ಬೆಂಗಳೂರು:ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ (ಎಂಎಸ್​ಎಂಇ) ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ನೋಂದಣಿ ನೆಪದಲ್ಲಿ ಉದ್ಯಮಿಗಳಿಂದ ಶುಲ್ಕ, ದಾಖಲೆಗೆ ಕನ್ನ ಹಾಕಲಾಗುತ್ತಿದೆ. ಈ ಸಂಬಂಧ ವಿಜಯನಗರದ ಯುವ ಉದ್ಯಮಿ ಡಿ.ಯೋಗೇಶ್, ಪಶ್ಚಿಮ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರನ್ವಯ ಅಪರಿಚಿತರ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೊಸ ಉದ್ಯಮ ಆರಂಭಿಸುವ ಉದ್ದೇಶಕ್ಕೆ ಯೋಗೇಶ್, ಕೇಂದ್ರ ಸರ್ಕಾರದ ಎಂಎಸ್​ಎಂಇನಲ್ಲಿ ನೋಂದಣಿ ಮಾಡಿಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದಾರೆ. ಆಗ ಕೇಂದ್ರ ಸರ್ಕಾರದ ವೆಬ್​ಸೈಟ್​ಗೆ ಹೋಲಿಕೆ ಆಗುವಂತೆಯೇ WWW.MSME-gov.org/ ಲಿಂಕ್ ಸಿಕ್ಕಿದೆ.
ಇದನ್ನೂ ಓದಿವಿಯೆಟ್ನಾಂನಲ್ಲಿ ಒಂಬತ್ತನೇ ಶತಮಾನದ ಶಿವಲಿಂಗ ಪತ್ತೆ!
ನೋಡಲು ಎಂಎಸ್​ಎಂಇ ಇಲಾಖೆಯದೇ ಎಂಬಂತೆ ಕಂಡ ಹಿನ್ನೆಲೆ ಯೋಗೇಶ್, ಅದರಲ್ಲಿ ಹೆಸರು, ವಿಳಾಸ, ಮೊಬೈಲ್ ನಂಬರ್, ಆಧಾರ್, ಪಾನ್ ಸೇರಿ ಎಲ್ಲ ವಿವರಗಳನ್ನು ಅಪ್​ಲೋಡ್ ಮಾಡಿದ್ದಾರೆ. ನಂತರ ನೋಂದಣಿ ಶುಲ್ಕ 1,850 ರೂ. ಪಾವತಿ ಮಾಡಿದ್ದಾರೆ. ಪ್ರತಿಯಾಗಿ ಯೋಗೇಶ್ ಇ-ಮೇಲ್​ಗೆ ರಸೀದಿ ಬಂದಿದ್ದು, ಪರಿಶೀಲಿಸಿದಾಗ ಖಾಸಗಿ ಕಂಪನಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿರುವುದು ಗೊತ್ತಾಗಿದೆ. ಅನುಮಾನ ಬಂದು ಸ್ಥಿರ ದೂರವಾಣಿಗೆ ಕರೆ ಮಾಡಿದಾಗ, ‘ಎಲ್ಲ ದಾಖಲೆಗಳನ್ನು ಕೇಂದ್ರ ಸರ್ಕಾರದ ವೆಬ್​ಸೈಟ್​ಗೆ ಅಪ್​ಲೋಡ್ ಮಾಡಿ ‘ಉದ್ಯೋಗ ಆಧಾರ್’ ಪ್ರಮಾಣ ಪತ್ರ ಕೊಡಿಸುವುದಾಗಿ ತಿಳಿಸಿದ್ದಾರೆ. ಯೋಗೇಶ್, ಕೇಂದ್ರ ಸರ್ಕಾರದ ಅಧಿಕೃತ ವೆಬ್​ಸೈಟ್ ಪರಿಶೀಲಿಸಿದಾಗ ನೋಂದಣಿ ಉಚಿತ ಎಂಬುದು ಗೊತ್ತಾಗಿದೆ. ಅದಕ್ಕಾಗಿ ಸರ್ಕಾರದ ವೆಬ್​ಸೈಟ್​ಗೆ ಹೋಲುವಂತೆ ನಕಲಿ ಸೈಟ್ ತೆರೆದು ವಂಚನೆ ಮಾಡುತ್ತಿರುವುದಾಗಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾಖಲೆಗೂ ಕನ್ನ: ಈ ದಾಖಲೆ ಬಳಸಿಕೊಂಡು ಬ್ಯಾಂಕ್​ನಿಂದ ಸಾಲ ಪಡೆದು ವಂಚಿಸಬಹುದು. ಬ್ಯಾಂಕ್ ಖಾತೆ, ಆಧಾರ್, ಪಾನ್ ವಿವರ ಬಳಸಿ ನೆಟ್​ಬ್ಯಾಂಕಿಂಗ್​ಗೆ ಕನ್ನ ಹಾಕುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಉದ್ಯೋಗ ಆಧಾರ್?
ಹೊಸದಾಗಿ ಉದ್ಯಮ ಆರಂಭಿಸಲು ಎಂಇಎಂಎಸ್ ವೆಬ್​ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಉದ್ಯೋಗ ಆಧಾರ್ ಪ್ರಮಾಣ ಪತ್ರ ಪಡೆದರೆ ಸರ್ಕಾರದ ಸೌಲಭ್ಯ ಸಿಗಲಿದೆ. ಬ್ಯಾಂಕ್ ಸಾಲ, ವಿದ್ಯುತ್- ನೀರು ಸಂಪರ್ಕ,ನಿವೇಶನ, ಸಬ್ಸಿಡಿ, ಉತ್ಪನ್ನಗಳ ಗುಣಮಟ್ಟ ದೃಢೀಕರಣ ಸೇರಿ ಪ್ರತಿಯೊಂದು ಹಂತದಲ್ಲಿ ಈ ಪ್ರಮಾಣ ಪತ್ರ ಕಡ್ಡಾಯ.
‘ಗಡಿ ವಿವಾದ ಸಂಬಂಧವನ್ನು ಹಾಳುಗೆಡುವದಿರಲಿ’: ಮಾತುಕತೆಯತ್ತ ಒಲವು ತೋರಿದ ಚೀನಾ ರಾಯಭಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eighteen =
Remember me
