ಬೆಂಗಳೂರು :ಕೋವಿಡ್ ಸೋಂಕಿತರ ಸೇವೆಯಲ್ಲಿ‌ ಹಗಲಿರುಳೆನ್ನದೇ‌ ತೊಡಗಿಸಿಕೊಂಡಿರುವ ಕೋವಿಡ್ ವಾರಿಯರ್​ಗಳ ವಿಶ್ವಾಸ ಹೆಚ್ಚಿಸುವ ಆಶಯದಿಂದ‌ ಅವರ ಸೇವೆಗೆ ಮೀಸಲಾದ ‘ಚೈತನ್ಯ ಕೇಂದ್ರ’ವನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಇಂದಿನಿಂದ‌ ಆರಂಭಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್‌ ಹೇಳಿದ್ದಾರೆ.
ಚೈತನ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಈ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ದಾದಿಯರಿಗೆ, ವೈದ್ಯರಿಗೆ ಹಾಗೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ಸ್ವನಿಯಂತ್ರಿತ ಹವಾ (Steam) ಸೌಲಭ್ಯ, ಕಷಾಯ ಸೇವನೆ, ಹಾಗೂ ಕುಡಿಯಲು ಬಿಸಿ ನೀರನ್ನು ನಿರಂತರವಾಗಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅವರ ಸೇವೆಯನ್ನು ಗೌರವಿಸುವ ಒಂದು ಪ್ರಯತ್ನ ಇದಾಗಿದ್ದು, ಇದರಿಂದ ಸಮಾಜದಲ್ಲಿ ವಿಶ್ವಾಸ ವೃದ್ಧಿಸುವ ಕಾರ್ಯವಾದರೆ ತಮ್ಮ ಶ್ರಮ ಸಾರ್ಥಕ‌ ಎಂದಿದ್ದಾರೆ.
ಇದನ್ನೂ ಓದಿ:ಪತ್ರಕರ್ತರನ್ನು ಮುಂಚೂಣಿ ಕೋವಿಡ್​ ವಾರಿಯರ್ಸ್​ ಎಂದು ಘೋಷಿಸಿದ ಸಿಎಂ
ಮನೆಮನೆಗೆ ಆಮ್ಲಜನಕ:ಆ್ಯಂಬ್ಯುಲೆನ್ಸ್ ಸೇವೆಯ ಜೊತೆಗೆ ಸುಮಾರು 20 ಆಮ್ಲಜನಕ ಸಿಲಿಂಡರ್ಗಳ ಮೂಲಕ ಅಗತ್ಯವಿರುವ ವ್ಯಕ್ತಿಗಳಿಗೆ ಮನೆಗೇ ಆಮ್ಲಜನಕ ಪೂರೈಸುವ ಕಾರ್ಯ ಕೂಡ ಇಂದು ಪ್ರಾರಂಭವಾಗಿದೆ. ಬಾಷ್ಯಂ ವೃತ್ತದ ಬಳಿಯಿರುವ ಡಾಕ್ಟರ್ ನಾಗರಾಜ ಆಸ್ಪತ್ರೆಯಲ್ಲಿ 20 ಆಮ್ಲಜನಕ ಪೂರೈಕೆಯುಳ್ಳ ಬೆಡ್​​ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಕೇಂದ್ರದ ಕಾರ್ಯಾರಂಭವಾಗಲಿದೆ ಎಂದು ಸಚಿವರು‌ ಹೇಳಿದ್ದಾರೆ.
ಉಚಿತ ಆಂಬ್ಯುಲೆನ್ಸ್:ಇದೇ ಸಂದರ್ಭದಲ್ಲಿ ರಾಜಾಜಿನಗರ ಬಿಜೆಪಿ ಘಟಕದ ವತಿಯಿಂದ ಇಂದು ಉಚಿತ ಆ್ಯಂಬುಲೆನ್ಸ್ ಸೇವೆ ಪ್ರಾರಂಭ ಮಾಡಲಾಯಿತು. ಆಮ್ಲಜನಕ ವ್ಯವಸ್ಥೆಯೂ ಇರುವ ಈ ಆಂಬುಲೆನ್ಸ್ ಅಗತ್ಯವಿರುವವರಿಗೆ ಶೀಘ್ರ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಟ್ವಿಟರ್​ ತುಂಬಾ ’12ನೇ ತರಗತಿ ಸಿಬಿಎಸ್​ಇ ಪರೀಕ್ಷೆ ರದ್ದುಗೊಳಿಸಿ’ ಎಂಬ ಕೂಗು!

VIDEO | ಡಿಎಂಕೆ ಪಕ್ಷಕ್ಕೆ ಮುನ್ನಡೆ : ಬೀದಿಗಿಳಿದು ಸಂಭ್ರಮ ಆಚರಿಸಿದ ಬೆಂಬಲಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + ten =
Remember me
