ಬೆಂಗಳೂರು:ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಯಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ಮತ್ತು ಇತರ ಆರೋಪಿಗಳು ನಿನ್ನೆ (ಸೆ.23) ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.
ಹಣ ವಂಚನೆ ಮಾಡಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂಡಿರುವ ಚೈತ್ರಾ, ಪರಪ್ಪನ ಅಗ್ರಾಹರ ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾಳೆ. ನಿದ್ದೆ ಇಲ್ಲದೇ ಚಿಂತೆಯಲ್ಲೇ ಕಣ್ಣೀರಾಕುತ್ತಾ ಇಡೀ ರಾತ್ರಿ ಕಳೆದಿದ್ದಾಳೆ. ನಿನ್ನೆ ಕೊರ್ಟ್​ನಲ್ಲೂ ಸಹ ಚೈತ್ರಾ ಕಣ್ಣೀರಿಟ್ಟಿದ್ದಳು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಜೈಲು ಪ್ರವೇಶಿಸಿದ್ದ ಚೈತ್ರಾ ಅಂಡ್​ ಗ್ಯಾಂಗ್ ಅನ್ನು ಪರಪ್ಪನ ಅಗ್ರಹಾರ ಜೈಲಿನ ಹೊಸ ಬಂಧಿಖಾನೆಗೆ ಶಿಫ್ಟ್ ಮಾಡಲಾಗಿದೆ. ಚೈತ್ರಾ ಪ್ರತ್ಯೇಕ ಕ್ವಾರಂಟೈನ್ ಸೆಲ್​ನಲ್ಲಿದ್ದಾಳೆ. ನಿನ್ನೆ ರಾತ್ರಿ ಜೈಲು ಸಿಬ್ಬಂದಿ ನೀಡಿದ ಚಪಾತಿ, ಅನ್ನ-ಸಾಂಬರ್ ಅನ್ನು ಚೈತ್ರಾ ಸೇವಿಸಿದ್ದಾಳೆ. ಇಂದು ಬೆಳಗ್ಗೆ ಜೈಲು ಸಿಬ್ಬಂದಿ ಕೊಟ್ಟ ಪಲಾವ್ ಸೇವನೆ ಮಾಡಿದ್ದಾಳೆ.
ಸದ್ಯ ಇನ್ನು 9 ದಿನ ಹೊಸ ಬಂಧಿಖಾನೆಯಲ್ಲೇ ಚೈತ್ರಾ ಉಳಿಯಲಿದ್ದಾಳೆ. ಬಳಿಕ ಹಳೆಯ ಬಂಧಿಖಾನೆಗೆ ಚೈತ್ರಾಳನ್ನು ಜೈಲು ಸಿಬ್ಬಂದಿ ಶಿಫ್ಟ್ ಮಾಡಲಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆ ನಂತರ ಸಿಬ್ಬಂದಿ ಯುಟಿಪಿ(ಅಂಡರ್ ಟ್ರೈಯಲ್ ಪ್ರಿಸಿನರ್) ಸಂಖ್ಯೆ ನೀಡಲಿದ್ದಾರೆ. ಸದ್ಯ ತಿಂಡಿ ಸೇವಿಸಿರುವ ಚೈತ್ರಾ ಕ್ವಾರಂಟೈನ್ ಸೆಲ್ ಸಪ್ಪೆ ಮೋರೆ ಹಾಕಿಕೊಂಡು ಸಮಯ ಕಳೆಯುತ್ತಿದ್ದಾಳೆ.
ಇದನ್ನೂ ಓದಿ:ಪಾಕ್ ಕ್ರಿಕೆಟಿಗರ ಪ್ರಯಾಣಕ್ಕೆ ವೀಸಾ ಸಮಸ್ಯೆ: ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮನ ವಿಳಂಬ
ನೂತನ ಜೈಲಿನಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿ ಇರದ ಹಿನ್ನೆಲೆಯಲ್ಲಿ ಆರೋಪಿ ಚೈತ್ರಾಳನ್ನು ಪರಪ್ಪನ ಅಗ್ರಹಾರದ ಮುಖ್ಯ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಕೋಟಿ ಕೋಟಿ ವಂಚನೆಯ ಪ್ರಕರಣ ತನಿಖೆ ಮುಂದುವರೆದಿದೆ. ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಮೇಲೆ ಹೆಚ್ಚು ನಿಗಾ ಇಡಬೇಕಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಯ ಸಲುವಾಗಿ ಮುಖ್ಯ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ. ಸದ್ಯ ನೂತನ ಜೈಲಿನ ಮಹಿಳಾ ಬ್ಯಾರಾಕ್​ನಲ್ಲಿ ಇತರೆ ಕೈದಿಗಳ ಜತೆ ಇದ್ದಾಳೆ.
ಇತರ ಆರೋಪಿಗಳಾದ ಗಗನ್ ಕಡೂರ್, ಪ್ರಜ್ವಲ್, ರಮೇಶ್, ಚೆನ್ನಾನಾಯ್ಕ್, ಧನರಾಜ್ ಹಾಗೂ ಶ್ರೀಕಾಂತ್ ಪ್ರತ್ಯೇಕ‌ ಪುರುಷರ ಸೆಲ್​ನಲ್ಲಿ ಇದ್ದಾರೆ. ಚೈತ್ರಾ ಹೊರೆತುಪಡಿಸಿ ಉಳಿದ ಆರೋಪಿಗಳಿಗೆ 10 ದಿನ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.
ಚೈತ್ರಾ ಕುಂದಾಪುರ ಕಾರು ಮುಧೋಳ ನಗರದಲ್ಲಿ ಪತ್ತೆ: ಹಿಂದು ಕಾರ್ಯಕರ್ತ ಕಿರಣ್ ಸಿಸಿಬಿ​ ವಶಕ್ಕೆ

ಚೈತ್ರಾ ಕುಂದಾಪುರ ಕಾರು ಮುಧೋಳ ತಲುಪಿದ್ಯಾಕೆ, ಹೇಗೆ?: ಆ ವ್ಯಕ್ತಿ ಹೇಳಿದ್ದೇನು?; ಇಲ್ಲಿದೆ ವಿವರ..

ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್​: ಬಾಯಲ್ಲಿ ನೊರೆ ಬಂದಿದ್ದರ ಹಿಂದಿನ ರಹಸ್ಯ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
