|ಸತೀಶ್ ಕಂದಗಲ್​ಪುರಬೆಂಗಳೂರು
ಗೂಡಂಗಡಿಗಳಿಂದ ಹಿಡಿದು ಬಜಾರ್, ಮಾರುಕಟ್ಟೆಗಳವರೆಗೆ ಎಲ್ಲೆಲ್ಲೂ ಆಕ್ರಮಿಸಿದ್ದ ಚೀನಾ ವಸ್ತುಗಳ ಅಬ್ಬರ ಈಗ ತಗ್ಗಿದೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ -ಚೀನಾ ಯೋಧರ ಸಂಘರ್ಷ, ಕೋವಿಡ್ ಲಾಕ್​ಡೌನ್ ನಂತರದ ಒಂದು ವರ್ಷದಲ್ಲಿ ದೇಶದಲ್ಲಿ ಸುಮಾರು ಶೇ.67 ಜನರು ಮೇಡ್ ಚೀನಾ ವಸ್ತುಗಳ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಇನ್ನೊಂದೆಡೆ, ಆತ್ಮನಿರ್ಭರ ಭಾರತ ಹಾಗೂ ಮೇಡ್ ಇನ್ ಇಂಡಿಯಾ ಯೋಜನೆಗಳು ಯಶಸ್ಸಿನತ್ತ ದಾಪುಗಾಲಿಟ್ಟಿವೆ.
ಎಲೆಕ್ಟ್ರಾನಿಕ್ಸ್ ವಸ್ತುಗಳು, ಸ್ಮಾರ್ಟ್​ಫೋನ್, ರಾಸಾಯನಿಕ, ಆಟಿಕೆಗಳು, ಟ್ಯಾಬ್ಲೆಟ್, ಗ್ಯಾಜೆಟ್ಸ್, ಔಷಧ ಇತ್ಯಾದಿ ಶೇ.60ಕ್ಕೂ ಅಧಿಕ ವಸ್ತುಗಳನ್ನು ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಚೀನಾ ಕರೊನಾ ಹಾಟ್​ಸ್ಪಾಟ್ ಎಂಬ ಸುದ್ದಿ ಬಹಿರಂಗಗೊಂಡ ಬಳಿಕ ಚೀನಾ ವಸ್ತುಗಳ ಖರೀದಿಗೆ ಭಾರಿ ಹಿನ್ನಡೆಯಾಗಿದೆ. ಚೀನಾದಿಂದ ಆಮದಾಗುತ್ತಿದ್ದ ಎಲೆಕ್ಟ್ರಾನಿಕ್ಸ್ ಉಪಕರಣಗಳ ಪ್ರಮಾಣ ಕಡಿಮೆಯಾಗಿದೆ. ಕೆಲ ವಸ್ತುಗಳ ಶೇ.30 ಬಿಡಿಭಾಗಗಳನ್ನಷ್ಟೇ ತರಿಸಿಕೊಳ್ಳಲಾಗುತ್ತಿದೆ. ಫ್ಯಾನ್, ಮಿಕ್ಸಿ, ಟಿವಿ, ಬಲ್ಬ್ ಹಾಗೂ ಆಟಿಕೆಗಳ ಉತ್ಪಾದನೆ ಭಾರತದಲ್ಲೇ ಹೆಚ್ಚಾಗಿದೆ. ಗಾರ್ವೆಂಟ್ಸ್ ಉತ್ಪನ್ನಗಳ ಆಮದು ಶೇ.1 ಹಾಗೂ ಟೆಕ್ಸ್​ಟೈಲ್ಸ್ ಉತ್ಪನ್ನಗಳ ಆಮದು ಶೇ.10ಕ್ಕಿಂತ ಕಡಿಮೆಯಾಗಿದೆ.
ಗಲ್ವಾನ್ ಸಂಘರ್ಷದ ಬಳಿಕ ಭಾರತೀಯರಿಗೆ ಚೀನಾದ ಮೇಲೆ ದ್ವೇಷ ಹೆಚ್ಚಾಗಿದೆ. ಇದರಿಂದಾಗಿಯೇ ವರ್ಷದಲ್ಲಿ ಶೇ.39 ಭಾರತೀಯ ಕುಟುಂಬಗಳು ಚೀನಾ ವಸ್ತುಗಳನ್ನು ಖರೀದಿಸುವುದಾಗಲಿ, ಬಳಸುವುದಾಗಲಿ ಮಾಡಿಲ್ಲ ಎಂಬ ವಿಚಾರ ಖಾಸಗಿ ಸಂಸ್ಥೆಯೊಂದು ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ.
| ಡಾ. ರಾಜುಕರ್ನಾಟಕ ರಾಜ್ಯ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ
ಬೇಡಿಕೆ ಇದ್ದವು
ಕಾರಣಗಳೇನು?
ವ್ಯಾಪಕ ಅಭಿಯಾನ
ಚೀನಾ ಪ್ರಾಡಕ್ಟ್ ಬ್ಯಾನ್ ಕ್ಯಾಂಪೇನ್, ಬಾಯ್ಕಾಟ್ ಚೀನಾ ಹ್ಯಾಷ್​ಟ್ಯಾಗ್ ಹೀಗೆ ಬೇರೆಬೇರೆ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ನಡೆದಿತ್ತು. ಕೇಂದ್ರ ಸರ್ಕಾರ ಕೆಲ ಚೀನಾ ಆಪ್​ಗಳನ್ನು ನಿಷೇಧಿಸಿತ್ತು. ಚೀನಾ ವಸ್ತುಗಳನ್ನು ಖರೀದಿಸಬಾರದು ಎಂದು ಚಲನಚಿತ್ರ ನಟ-ನಟಿಯರೂ ಜಾಗೃತಿ ಮೂಡಿಸಿದ್ದರು.
ಕೈಹಿಡಿದ ಆತ್ಮನಿರ್ಭರ
ಆಮದು ತೀವ್ರ ಇಳಿಕೆ:ಕೆಲವು ಸ್ಮಾರ್ಟ್ ಡಿವೈಸ್, ಬಿಡಿ ಭಾಗಗಳು, ರಾಸಾಯನಿಕ, ಔಷಧ ಇತ್ಯಾದಿ ಕೆಲವು ವಸ್ತುಗಳ ಮೇಲೆ ಭಾರತವು ಚೀನಾ ಮೇಲೆ ಅವಲಂಬಿತವಾಗಿದೆ. 2010 ರಿಂದ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಚೀನಾ ಹೊರಹೊಮ್ಮಿದೆ. 2021ರಲ್ಲಿ ಚೀನಾ ಮತ್ತು ಭಾರತದ ನಡುವಿನ ಒಟ್ಟು ವ್ಯಾಪಾರವು 125.66 ಶತಕೋಟಿ ಡಾಲರ್ ಆಗಿದೆ. ಇದು 2020ಕ್ಕೆ ಹೋಲಿಕೆ ಮಾಡಿದಲ್ಲಿ ಶೇ.40 ಅಧಿಕವಾಗಿದೆ. ಆದರೆ, 2017-18ರಲ್ಲಿ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳಿಗಿಂತ ತೀವ್ರ ಕಡಿಮೆಯಾಗಿದೆ ಎಂದು ದತ್ತಾಂಶದಿಂದ ವ್ಯಕ್ತವಾಗುತ್ತದೆ. ಚೀನಾದ ವಸ್ತುಗಳಿಗೆ ಬೆಲೆ ಮತ್ತು ಆಮದು ವೆಚ್ಚಗಳು ಹೆಚ್ಚಳವಾಗಿದ್ದು ಕಡಿಮೆ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಹೆಚ್ಚಿನ ಹಣ ಪಾವತಿಯಾಗುತ್ತಿದೆ ಎಂಬ ಅಂಶ ಬಹಿರಂಗವಾಗುತ್ತದೆ.
ಅಪ್ಪಳಿಸಿದ 4ನೇ ಅಲೆ:ಪ್ರಸ್ತುತ ಚೀನಾದಲ್ಲಿ ಕೋವಿಡ್ 4ನೇ ಅಲೆ ಆರಂಭವಾಗಿದ್ದು, ಕೆಲವು ನಗರಗಳನ್ನು ಲಾಕ್​ಡೌನ್ ಮತ್ತು ಸೆಮಿ ಲಾಕ್​ಡೌನ್ ಮಾಡಲಾಗಿದೆ. ಹೀಗಾಗಿ, ಚೀನಾ ಉತ್ಪಾದಿತ ವಸ್ತುಗಳ ಖರೀದಿಗೆ ಮತ್ತಷ್ಟು ಹಿನ್ನಡೆಯಾಗಿದ್ದರೂ, ಇದು ನೇರವಾಗಿ ಪರಿಣಾಮ ಬೀರುವುದಿಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
ಲೋಕಲ್ ಸರ್ಕಲ್ಸ್ ಸಂಸ್ಥೆ ಸಮೀಕ್ಷೆ:ಲೋಕಲ್ ಸರ್ಕಲ್ಸ್ ಸಂಸ್ಥೆಯು ದೇಶದ 309 ಜಿಲ್ಲೆಗಳಲ್ಲಿ ನೆಲೆಸಿರುವ, ಚೀನಾದ ವಸ್ತುಗಳನ್ನು ಖರೀದಿಸುವ 27,000 ಗ್ರಾಹಕರಿಂದ ಅಭಿಪ್ರಾಯ ಸಂಗ್ರಹಿಸಿದೆ. ಇವರಲ್ಲಿ ಶೇ.66 ಪುರುಷರು ಮತ್ತು ಶೇ.34 ಮಹಿಳೆಯರಾಗಿದ್ದಾರೆ. ಶ್ರೇಣಿ-1 ನಗರಗಳಲ್ಲಿ ಶೇ.48 ಮತ್ತು ಉಳಿದ ಅಭಿಪ್ರಾಯಗಳನ್ನು ಶ್ರೇಣಿ-2 ರಿಂದ ಶ್ರೇಣಿ-4 ನಗರ ಪಟ್ಟಣಗಳಲ್ಲಿ ನಡೆಸಲಾಗಿದೆ.
| ಡುಂಗ್ರಾಮಲ್ ಚೋಪ್ರಾಕರ್ನಾಟಕ ಹೊಸೈರಿ ಮತ್ತು ಗಾಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eight =
Remember me
