ಬೆಂಗಳೂರು:ನೀಟ್ ಪ್ರಕ್ರಿಯೆ ತಡವಾಗಿದ್ದರಿಂದ 2022ರ ಸಿಇಟಿ ಅರ್ಜಿ ಆಹ್ವಾನ ವಿಳಂಬವಾಗಿದ್ದು, ಮಾ.25ರಂದು ಸಿಇಟಿ ವೇಳಾಪಟ್ಟಿ ಪ್ರಕಟಿಸಲಾಗುವುದು. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ವಿಜಯವಾಣಿಯು ಮಾ.21ರಂದು ‘ಇನ್ನೂ ಪ್ರಕಟವಾಗದ ಕೆ-ಸಿಇಟಿ ವೇಳಾಪಟ್ಟಿ’ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಕೆ-ಸಿಇಟಿ ವಿಳಂಬದಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಡಕುಂಟಾಗಿದೆ. ವೇಳಾಪಟ್ಟಿ ಯಾವಾಗ? ಪ್ರಕಟವಾಗಲಿದೆ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಸಚಿವ ಅಶ್ವತ್ಥ ನಾರಾಯಣ ಲಿಖಿತ ಉತ್ತರ ನೀಡಿದ್ದು, ಈ ಬಾರಿ ಕರೊನಾ ಹಾಗೂ ನೀಟ್ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಸಿಇಟಿ ಅರ್ಜಿ ಆಹ್ವಾನ ವಿಳಂಬವಾಗಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಜನವರಿಯಲ್ಲಿ ಸಿಇಟಿ ಅರ್ಜಿಯನ್ನು ಪ್ರಕಟಿಸಲಾಗುತ್ತಿತ್ತು. ಈ ಬಾರಿ ಮೇ 18ರವರೆಗೆ ವಾರ್ಷಿಕ ಪರೀಕ್ಷೆಯು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಜೂನ್ ಮೊದಲ ಅಥವಾ ಎರಡನೇ ಬಾರದಲ್ಲಿ ಸಿಇಟಿ ನಡೆಸಲು ಉದ್ದೇಶಿಸಿದ್ದು, ಮಾ.25ರಂದು ವೇಳಾಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ 2022ರ ಮೊದಲನೇ ವಾರದಲ್ಲಿ ಯುಜಿ- ಸಿಇಟಿ 2022ರ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.

ನಿಶ್ಚಿತಾರ್ಥಕ್ಕೆ ಹಾಲ್​ ಬುಕ್ ಮಾಡಿ ಬರುತ್ತಿದ್ದಾಗ ಭಾರಿ ಸ್ಫೋಟ; ಜೀವನ್ಮರಣ ಹೋರಾಟದಲ್ಲಿ ಅಪ್ಪ-ಮಗಳು

ನಮ್ಮದೇ ಮೊದಲ ‘ದಸರಾ’ ಎಂದ ಶರ್ಮಿಳಾ; ತೆಲುಗು ನಿರ್ಮಾಪಕರ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು..

ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
