ಬೆಂಗಳೂರು:ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಸೀಟುಗಳ ಭರ್ತಿಗೆ ನಡೆಸಿದ 2020ನೇ ಸಾಲಿನ ಕಾಮೆಡ್-ಕೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ‍್ಯಾಂಕ್​ ಗಳಿಸಿದ್ದ ಬೆಂಗಳೂರಿನ ಎಂ.ರಕ್ಷಿತ್ ಕಾಮೆಡ್-ಕೆನಲ್ಲೂ ಮೊದಲ ರ್ಯಾಂಕ್ ಪಡೆದಿದ್ದಾನೆ.
ರಕ್ಷಿತ್ 180ಕ್ಕೆ 168 ಅಂಕ ಗಳಿಸಿದ್ದಾನೆ. ರಾಜಸ್ಥಾನದ ಸೌರವ್ ಕುಮಾರ್, ಬಿಹಾರದ ಅನುಪಮಾ ಸಿನ್ಹಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ರ್ಯಾಂಕ್ ಗಳಿಸಿದ್ದಾರೆ. ಟಾಪ್-10 ರ್ಯಾಂಕ್​ನಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳಿದ್ದು, ಶಾದನ್ ಹುಸೇನ್ 7ನೇ ರ್ಯಾಂಕ್ ಪಡೆದಿದ್ದಾರೆ. ಮೊದಲ 100 ರ್ಯಾಂಕ್​ಗಳ ಪೈಕಿ 45 ರ್ಯಾಂಕ್​ಗಳು ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿವೆ. ಆ.19ರಂದು ದೇಶಾದ್ಯಂತ 259 ಪರೀಕ್ಷಾ ಕೇಂದ್ರಗಳಲ್ಲಿ ಆಯೋಜಿಸಿದ್ದ ಪರೀಕ್ಷೆಗೆ 43,249 ವಿದ್ಯಾರ್ಥಿಗಳು ಹಾಜರಾಗಿದ್ದರು.
ರ್ಯಾಂಕ್ ಕಾರ್ಡ್: ಅಭ್ಯರ್ಥಿಗಳು ರ್ಯಾಂಕ್ ಕಾರ್ಡನ್ನು ಡಿಡಿಡಿ.ಟಞಛಿಛk.ಟ್ಟಜ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದು. ಲಭ್ಯವಿರುವ ಸೀಟುಗಳು ಹಾಗೂ ಕೌನ್ಸೆಲಿಂಗ್ ದಿನಾಂಕವನ್ನು ಶೀಘ್ರದಲ್ಲೇ ವೆಬ್​ಸೈಟ್​ನಲ್ಲಿ ಪ್ರಕಟಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್​ಸೈಟ್ ನೋಡಬಹುದು. ಕಾಮೆಡ್-ಕೆ ಕೌನ್ಸೆಲಿಂಗ್ ಆನ್​ಲೈನ್​ನಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ದಾಖಲಾತಿಗಳನ್ನು ಅಪ್​ಲೋಡ್ ಮಾಡಲು ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. ಅಭ್ಯರ್ಥಿಗಳು ದಾಖಲೆಗಳನ್ನು ಸ್ಕಾ್ಯನ್ ಮಾಡಿ ಕಾಮೆಡ್-ಕೆ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
