ರಿಂದಲೇ ವಿತರಿಸಲು ಆರಂಭಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಡಿತರ ಚೀಟಿದಾರರಿಗೆ ಅಕ್ಕಿ ಜತೆಗೆ ಬೇಳೆಯನ್ನು ಕಡ್ಡಾಯವಾಗಿ ವಿತರಿಸಬೇಕು. ಅದರಲ್ಲಿ ಯಾವುದೇ ವ್ಯತ್ಯಾಸವಾಗುವಂತಿಲ್ಲ. ಈ ಕುರಿತು ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಕಳಪೆ ಆಹಾರ ಪೂರೈಸುವಂತಿಲ್ಲ:ಗೋದಾಮುಗಳಿಂದ ಅಕ್ಕಿ-ತೊಗರಿ ಬೇಳೆ ಸ್ವೀಕರಿಸುವಾಗ ಕಡ್ಡಾಯವಾಗಿ ಅದರ ಗುಣಮಟ್ಟ ಪರಿಶೀಲಿಸಬೇಕು. ಫಲಾನುಭವಿಗಳಿಗೆ ಕಳಪೆ ಗುಣಮಟ್ಟದ ಅಕ್ಕಿ-ಬೇಳೆ ಪೂರೈಸುವಂತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕಿದೆ. ಅಕ್ಕಿ-ಬೇಳೆ ಪ್ರಮಾಣ, ಗುಣಮಟ್ಟದ ಕುರಿತು ಒಂದೇ ಒಂದು ದೂರು ಬಂದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
6 ತಿಂಗಳಿಂದ ಕಮಿಷನ್ ಬಂದಿಲ್ಲ:ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡುತ್ತಿರುವ ಕಮಿಷನ್ ಆರು ತಿಂಗಳಿಂದ ಬಂದಿಲ್ಲ ಎಂದು ರಾಜ್ಯ ಪಡಿತರ ವಿತರಕ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು. ಫಲಾನುಭವಿಗಳಿಗೆ ವಿತರಿಸುವ ಪ್ರತಿ ಕ್ವಿಂಟಾಲ್ ಅಕ್ಕಿಗೆ 100 ರೂ. ಕಮಿಷನ್ ನೀಡಲಾಗುತ್ತಿದೆ. ಬಾಕಿ ಕಮಿಷನ್ ಬಿಡುಗಡೆ ಮಾಡುವಂತೆ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಹಿಂದೆ ಅಲ್ಪಸ್ವಲ್ಪ ಬಿಡುಗಡೆ ಮಾಡಿದರೂ ಆಯಾ ಜಿಲ್ಲೆಯ ಜಂಟಿ ನಿರ್ದೇಶಕರು ಬಿಡುಗಡೆ ಮಾಡುತ್ತಿಲ್ಲ ಎಂದರು.
| ಗಿರೀಶ್ ಗರಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
