ಬೆಂಗಳೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಶನಿವಾರ ಸಿಇಟಿ-2022ರ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದ್ದು, ಸಾವಿರಾರು ವಿದ್ಯಾರ್ಥಿಗಳ ರ‌್ಯಾಂಕ್ ಬದಲಾಗಿದೆ. ಜು.30ರಂದು ಹೊರಡಿಸಿದ್ದ ರ‍್ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ ಪಟ್ಟಿಯಲ್ಲಿ ಮೊದಲ 500 ರ್ಯಾಂಕಿಂಗ್​ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಪ್ರತಿ 10 ಸಾವಿರ ರ್ಯಾಂಕ್​ನಲ್ಲಿ 1,500 ಪುನರಾವರ್ತಿತ ವಿದ್ಯಾರ್ಥಿಗಳು ರ‌್ಯಾಂಕ್ ಗಿಟ್ಟಿಸಿಕೊಂಡಿದ್ದಾರೆ.
ಪ್ರಮುಖವಾಗಿ ಪರಿಷ್ಕೃತ ಫಲಿತಾಂಶದಲ್ಲಿ ಸಿಇಟಿ ರಿಸಲ್ಟ್ ಪ್ರಕಟವಾಗುವ ವೇಳೆಗೆ ಅಂಕಗಳನ್ನು ದಾಖಲಿಸದ 2,281 ಸಿಬಿಎಸ್​ಇ/ಐಸಿಎಸ್​ಇ ವಿದ್ಯಾರ್ಥಿಗಳಿಗೆ ರ‌್ಯಾಂಕ್ ನೀಡಲಾಗಿದೆ. ದ್ವಿತೀಯ ಪಿಯು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ 2 ಸಾವಿರ ವಿದ್ಯಾರ್ಥಿಗಳಿಗೂ ರ‌್ಯಾಂಕ್ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಕನಿಷ್ಠ 5 ಸಾವಿರ ವಿದ್ಯಾರ್ಥಿಗಳ ರ್ಯಾಂಕ್ ಪಟ್ಟಿ ಬದಲಾಗಿದೆ. ಇಂಜಿನಿಯರಿಂಗ್ ಸೀಟ್​ಗೆ 1,71, 650 ಮಂದಿ ಅರ್ಹರಾಗಿದ್ದಾರೆ.
ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಈ ಮೊದಲು ಫಲಿತಾಂಶದ ವೇಳೆ 750ನೇ ರ್ಯಾಂಕ್ ಪಡೆದಿದ್ದ ತೇಜಸ್ ಪ್ರತಾಪ್ ಎಂಬ ಸಿಬಿಎಸ್​ಇ ವಿದ್ಯಾರ್ಥಿಯು 490ನೇ ರ್ಯಾಂಕ್​ಗೆ ಜಿಗಿದಿದ್ದಾನೆ. 1,74,351 ಕೊನೇ ರ್ಯಾಂಕ್ ಆಗಿದೆ. ಸಚಿನ್ ರಾಜ್ ಎಂಬ ವಿದ್ಯಾರ್ಥಿ ಕೊನೇ ರ್ಯಾಂಕ್ ಪಡೆದಿದ್ದಾನೆ.
ಈ ಪರಿಷ್ಕೃತ ಪಟ್ಟಿಯು ಇಂಜಿನಿಯರಿಂಗ್, ಕೃಷಿ, ಯೋಗ, ನ್ಯಾಚುರೋಪಥಿ ಕೋರ್ಸ್​ಗಳಿಗೆ ಮಾತ್ರ ಅನ್ವಯವಾಗುತ್ತದೆ. ಪಶು ವೈದ್ಯಕೀಯ ಮತ್ತು ಫಾರ್ಮಸಿ ಕೋರ್ಸ್​ಗಳಿಗೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ದ್ವಿತೀಯ ಪಿಯು ಮತ್ತು 12ನೇ ತರಗತಿ ಅಂಕಗಳನ್ನು ಪರಿಗಣಿಸುವುದಿಲ್ಲ. ಹೀಗಾಗಿ, ಈ ಎರಡೂ ಕೋರ್ಸ್​ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
14 ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸ್ಥಾನ:ಕಳೆದ ವರ್ಷವೇ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಈ ವರ್ಷವೂ ಸಿಇಟಿ ಬರೆದಿದ್ದ 24 ಸಾವಿರ ಅಭ್ಯರ್ಥಿಗಳು 2021ರಲ್ಲಿ ಗಳಿಸಿದ್ದ ಅಂಕಗಳಲ್ಲಿ ಶೇ.6 ಅಂಕ ಕಡಿತಗೊಳಿಸಲಾಗಿದೆ. ಬಳಿಕ ಹಿಂದಿನ ವರ್ಷದ ಅಂಕಗಳ ಶೇ.50 ಮತ್ತು ಸಿಇಟಿಯಲ್ಲಿ ಪಡೆದ ಅಂಕಗಳ ಶೇ.50 ಪರಿಗಣಿಸಿ ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ 14 ಪುನರಾವರ್ತಿತ ವಿದ್ಯಾರ್ಥಿಗಳು ಮಾತ್ರ 500 ರಿಂದ 1,000ನೇ ರ್ಯಾಂಕ್ ಮಧ್ಯೆ ಸ್ಥಾನ ಪಡೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ವಿವರಿಸಿದ್ದಾರೆ.
ಹಾಗೆಯೇ, 501ರಿಂದ 10,000ನೇ ರ್ಯಾಂಕಿಂಗ್​ನಲ್ಲಿ 2,063 ಪುನರಾವರ್ತಿತ ಅಭ್ಯರ್ಥಿಗಳು ಮತ್ತು 10,001 ದಿಂದ 1 ಲಕ್ಷದವರೆಗಿನ ರ್ಯಾಂಕಿಂಗ್​ನಲ್ಲಿ 22,022 ಅಭ್ಯರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ. 2021ರಲ್ಲಿ ಕರೊನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಅಂಕಗಳನ್ನು ಪರಿಗಣಿಸಿ, ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ತೇರ್ಗಡೆಗೊಳಿಸಲಾಗಿತ್ತು. ಬಳಿಕ, ದ್ವಿತೀಯ ಪಿಯು ಅಂಕಗಳನ್ನು ಮಾತ್ರ ಪರಿಗಣಿಸಿ ಅವರಿಗೆ ವೃತ್ತಿಪರ ಕೋರ್ಸ್​ಗಳಿಗೆ ಪ್ರವೇಶ ಕೊಡಲಾಗಿತ್ತು. ಅಂಥವರ ಪೈಕಿ 24 ಸಾವಿರ ವಿದ್ಯಾರ್ಥಿಗಳು ಈ ವರ್ಷವೂ ಸಿಇಟಿ ಬರೆದಿದ್ದರು. ಇವರೆಲ್ಲ, ತಮ್ಮ ಸಿಇಟಿ ಅಂಕವನ್ನೂ ಪರಿಗಣಿಸಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಒಂದು ಲಕ್ಷ ರ‌್ಯಾಂಕ್ ಜಿಗಿತ:ಮೈಸೂರಿನ ಜಿ.ವಿ. ವಿಶಾಲ್ ರೆಡ್ಡಿ ಎಂಬ ವಿದ್ಯಾರ್ಥಿ ಈ ಮೊದಲು ಎಂಜಿನಿಯರಿಂಗ್​ನಲ್ಲಿ 1.30 ಲಕ್ಷ ರಾಂಕ್ ಪಡೆದಿದ್ದ. ಈಗ 26,500ಕ್ಕೆ ಜಿಗಿದಿದ್ದಾನೆ. ಅದೇ ರೀತಿ ಬಿಎಸ್ಸಿ ಕೃಷಿ ವಿಭಾಗದಲ್ಲಿ 66 ಸಾವಿರದಿಂದ 18 ಸಾವಿರ ರ್ಯಾಂಕ್ ಪಡೆದಿದ್ದಾನೆ. ಪುನರಾವರ್ತಿತ ವಿದ್ಯಾರ್ಥಿಗಳಿಗೆ 18 ಅಂಕ ಕಡಿತ ಮಾಡದಿದ್ದರೆ ಮತ್ತಷ್ಟು ರ್ಯಾಂಕ್ ಸಿಗುತ್ತಿತ್ತು ಎಂದು ವಿದ್ಯಾರ್ಥಿ ವಿಶಾಲ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಶೇ.10 ಸೀಟು ಪ್ರಸ್ತಾವನೆ:ಪುನರಾವರ್ತಿತ ವಿದ್ಯಾರ್ಥಿಗಳ ಸೇರ್ಪಡೆಯಿಂದ ಶೇ.10 ಹೆಚ್ಚುವರಿ ಸೀಟು ನೀಡುವಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿಗೆ (ಎಐಸಿಟಿಇ) ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ನಾಳೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟ:ಮೊದಲ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ಪ್ರಕ್ರಿಯೆಯು ಅ.3ರಂದು ಆರಂಭವಾಗಲಿದೆ. ಅದೇ ದಿನ ಸೀಟ್ ಮ್ಯಾಟ್ರಿಕ್ಸ್ ಕೂಡ ಪ್ರಕಟವಾಗಲಿದೆ. ಅ.7 ಅಥವಾ 8 ರಿಂದ ವಿದ್ಯಾರ್ಥಿಗಳು ಆಯ್ಕೆ ದಾಖಲಿಸುವ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಗಳಿವೆ ಎಂದು ಕೆಇಎ ಕಾರ್ಯನಿರ್ವಾ ಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
