ಬೆಂಗಳೂರು: ಕೇಂದ್ರ ಸರ್ಕಾರದ ಪ್ರಸ್ತಾವಿತ ವಖಾಫ್ ಕಾಯ್ದೆಗೆ ತಿದ್ದುಪಡಿ ಮಸೂದೆ, 2024 ಸಂಪೂರ್ಣವಾಗಿ ಸಂವಿಧಾನ ವಿರೋಧಿ, ಪರೋಕ್ಷವಾಗಿ ಮುಸ್ಲಿಮರ ಐಕ್ಯತೆಗೆ ಭಂಗ ತರುವ ಅಂಶಗಳಿವೆ ಎಂದು ಮುಸ್ಲಿಮ್ ಧರ್ಮಗುರುಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಧರ್ಮಗುರು ನಿಯೋಗ ಶನಿವಾರ ಭೇಟಿ ಮಾಡಿ, ಕಾಯ್ದೆ ತಿದ್ದುಪಡಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿತು.
ಧಾರ್ಮಿಕ ಆಚರಣೆಗಳಿಗೆ ಸಮಾನ ಅವಕಾಶ, ಮುಕ್ತತೆ ಮತ್ತಿತರ ಅವಕಾಶಗಳನ್ನು ಕಲ್ಪಿಸಿಕೊಟ್ಟಿರುವ ಸಂವಿಧಾನದ ಪರಿಚ್ಛೇದ 25, 26, 29 ಮತ್ತು 14ನ್ನು ಉಲ್ಲಂಸುತ್ತದೆ. ವ್ಯವಸ್ಥಿತವಾಗಿ ಮುಸ್ಲಿಮ್ ವೈಯಕ್ತಿಕ ಕಾನೂನುಗಳನ್ನು ಗೌಣವಾಗಿಸುತ್ತದೆ ಎಂದು ಆಕ್ಷೇಪಿಸಿದೆ.
ಚಾಲ್ತಿ ವಖಾಫ್ ಕಾಯ್ದೆಯನ್ನು ಈ ಮಸೂದೆ ದುರ್ಬಲಗೊಳಿಸುತ್ತದೆ. ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದರೂ ಇಲ್ಲವೆಂಬಂತೆ ಬಿಂಬಿಸಿ ತಿದ್ದುಪಡಿ ಮೂಲಕ ಕೊಡಮಾಡಲಾಗುತ್ತಿದೆ ಎಂಬ ತಪ್ಪಾದ ಸಂದೇಶ ಕಳುಹಿಸಲು ಪ್ರಯತ್ನಿಸುತ್ತಿದೆ.
ಮುಸ್ಲಿಮೇತರರಿಗೆ ನೇಮಕ, ರಾಷ್ಟ್ರೀಯ ವಖಾಫ್ ಕೌನ್ಸಿಲ್ ಮತ್ತು ರಾಜ್ಯ ವಖಾಫ್ ಮಂಡಳಿ ಮೇಲೆ ಸರ್ಕಾರದ ಹಿಡಿತ, ಮಂಡಳಿಗೆ ದಾನ ರೂಪದಲ್ಲಿ ನೀಡಿದ ಜಮೀನು ಹಿಂಪಡೆಯಲು ಆಸ್ಪದ ಮತ್ತು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಕೊಡಲಾಗಿದೆ.
ವಖಾಫ್ ಆಸ್ತಿಯನ್ನು ಸರ್ಕಾರದ ಆಸ್ತಿಯನ್ನಾಗಿ ಪರಿವರ್ತಿಸುವಂತಹ ಅಧಿಕಾರ ನೀಡಿದ್ದು, ಒಟ್ಟಾರೆ ಸರ್ಕಾರದ ಹಸ್ತಕ್ಷೇಪ, ಮುಸ್ಲಿಮರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ನಯವಾದ ಅಸ್ತ್ರವೇ ತಿದ್ದುಪಡಿ ಮಸೂದೆಯಾಗಿದೆ ಎಂದು ನಿಯೋಗ ಆರೋಪಿಸಿದೆ.
ಮುಸ್ಲಿಮರ ಹಿತಕ್ಕೆ ಮಾರಕ, ಸಂವಿಧಾನ ವಿರೋಧಿಯಾದ ಈ ತಿದ್ದುಪಡಿ ಬಿಲ್‌ಗೆ ಪ್ರಬಲ ವಿರೋಧ ವ್ಯಕ್ತಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೋರಿತು. ಇದೇ ಸಂದರ್ಭದಲ್ಲಿ ಲಿಖಿತ ಮನವಿಪತ್ರವನ್ನೂ ಸಲ್ಲಿಸಿತು.
ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಂಸದ ಡಾ.ಕೆ.ರಹಮಾನ್ ಖಾನ್, ಮಂಡಳಿ ಪ್ರಧಾನ ಕಾರ್ಯದರ್ಶಿ ಜಲ್ ರಹೀಮ್ ಸಾಹೇಬ್, ಧರ್ಮಗುರುಗಳಾದ ಮೌಲಾನಾ ಶಬೀರ್ ಅಹ್ಮದ್ ಹುಸೇನ್ ನದ್ವಿ ಸಾಹೇಬ್, ಮುಫ್ತಿ ಮೊಹಮ್ಮದ್ ಅಸ್ಲಂ ಸಾಹೇಬ್ ರಶದಿ ಖಾಸಿಮಿ ಇನ್ನಿತರರು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
