ಬೆಂಗಳೂರು:ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಎ1 ಆರೋಪಿಯಾಗಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಸಿಸಿಬಿ ಪೊಲೀಸರ​ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಪೊಲೀಸರು ಇದುವರೆಗೂ ಒಂದು ಪುಟ ಹೇಳಿಕೆಯನ್ನೂ ದಾಖಲು ಮಾಡಲು ಸಾಧ್ಯವಾಗಿಲ್ಲ. ಅಷ್ಟು ಹೈಡ್ರಾಮಾ ಮಾಡುತ್ತಿದ್ದಾಳೆ. ನಾನೇನು ಮಾಡಿಲ್ಲ, ಎಲ್ಲವೂ ಸ್ವಾಮೀಜಿಗೆ ಗೊತ್ತು ಎಂದು ಮಾತ್ರ ಹೇಳುತ್ತಿದ್ದಾಳೆ. ಅಲ್ಲದೆ ಪ್ರತಿಯೊಂದಕ್ಕೂ ಅಳುವುದು ಮತ್ತು ಕೂಗಾಡುತ್ತಿದ್ದಾಳೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ವಿಚಾರಣೆ ವೇಳೆ ಚೈತ್ರಾ ಮೂರ್ಛೆ ತಪ್ಪಿ ಕೆಳಗೆ ಬಿದಿದ್ದು ಆಕೆಯನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗಿದೆ. ಕುತ್ತಿಗೆಗೆ ವೇಲ್​ ಸುತ್ತಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಮೂರ್ಛೆ ಹೋಗಿದ್ದಾಳೆ ಎನ್ನಲಾಗಿದೆ. ಅಲ್ಲದೆ, ಆಕೆಯ ಬಾಯಿಯಲ್ಲಿ ನೊರೆಯು ಸಹ ಬಂದಿದೆ. ಚೈತ್ರಾಗಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಆಕೆಯ ಕುಟುಂಬಸ್ಥರು ಮಾಹಿತಿ ಸಹ ನೀಡಿದ್ದಾರೆ, ಈ ಹಿಂದೆಯೂ ಕೆಲವು ಬಾರಿ ಚೈತ್ರಾಗೆ ಫಿಟ್ಸ್​ ಕಾಣಿಸಿಕೊಂಡಿತ್ತಂತೆ. ಇದಕ್ಕೆ ಮಾತ್ರೆ ನೀಡಲಾಗಿತ್ತು. ಆದರೆ, ಆಕೆ ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದ ಮೂರ್ಛೆ ಹೋಗಿರಬಹುದೆಂದು ಹೇಳಲಾಗಿದೆ. ಈ ವಿಚಾರವನ್ನು ಚೈತ್ರಾ ಮನೆಯವರನ್ನು ಸಂಪರ್ಕ‌ ಮಾಡಿ ಸಿಸಿಬಿ ಮಾಹಿತಿ ಕಲೆಹಾಕಿದೆ.
ಇದನ್ನೂ ಓದಿ:ಗೃಹ ಸಚಿವರ ಅಧಿಕಾರ; ಪ್ರಿಯಾಂಕ್ ಖರ್ಗೆ ಹೈಜಾಕ್; ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಚಾಟಿ
ಚೈತ್ರಾ ಬೆಳಗ್ಗೆ ಒಂದು ತಾಸು ಯೋಗ ಹಾಗೂ ಮತ್ತೊಂದು ತಾಸು ವ್ಯಾಯಾಮ ಮಾಡಿ, ತಿಂಡಿ ಮಾಡಿ ಸಿಸಿಬಿ ಕಚೇರಿಗೆ ಬಂದಿದ್ದಳು. ಕಚೇರಿಗೆ ಬರ್ತಿದ್ದಂತೆ ವಾಶ್ ರೂಂಗೆ ತೆರಳಿದ್ದ ಚೈತ್ರಾ, ತಲೆಸುತ್ತಿ ಕುಸಿದು ಬಿದ್ದಿದ್ದಾಳೆ. ಕುಟುಂಬದವರು ಹೇಳುವ ಪ್ರಕಾರ ಚೈತ್ರಾ ಕುಂದಾಪುರಗೆ ಯಾವುದೇ ಫಿಟ್ಸ್​ ಬಂದಿಲ್ಲ? ಫಿಟ್ಸ್​ ಬಂದ ರೀತಿ ನಟಿಸಿದ್ಲಾ ಚೈತ್ರಾ ಕುಂದಾಪುರ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಚೈತ್ರಾ ಬಾಯಲ್ಲಿ ನೊರೆ ಹೇಗೆ ಬಂತು ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ. ಸದ್ಯ ಚೈತ್ರಾ ಕುಂದಾಪುರಗೆ ಬಿಪಿ, ಶುಗರ್ ಸೇರಿ ಸಿಟಿ ಸ್ಕ್ಯಾನ್ ಮಾಡಿಸಲಾಗಿದೆ. ಚೈತ್ರಾ ನಾರ್ಮಲ್ ಇದ್ದಾಳೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲು!

ಪ್ಯಾರಾಗ್ಲೈಡಿಂಗ್‌ ವೇಳೆ ಕಿರುಚುತ್ತಾ ಮೂರ್ಛೆ ಹೋದ ವ್ಯಕ್ತಿ, ವೈರಲ್ ಆಯ್ತು ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + seventeen =
Remember me
