ಬೆಂಗಳೂರುಸಿಇಟಿ ಆನ್‌ಲೈನ್ ಅರ್ಜಿ ತುಂಬುವಾಗ ಆಗುವ ತಪ್ಪುಗಳನ್ನು ನಿವಾರಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮಲ್ಲೇಶ್ವರದಲ್ಲಿರುವ ಕಚೇರಿಯಲ್ಲಿ ‘ಸಿಇಟಿ ವಿದ್ಯಾರ್ಥಿಮಿತ್ರ ಮಾಸ್ಟರ್ ಟೈನರ್ ತರಬೇತಿ’ ನೀಡಿತು.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದ 250ಕ್ಕೂ ಹೆಚ್ಚು ಪಿಯು ವಿಜ್ಞಾನ ಉಪನ್ಯಾಸಕರಿಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.ಮಾಸ್ಟರ್ ಟ್ರೈನರ್ ತರಬೇತಿ ಪಡೆದವರು ಮುಂದಿನ ಹಂತದಲ್ಲಿ ತಮ್ಮ ಜಿಲ್ಲೆಯಲ್ಲಿ ಪ್ರತಿ ಪಿಯು ವಿಜ್ಞಾನ ಕಾಲೇಜಿನ ಇಬ್ಬರು ಉಪನ್ಯಾಸಕರಿಗೆ ಅರ್ಜಿ ತುಂಬುವ ಸರಿಯಾದ ವಿಧಾನದ ಬಗ್ಗೆ ತರಬೇತಿ ನೀಡುತ್ತಾರೆ. ನಂತರ ಆ ಉಪನ್ಯಾಸಕರು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಜನವರಿ 10ಕ್ಕೆ ಮುನ್ನ ಈ ಪ್ರಕ್ರಿಯೆ ಮುಗಿಸುವ ಕಾಲಮಿತಿ ಹಾಕಿಕೊಳ್ಳಲಾಗಿದೆ. ಆ ಪ್ರಕಾರ ಎಲ್ಲರೂ ಕೆಲಸ ಮಾಡಬೇಕು ಎಂದು ಸೂಚಿಸಿದರು.
ರಾಜ್ಯ ಪಠ್ಯಕ್ರಮದ ಪಿಯು ಕಾಲೇಜುಗಳು ಅಲ್ಲದೆ, ತಮ್ಮ ಜಿಲ್ಲೆಗಳಲ್ಲಿನ ಸಿಬಿಎಸ್‌ಇ , ಐಸಿಎಸ್‌ಇ, ಐಜಿಎಸ್ಸಿ ಪಿಯು ಕಾಲೇಜುಗಳಲ್ಲಿನ ಉಪನ್ಯಾಸಕರಿಗೂ ತರಬೇತಿ ಕೂಡಬೇಕು ಎಂದು ನಿರ್ದೇಶನ ನೀಡಿದರು.
ಅಭ್ಯರ್ಥಿಗಳು ತಮ್ಮ ಹೆಸರು, ಆರ್.ಡಿ. ಸಂಖ್ಯೆ, ಪ್ರವರ್ಗ/ ಜಾತಿ ನಮೂದಿಸುವಾಗ ಮಾಡುವ ತಪ್ಪುಗಳು ಸೇರಿ ಇನ್ನಿತರ ದೋಷಗಳಿಗೆ ಕಡಿವಾಣ ಹಾಕುವುದು ಈ ತರಬೇತಿ ಉದ್ದೇಶವಾಗಿದೆ. ಅರ್ಜಿ ತುಂಬುವ ಹಂತದಲ್ಲಿ ತಪ್ಪುಗಳನ್ನು ತಡೆದರೆ ಸಿಇಟಿ ಪ್ರಕ್ರಿಯೆ ಕೂಡ ವೇಗ ಪಡೆಯುತ್ತದೆ. ಜತೆಗೆ, ಪ್ರಮಾದದ ಕಾರಣಕ್ಕಾಗಿ ಅಭ್ಯರ್ಥಿಗಳಿಗೆ ತಮ್ಮ ಇಚ್ಛೆಯ ಕೋರ್ಸ್‌ಗಳಿಗೆ ಸೀಟು ಕೈತಪ್ಪುವ ಸಾಧ್ಯತೆಯೂ ನಿವಾರಣೆಯಾಗುತ್ತದೆ ಎಂದು ತರಬೇತುದಾರರಿಗೆ ಮನವರಿಕೆ ಮಾಡಿಕೊಟ್ಟರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − six =
Remember me
