ಬೆಂಗಳೂರುಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಸಿಇಟಿ-24ರ ಆಪ್ಷನ್ ಎಂಟ್ರಿ ಮಾಡಲು ಎಲ್ಲಿಯವರೆಗೂ ಸಮಯ ನೀಡಬೇಕು ಎಂಬುದನ್ನು ಮಂಗಳವಾರ (ಜು.30) ನಿರ್ಧರಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಮೊದಲನೇ ಸುತ್ತಿನ ಸೀಟು ಆಯ್ಕೆ ಮಾಡಿಕೊಳ್ಳಲು ಜು.23ರಿಂದ ಆಪ್ಷನ್ ಎಂಟ್ರಿ ಆರಂಭವಾಗಿದೆ. ಅಂದಿನಿಂದ 7 ದಿನಗಳವರೆಗೂ ಅಪ್ಷನ್ ಎಂಟ್ರಿ ದಾಖಲಿಸಬಹುದು ಎಂದು ಕೆಇಎ ತಿಳಿಸಿತ್ತು. ಆ ಪ್ರಕಾರ ಸೋಮವಾರ ಕೊನೆಯ ದಿನವಾಗಿದ್ದು, ಇನ್ನೂ ಕೆಲವು ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ದಾಖಲಿಸಿಲ್ಲ. ಈ ಕಾರಣದಿಂದ ಮತ್ತಷ್ಟು ಸಮಯ ವಿಸ್ತರಣೆ ಮಾಡಿದರೆ ಅನುಕೂಲವಾಗಲಿದೆ ಎಂಬ ಒತ್ತಾಯ ಕೇಳಿಬಂದಿದೆ.
ಅಲ್ಲದೆ, ವೈದ್ಯಕೀಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ವೇಳಾಪಟ್ಟಿ ಪ್ರಕಟವಾಗಿಲ್ಲದ ಕಾರಣ ಎಲ್ಲಿಯವರೆಗೂ ಆಪ್ಷನ್ ಎಂಟ್ರಿಗೆ ಅವಕಾಶವಿರಲಿದೆ ಎಂಬ ಗೊಂದಲವಿದೆ. ನಿಖರವಾಗಿ ಎಲ್ಲಿಯವರೆಗೂ ವಿಸ್ತರಣೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಲಿದೆ.ಇದೇ ವೇಳೆ ಈ ವರೆಗೆ ನೋಂದಣಿ ಮಾಡಿಕೊಳ್ಳದ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೂ ನೋಂದಣಿ ಸಮಯವನ್ನು ತಿಳಿಸಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × three =
Remember me
