ಬೆಂಗಳೂರು:ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಎ1 ಆರೋಪಿಯಾಗಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ (ಸೆ.15) ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಆಗಮಿಸಿದ ವೇಳೆ ಚೈತ್ರಾ ಮೂರ್ಛೆ ಹೋಗಿದ್ದರು. ಬಾಯಿಯಲ್ಲಿ ನೊರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಕೆಯ ಆರೋಗ್ಯಕ್ಕೆ ಸಂಬಂಧಪಟ್ಟ ಹೆಲ್ತ್ ಬುಲೆಟಿನ್ ಅನ್ನು ವಿಕ್ಟೋರಿಯಾ ಆಸ್ಪತ್ರೆ ಬಿಡುಗಡೆ ಮಾಡಿದೆ.
ಹೆಲ್ತ್​ ಬುಲೆಟಿನ್​ ಪ್ರಕಾರ ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ, ಎಂಆರ್​ಐ ಸ್ಕ್ಯಾನ್​​​ಗೆ ತಜ್ಞ ವೈದ್ಯರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಚೈತ್ರಾಳಿಗೆ ವೈದ್ಯರು MRI ಸ್ಕ್ಯಾನ್ ಮಾಡಲಿದ್ದಾರೆ. ಒಂದು ವೇಳೆ MRI ನಾರ್ಮಲ್ ಇದ್ದರೆ ಇಂದೇ ಚೈತ್ರಾ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
ಎಂಆರ್​​ಐ ಸ್ಕ್ಯಾನಿಂಗ್​ಗೂ ಮೊದಲು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ದಂತ ವೈದ್ಯರನ್ನು ಕರೆಸುತ್ತಿದ್ದಾರೆ. ಚೈತ್ರಾ ಹಲ್ಲಿಗೆ ಮೆಟಲ್ ಕ್ಯಾಪ್ ಹಾಕಿಸಿದ್ದಾಳೆ. ಎಂಆರ್​ಐ ಸ್ಕ್ಯಾನ್ ಮಾಡುವಾಗ ಯಾವುದೇ ಮೆಟಲ್ ಇರಬಾರದು. ಹಾಗಾಗಿ ದಂತ ವೈದ್ಯರನ್ನು ಕರೆಸಿ ಮೆಟಲ್ ಕ್ಯಾಪ್ ಅನ್ನ ತೆಗೆಸಲು ನ್ಯೂರಾಲಜಿಸ್ಟ್​ ವೈದ್ಯರು ಮುಂದಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಬಂದಿದೆ.
ಇದನ್ನೂ ಓದಿ:ಅಂಬೇಡ್ಕರ್ ಅಂತ್ಯಕ್ರಿಯೆಗೆ ರಾಜೀವ್​ ಗಾಂಧಿ ಕುಟುಂಬ 1 ಎಕರೆ ಭೂಮಿನೂ ನೀಡಿಲ್ಲ!
ಚೈತ್ರಾ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಇದುವರೆಗೂ ಒಂದು ಪುಟ ಹೇಳಿಕೆಯನ್ನೂ ದಾಖಲು ಮಾಡಲು ಸಾಧ್ಯವಾಗಿಲ್ಲ. ಅಷ್ಟು ಹೈಡ್ರಾಮಾ ಮಾಡುತ್ತಿದ್ದಾಳೆ. ನಾನೇನು ಮಾಡಿಲ್ಲ, ಎಲ್ಲವೂ ಸ್ವಾಮೀಜಿಗೆ ಗೊತ್ತು ಎಂದು ಮಾತ್ರ ಹೇಳುತ್ತಿದ್ದಾಳೆ. ಅಲ್ಲದೆ ಪ್ರತಿಯೊಂದಕ್ಕೂ ಅಳುವುದು ಮತ್ತು ಕೂಗಾಡುತ್ತಿದ್ದಾಳೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ನಿನ್ನೆ (ಸೆ. 15) ಬೆಳಗ್ಗೆ ವಿಚಾರಣೆ ವೇಳೆ ಚೈತ್ರಾ ಮೂರ್ಛೆ ತಪ್ಪಿ ಕೆಳಗೆ ಬಿದಿದ್ದು ಆಕೆಯನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಯಿತು. ಕುತ್ತಿಗೆಗೆ ವೇಲ್​ ಸುತ್ತಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಮೂರ್ಛೆ ಹೋಗಿದ್ದಾಳೆ ಎನ್ನಲಾಗಿದೆ. ಅಲ್ಲದೆ, ಆಕೆಯ ಬಾಯಿಯಲ್ಲಿ ನೊರೆಯು ಸಹ ಬಂದಿದೆ. ಚೈತ್ರಾಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಆಕೆಯ ಕುಟುಂಬಸ್ಥರು ಮಾಹಿತಿ ಸಹ ನೀಡಿದ್ದಾರೆ, ಈ ಹಿಂದೆಯೂ ಕೆಲವು ಬಾರಿ ಚೈತ್ರಾಗೆ ಫಿಟ್ಸ್​ ಕಾಣಿಸಿಕೊಂಡಿತ್ತಂತೆ. ಇದಕ್ಕೆ ಮಾತ್ರೆ ನೀಡಲಾಗಿತ್ತು. ಆದರೆ, ಆಕೆ ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದ ಮೂರ್ಛೆ ಹೋಗಿರಬಹುದೆಂದು ಹೇಳಲಾಗಿದೆ. ಈ ವಿಚಾರವನ್ನು ಚೈತ್ರಾ ಮನೆಯವರನ್ನು ಸಂಪರ್ಕ‌ ಮಾಡಿ ಸಿಸಿಬಿ ಮಾಹಿತಿ ಕಲೆಹಾಕಿದ್ದರು.
ಚೈತ್ರಾ ಬೆಳಗ್ಗೆ ಒಂದು ತಾಸು ಯೋಗ ಹಾಗೂ ಮತ್ತೊಂದು ತಾಸು ವ್ಯಾಯಾಮ ಮಾಡಿ, ತಿಂಡಿ ಮಾಡಿ ಸಿಸಿಬಿ ಕಚೇರಿಗೆ ಬಂದಿದ್ದಳು. ಕಚೇರಿಗೆ ಬರ್ತಿದ್ದಂತೆ ವಾಶ್ ರೂಂಗೆ ತೆರಳಿದ್ದ ಚೈತ್ರಾ, ತಲೆಸುತ್ತಿ ಕುಸಿದು ಬಿದ್ದಿದ್ದಾಳೆ. ಕುಟುಂಬದವರು ಹೇಳುವ ಪ್ರಕಾರ ಚೈತ್ರಾ ಕುಂದಾಪುರಗೆ ಯಾವುದೇ ಫಿಟ್ಸ್​ ಬಂದಿಲ್ಲ? ಫಿಟ್ಸ್​ ಬಂದ ರೀತಿ ನಟಿಸಿದ್ಲಾ ಚೈತ್ರಾ ಕುಂದಾಪುರ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಚೈತ್ರಾ ಬಾಯಲ್ಲಿ ನೊರೆ ಹೇಗೆ ಬಂತು ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.
ಲಾಟರಿಯಲ್ಲಿ 5 ಮಿಲಿಯನ್ ಡಾಲರ್‌ ಗೆದ್ದ, ಆದರೆ ಹೆಂಡತಿಗಾಗಿ ಖರೀದಿಸಿದ್ದು ಕಲ್ಲಂಗಡಿ, ಹೂವುಗಳನ್ನು ಮಾತ್ರ!

ನನಗೆ 15 ಗಂಡಂದಿರಿದ್ದಾರೆ ಎಂದು ಭಾವಿಸಿ ನಟಿಸಿದೆ! ಹಳೇ ಕ್ಷಣವನ್ನು ಮತ್ತೆ ಮೆಲಕು ಹಾಕಿದ ಅಮಲಾ

ಸೂರ್ಯಕಾಂತಿಯ ಪ್ರೇಮ ಗೀತೆ; ಟಗರು ಪಲ್ಯ ಚಿತ್ರದ ಎರಡನೇ ಹಾಡು ರಿಲೀಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
