ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 12 ಸಾವಿರ ವಿವಿಧ ಕೋರ್ಸ್​ಗಳಲ್ಲಿ ಸೀಟು ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಸೀಟು ಪಡೆದುಕೊಂಡ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು ಡಿ.8 ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ 12,118 ಅಭ್ಯರ್ಥಿಗಳು ಮೊದಲ ಸುತ್ತಿನಲ್ಲಿ ಸಿಕ್ಕ ಸೀಟುಗಳಿಗೆ ತೃಪ್ತಿ ಪಟ್ಟುಕೊಂಡಿದ್ದು, ಚಾಯ್ಸ್​&1 ಆಯ್ಕೆ ಮಾಡುವ ಮೂಲಕ ಸೀಟು ಖಚಿತ ಪಡಿಸಿದ್ದಾರೆ.
ಮೊದಲನೇ ಸುತ್ತಿನ ಸೀಟು ಇಟ್ಟುಕೊಂಡು ಚಾಯ್ಸ್​&2 ಆಯ್ಕೆ ಮಾಡುವ ಮೂಲಕ ಎರಡನೇ ಸುತ್ತಿನಲ್ಲಿ ಉತ್ತಮ ಕಾಲೇಜಿಗಾಗಿ 28,000 ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಇದಕ್ಕಾಗಿ ವಿದ್ಯಾರ್ಥಿಗಳು ಚಾಯ್ಸ್​&2 ಆಯ್ಕೆ ಮಾಡಿದ್ದಾರೆ.  9 ಸಾವಿರ ವಿದ್ಯಾರ್ಥಿಗಳು ಚಾಯ್ಸ್​&3 ಆಯ್ಕೆ ಮಾಡುವ ಮೂಲಕ ಮೊದಲ ಸುತ್ತಿನಲ್ಲಿ ಸಿಕ್ಕ ಸೀಟನ್ನು ತೊರೆದು ಎರಡನೇ ಸುತ್ತಿನಲ್ಲಿ ಉತ್ತಮ ಸೀಟಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಜೆಇಇ ಅಥವಾ ಕಾಮೆಡ್​&ಕೆನಲ್ಲಿ ಸೀಟು ಪಡೆದಿರುವ ಅಭ್ಯರ್ಥಿಗಳು ಮೊದಲ ಸುತ್ತಿನಲ್ಲಿ ಸಿಕ್ಕ ಸೀಟನ್ನು ತೊರೆದಿದ್ದು ಮಾತ್ರವಲ್ಲದೆ, ನನಗೆ ಮುಂದಿನ ಯಾವುದೇ ಸುತ್ತಿನಲ್ಲೂ ಸೀಟು ಬೇಡವೆಂದು ತಿಳಿಸಲು ಒಂದು ಸಾವಿರ ವಿದ್ಯಾರ್ಥಿಗಳು ಚಾಯ್ಸ್​&4 ಅಯ್ಕೆ ಮಾಡಿದ್ದಾರೆ. ಈ ವರ್ಷ ಮೊದಲನೇ ಸುತ್ತಿನಲ್ಲಿ ಇಂಜಿನಿಯರಿಂಗ್​ಗೆ 1,120 ಸೀಟುಗಳು ಹೆಚ್ಚುವರಿಯಾಗಿ ಸಿಕ್ಕಿದ್ದವು. ಕಳೆದ ವರ್ಷ 55,640 ಸೀಟುಗಳು ಲಭ್ಯವಿದ್ದವು. ಈ ವರ್ಷ 56,760 ಸೀಟುಗಳು ವಿದ್ಯಾರ್ಥಿಗಳ ಆಯ್ಕೆಗೆ ಸಿಕ್ಕಿದ್ದವು.
2ನೇ ಸುತ್ತಿನಲ್ಲಿ ಉತ್ತಮ ಸೀಟು: ಈಗಾಗಲೇ 1 ಸಾವಿರ ವಿದ್ಯಾರ್ಥಿಗಳು ಸಿಕ್ಕ ಸೀಟನ್ನು ತೊರೆದಿರುವುದರಿಂದ ಈ ಎಲ್ಲ ಸೀಟುಗಳು ಎರಡನೇ ಸುತ್ತಿನ ಸೀಟು ಹಂಚಿಕೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ದೊರೆಯಲಿವೆ. ಅಲ್ಲದೆ, ಬಹುತೇಕ ಕಾಲೇಜುಗಳು ಮ್ಯಾನೇಜ್​ಮೆಂಟ್​ ಕೋಟಾದಲ್ಲಿರುವ ಸೀಟುಗಳನ್ನು ಸಹ ಕೆಇಎಗೆ ಸಲ್ಲಿಕೆ ಮಾಡುವುದರಿಂದ ಸೀಟುಗಳ ಸಂಖ್ಯೆಯೂ ಸಹ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಇಎ ಮೂಲಗಳು ತಿಳಿಸಿವೆ.  2020ನೇ ಸಾಲಿನ ಸಿಇಟಿಗೆ ಒಟ್ಟಾರೆ 1.94 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ಜೆಇಇ, ಕಾಮೆಡ್​-ಕೆ ಸೇರಿದಂತೆ ಹಲವಾರು ಪರೀಕ್ಷೆಗಳ ಮೂಲಕ ವಿವಿಧ ಕಡೆ ಪ್ರವೇಶ ಪಡೆದುಕೊಳ್ಳಲಿದ್ದು, ಈ ವರ್ಷ 94,815 ವಿದ್ಯಾರ್ಥಿಗಳು ದಾಖಲೆಗಳನ್ನು ಅಪ್​ಲೋಡ್​ ಮಾಡಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
