ಬೆಂಗಳೂರು:ಕಳ್ಳತನ ಮಾಡೋದು ಅಪರಾಧ, ಇನ್ನು ಆ ಕಳ್ಳರಿಗೆ ಗೊತ್ತಿದ್ದೂ ಆಶ್ರಯ ನೀಡೋದು ಅಕ್ಷಮ್ಯ ಅಪರಾಧ. ಆದರೆ ಇಲ್ಲೊಬ್ಬ ಭೂಪ, ಸರಗಳ್ಳರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡಿ ಸಿಕ್ಕಿಬಿದ್ದಿದ್ದಾನೆ.
ಚಿನ್ನಾಭರಣ ಆಸೆಗಾಗಿ ಸರಗಳ್ಳರಿಗೆ ಆಶ್ರಯ ನೀಡುತ್ತಿದ್ದ ಚಾಮರಾಜಪೇಟೆಯ ರಾಘವೇಂದ್ರ ಬ್ಲಾಕ್​ ನಿವಾಸಿ, ರಾಜಸ್ತಾನ ಮೂಲದ ಜಗನ್​ ಲಾಲ್​ (22)ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿರಿಪೊಲೀಸರ ದಾಳಿ ವೇಳೆ ಆ ಪುರುಷರ ಕೈಯಲ್ಲಿದ್ದ ಲೇಡಿಸ್​ ಪರ್ಸ್​ನ ರಹಸ್ಯ ಬಯಲಾಯ್ತು!
ಜಗನ್​ ಲಾಲ್​ ಈ ಮೊದಲು ಗಾಂಧಿಬಜಾರ್​ನಲ್ಲಿ ಅಂಗಡಿ ಹೊಂದಿದ್ದ. ವ್ಯವಹಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಂಗಡಿ ಮುಚ್ಚಿ ಹೋಟೆಲ್​ನಲ್ಲಿ ಸಪ್ಲೆಯರ್​ ಕೆಲಸ ಮಾಡುತ್ತಿದ್ದ.ರಾಜಾಜಿನಗರ ಪೊಲೀಸರು ಇತ್ತೀಚೆಗೆ ಇಬ್ಬರು ಹೊರ ರಾಜ್ಯದ ಸರಗಳ್ಳರನ್ನು ಗುಂಡು ಹಾರಿಸಿ ಬಂಧಿಸಿದ್ದರು. ಆರೋಪಿಗಳು ಬೆಂಗಳೂರಿಗೆ ಬಂದಾಗ ಜಗನ್​ಲಾಲ್​ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ನಗರದ ಹಲವು ಕಡೆ ಸರಗಳ್ಳತನ ನಡೆಸಿ ಜಗನ್​ಲಾಲ್​ ಮನೆಯಲ್ಲಿ ಮೂರ್ನಾಲ್ಕು ದಿನ ಉಳಿದುಕೊಂಡು ನಂತರ ಊರಿಗೆ ವಾಪಸ್​ ಆಗುತ್ತಿದ್ದೆವು. ಆಶ್ರಯ ನೀಡಿದ್ದಕ್ಕೆ ಜಗನ್​ಲಾಲ್​ ಕೂಡ ಸ್ವಲ್ಪ ಪ್ರಮಾಣದಲ್ಲಿ ಚಿನ್ನಾಭರಣ ಪಡೆಯುತ್ತಿದ್ದ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಜಗನ್​ ಲಾಲ್​ ಮನೆ ಸಮೀಪದಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕೆಲ ಸರಗಳ್ಳರು ಈತನ ಮನೆಗೆ ಹೋಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಜಗನ್​ಲಾಲ್​ನನ್ನು ಬಂಧಿಸಿದ್ದಾರೆ. ಆರೋಪಿ ಜಗಲ್​ಲಾಲ್​ ಇದುವರೆಗೂ ಎಷ್ಟು ಮಂದಿಗೆ ಆಶ್ರಯ ನೀಡಿದ್ದ. ಸರಗಳ್ಳರ ಗ್ಯಾಂಗ್​ನಲ್ಲಿ ಎಷ್ಟು ಜನ ಇದ್ದಾರೆ? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೊಬೈಲ್​ ಕಳ್ಳನ ವಿರುದ್ಧ ಹೋರಾಡಿ ಗೆದ್ದ ಕೂಲಿಕಾರನ ಮಗಳಿಗೆ ಸಿಕ್ತು ಬಂಪರ್​ ಬಹುಮಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 20 =
Remember me
