ಬೆಂಗಳೂರು:ಇಂಜಿನಿಯರಿಂಗ್, ಪಶುವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ 2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಎಲ್ಲಾ ಐದು ವಿಭಾಗಗಳಲ್ಲೂ ಈ ಬಾರಿ ಬಾಲಕರೇ ಟಾಪರ್​ಗಳಾಗಿ ಹೊರಹೊಮ್ಮಿದ್ದಾರೆ.
ಮಲ್ಲೇಶ್ವರ ಕೆಇಎ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಫಲಿತಾಂಶ ಪ್ರಕಟಿಸಿದರು. ಎಲ್ಲ ಟಾಪ್ ರ್ಯಾಂಕ್​ಗಳೂ ಬೆಂಗಳೂರಿನ ಪಾಲಾಗಿವೆ. ಕಳೆದ ಕೆಲ ವರ್ಷಗಳಿಂದ ಸಿಇಟಿ ಟಾಪರ್​ಗಳ ಪಟ್ಟಿಯಲ್ಲಿ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಆದರೆ, ಈ ಬಾರಿ ಎಲ್ಲ ವಿಭಾಗಗಳಲ್ಲೂ ಬಾಲಕರೇ ಟಾಪರ್​ಗಳಾಗಿರುವುದು ವಿಶೇಷವಾಗಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಯಲಹಂಕ ನ್ಯಾಷನಲ್ ಪಬ್ಲಿಕ್ ಶಾಲೆಯ ಅಪೂರ್ವ್ ಟಂಡನ್, ಬಿಎಸ್ಸಿ ಕೃಷಿಯಲ್ಲಿ ಎಚ್​ಎಎಲ್ ಪಬ್ಲಿಕ್ ಶಾಲೆಯ ಅರ್ಜಿನ್ ರವಿಶಂಕರ್, ಯೋಗ ಮತ್ತು ನ್ಯಾಚುರೋಪತಿ ಹಾಗೂ ಪಶುವೈದ್ಯಕೀಯ ವಿಭಾಗಗಳಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ವಿದ್ಯಾರ್ಥಿ ಹೃಷಿಕೇಶ್ ನಾಗಭೂಷಣ್, ಬಿ ಫಾರ್ವ ವಿಭಾಗದಲ್ಲಿ ವಿದ್ಯಾರಣ್ಯಪುರದ ನಾರಾಯಣ ಇ-ಟೆಕ್ನೋ ಶಾಲೆಯ ಆರ್.ಕೆ. ಶಿಶಿರ್ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಪಶು ವೈದ್ಯಕೀಯ ವಿಭಾಗದಲ್ಲಿ 3ನೇ ರ್ಯಾಂಕ್ ಹೊರತುಪಡಿಸಿ ಎಲ್ಲ ವಿಭಾಗಗಳಲ್ಲೂ ಟಾಪ್ ಮೂರು ರ್ಯಾಂಕ್​ಗಳನ್ನೂ ಕೂಡ ಹುಡುಗರೇ ಪಡೆದುಕೊಂಡಿರುವುದು ಈ ಬಾರಿಯ ಮತ್ತೊಂದು ವಿಶೇಷವಾಗಿದೆ. ಟಾಪ್ 9 ರ್ಯಾಂಕ್​ಗಳ ಪೈಕಿ ಎಲ್ಲ ವಿಭಾಗಗಳಲ್ಲೂ ಸಿಬಿಎಸ್​ಇ ಕೇಂದ್ರೀಯ ಪಠ್ಯಕ್ರಮದ 12ನೇ ತರಗತಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಎಸ್ಸಿ ಕೃಷಿಯಲ್ಲಿ 3ನೇ ರ್ಯಾಂಕ್ ಹೊರತುಪಡಿಸಿದರೆ ಯಾವುದೇ ವಿಭಾಗದಲ್ಲೂ ಟಾಪ್ 3 ರ್ಯಾಂಕ್​ಗಳಲ್ಲಿ ರಾಜ್ಯ ಸರ್ಕಾರದ ಪದವಿ ಪೂರ್ವ ಕಾಲೇಜುಗಳ ಯಾವುದೇ ವಿದ್ಯಾರ್ಥಿಗಳು ಸ್ಥಾನ ಪಡೆದಿಲ್ಲ.
1.8 ಲಕ್ಷ ಇಂಜಿನಿಯರಿಂಗ್ ಸೀಟುಗಳು:ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟಾರೆ 1,08,698 ಎಂಜಿನಿಯರಿಂಗ್ ಸೀಟುಗಳು ಲಭ್ಯವಿದೆ. ಇದರಲ್ಲಿ 60 ಸಾವಿರದಷ್ಟು ಸರ್ಕಾರಿ ಸೀಟುಗಳಾಗಿವೆ, ಕಾಮೆಡ್-ಕೆ ಸೀಟುಗಳ ಸಂಖ್ಯೆ 24,413, ಆಡಳಿತ ಮಂಡಳಿ ಕೋಟಾದಲ್ಲಿ 31,634 ಮತ್ತು ಸೂಪರ್ ನ್ಯೂಮರರಿ ಕೋಟಾದಡಿ 57 ಸಾವಿರ ಸೀಟುಗಳು ಲಭ್ಯವಾಗಲಿವೆ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದರು. ಕೆಇಎ ಪಾಲಿಗೆ 57,100 ಸೀಟುಗಳು ಲಭ್ಯವಾಗಿದೆ. ಇನ್ನೂ ಸೀಟ್ ಮ್ಯಾಟ್ರಿಕ್ಸ್ ಅಪ್​ಡೇಟ್ ಆಗುವ ಸ್ಥಿತಿಯಲ್ಲಿದ್ದು, ಶೀಘ್ರ ನಿಖರವಾದ ಅಂಕಿ-ಅಂಶಗಳು ದೊರೆಯಲಿದೆ.
ಅಪ್ಪ-ಅಮ್ಮ ಇಬ್ಬರೂ ಸಾಫ್ಟ್​ವೇರ್ ಇಂಜಿನಿಯರ್. ಮೊದಲನೇ ರ್ಯಾಂಕ್ ಬರುತ್ತೆ ಅಂತ ನಿರೀಕ್ಷೆ ಇರಲಿಲ್ಲ. ವೈದ್ಯನಾಗಬೇಕು ಎಂದುಕೊಂಡಿದ್ದು, ನೀಟ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ.
|ಹೃಷಿಕೇಶ್ ನಾಗಭೂಷಣ್ಮೊದಲ ರ‌್ಯಾಂಕ್​ (ಯೋಗ ಮತ್ತು ಪಶು ವೈದ್ಯಕೀಯ ವಿಜ್ಞಾನ ವಿಭಾಗ)
ಟಾಪ್ 5ರಲ್ಲಿ ಒಂದು ರ್ಯಾಂಕ್ ಬರಬಹುದು ಎಂದುಕೊಂಡಿದ್ದೆ. ಆದರೆ ಮೊದಲ ರ್ಯಾಂಕ್ ನಿರೀಕ್ಷೆ ಇರಲಿಲ್ಲ. ಈಗ ಖುಷಿಯಾಗುತ್ತಿದೆ. ಹಳೆಯ ಪ್ರಶ್ನೆಗಳನ್ನು ಹೆಚ್ಚು ಅಭ್ಯಾಸ ಮಾಡುತ್ತಿದ್ದೆ. ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಓದಬೇಕು ಎಂದುಕೊಂಡಿದ್ದೇನೆ.
|ಆರ್.ಕೆ. ಶಿಶಿರ್ಮೊದಲ ರ‌್ಯಾಂಕ್​ (ಫಾರ್ಮಸಿ ವಿಭಾಗ)
7 ಗ್ರೇಸ್ ಮಾರ್ಕ್ಸ್:ಈ ಬಾರಿ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿದ್ದ ಕೆಲ ಮುದ್ರಣ ದೋಷಗಳಿಂದ ಪ್ರಶ್ನೆಗಳಿಗೆ ಒಟ್ಟು 7 ಕೃಪಾಂಕಗಳನ್ನು ನೀಡಲಾಗಿದೆ. ಈ ಪೈಕಿ ಗಣಿತದಲ್ಲಿ ಅತಿ ಹೆಚ್ಚು 5 ಅಂಕ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ತಲಾ 1 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
