ಬೆಂಗಳೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿ ನೀಟ್-24 ಮತ್ತು ಯುಜಿ ಸಿಇಟಿ-24 ಅಭ್ಯರ್ಥಿಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಉದ್ದೇಶಿತ ಪ್ರಕಟಣೆಗೂ ಎರಡು ದಿನ‌ ಮೊದಲೇ ಫಲಿತಾಂಶ ಪ್ರಕಟಿಸಿದೆ. ಇದರೊಂದಿಗೆ, ಅಭ್ಯರ್ಥಿಗಳಿಗೆ ‘ಚಾಯ್ಸ್’ ಆಯ್ಕೆ ಪ್ರಕ್ರಿಯೆ ಆಗಸ್ಟ್ 31 ರಿಂದ (ಶನಿವಾರ) ಆರಂಭವಾಗಲಿದೆ.
ವೈದ್ಯಕೀಯ, ದಂತವೈದ್ಯಕೀಯ, ಆಯುಷ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ, ಬಿಎಸ್ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸ್ ಗಳ ಅಭ್ಯರ್ಥಿಗಳಿಗೆ ಇದು ಅನ್ವಯವಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ ‘ಚಾಯ್ಸ್’ ಆಯ್ಕೆ ಮಾಡಿಕೊಳ್ಳಲು ಆಗಸ್ಟ್ 31ರ ಬೆಳಿಗ್ಗೆ 11 ರಿಂದ ಸೆಪ್ಟೆಂಬರ್ 3ರವರೆಗೆ (ರಾತ್ರಿ 11.59) ಅವಕಾಶವಿರುತ್ತದೆ. ಅಭ್ಯರ್ಥಿಗಳು ನಾಲ್ಕು ಚಾಯ್ಸ್ ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದು ಚಾಯ್ಸ್ ಆಯ್ಕೆ ಮಾಡುವ ಮೊದಲು, ಅದಕ್ಕೆ ಸಂಬಂಧಿಸಿದ ವಿವರಣೆ ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಚಾಯ್ಸ್ 1 ಮತ್ತು ಚಾಯ್ಸ್ 2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಆಗಸ್ಟ್ 31ರ ಮಧ್ಯಾಹ್ನ 1ರಿಂದ ಸೆಪ್ಟೆಂಬರ್ 4ರ ಸಂಜೆ 4ರ ಒಳಗೆ ಶುಲ್ಕ ಪಾವತಿಸಬೇಕು. ಚಾಯ್ಸ್ 1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿದ ನೀಟ್ ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತು ಎರಡು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಕೆಇಎ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಸಲ್ಲಿಸಲು ಸೆಪ್ಟೆಂಬರ್ 2ರ ಬೆಳಿಗ್ಗೆ 10:30 ರಿಂದ ಸೆಪ್ಟೆಂಬರ್ 4ರ ಸಂಜೆ 4 ರವರೆಗೆ ಅವಕಾಶವಿರುತ್ತದೆ. (ಯಾವ ವರ್ಗದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಸೂಚನೆ ಓದಿ ತಿಳಿದುಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ)
ಚಾಯ್ಸ್ 1 ಆಯ್ಕೆ ಮಾಡಿ ಶುಲ್ಕ ಪಾವತಿಸಿ ಮೂಲ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಸೆಪ್ಟೆಂಬರ್ 2ರಿಂದ ಸೆಪ್ಟಂಬರ್ 5ರೊಳಗೆ ಡೌನ್ಲೋಡ್ ಮಾಡಿಕೊಳ್ಳಬೇಕು. ಸೀಟು ಹಂಚಿಕೆಯಾದ ಕಾಲೇಜುಗಳಲ್ಲಿ ಸೆಪ್ಟೆಂಬರ್ 5ರ ಸಂಜೆ 5:30ಕ್ಕೆ ಮುಂಚೆ ಪ್ರವೇಶ ಪಡೆಯಬೇಕು.ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಮುಗಿಸುವ ಸಲುವಾಗಿ ಎಲ್ಲಾ ಶನಿವಾರ, ಭಾನುವಾರ ಹಾಗೂ ಗೆಜೆಟ್ ಪ್ರಕಟಿತ ರಜಾದಿನಗಳನ್ನು ಕೆಲಸದ ದಿನಗಳೆಂದು ಪರಿಗಣಿಸಲಾಗುವುದು ಎಂದು ಎಚ್. ಪ್ರಸನ್ನ ಹೇಳಿದ್ದಾರೆ. ಎಂಜಿನಿಯರಿಂಗ್ ಪ್ರವೇಶ ಪಡೆಯುವ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೆ ಹೋಗಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
