ಬೆಂಗಳೂರು:ಕಾಂಗ್ರೆಸ್​​ನವರಿಗೆ ಹಿಂದುಗಳ ಮೇಲೆ ನಿರಂತರ ದ್ವೇಷ ಇದೆ. ಜವರಲಾಲ್ ನೆಹರು ಸೇರಿದಂತೆ ಇಂದಿರಗಾಂಧಿ, ಮನಮೋಹನ್ ಸಿಂಗ್ ಕೂಡ ಹಿಂದುಗಳ ಮೇಲೆ ದ್ವೇಷ ಹೊಂದಿದ್ದರು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.
ದಿಗ್ವಿಜಯ ನ್ಯೂಸ್​ನೊಂದಿಗೆ ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಾ, ಹಿಂದುಗಳ ದೇವಸ್ಥಾನದ ದುಡ್ಡನ್ನು ಕಾಂಗ್ರೆಸ್ ನಾಯಕರು ಮುಸ್ಲಿಮರಿಗೆ ಕೊಡುತ್ತಿದ್ದರು. ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷಗಳು ಹಿಂದಿನಿಂದಲೂ ದ್ವೇಷ ಸಾಧಿಸುತ್ತಾ ಬಂದಿದೆ ಎಂದು ಹೇಳಿದರು.
ಹಿಂದು ಕಾರ್ಯಕರ್ತರ ಹತ್ಯೆ ನಡೆದಾಗ ಏನೂ ಮಾತನಾಡದೆ ಸುಮ್ಮನಿರುವ ಕಾಂಗ್ರೆಸ್ ನಾಯಕರು, ಮುಸ್ಲಿಂ ಯುವಕರು ಹತ್ಯೆಯಾದಾಗ ಮನೆಗೆ ಹೋಗಿ ಹಣ ಕೊಟ್ಟು ಬರುತ್ತಾರೆ. ಕಾಂಗ್ರೆಸ್​ನವರು ಹಿಂದುಗಳನ್ನು ಎರಡನೇ ದರ್ಜೆಯ ಸ್ಥಾನಮಾನದಲ್ಲಿ ನೋಡುತ್ತಿದ್ದಾರೆ ಎಂದು ಟೀಕಿಸಿದರು.
ನಮ್ಮ ರಕ್ಷಣಗೆಂದು ತಂಡ ಕಟ್ಟಿಕೊಂಡಿದ್ದರೆ, ಆ ತಂಡವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿರುವ ಕಾಂಗ್ರೆಸ್​​​ಗೆ ಏನೆಂದು ಹೇಳಬೇಕು? ಹಿಂದುಗಳ ಮೇಲೆ ಕಾಂಗ್ರೆಸ್ ದೌರ್ಜನ್ಯ ಮಾಡುತ್ತಿದೆ. ಇವತ್ತು ಹನುಮಾನ್ ಚಾಲಿಸ್ ಮಂತ್ರ ಪಠಣ ಮಾಡುತ್ತೇವೆ. ಈ ಅಭಿಯಾನ ಇವತ್ತಿಗೆ ಮಾತ್ರ ಎಂದು ಹೇಳಿದರು.
ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರದಂತೆ ನಾವು ನೋಡಿಕೊಳ್ಳುತ್ತೇವೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ನಾಳೆಯಿಂದ ಮನೆಮನೆಗೆ ತೆರಳಿ ಅಭಿಯಾನ ಆರಂಭಿಸುತ್ತೇವೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಅಂತೆಯೇ ಬಜರಂಗಳವನ್ನು ನಿಷೇಧ ಮಾಡಲು ಆಗುವುದಿಲ್ಲ. ಮುಂದಿನ ಆರು ದಿನಗಳಲ್ಲಿ ಹಿಂದುಗಳು ಏನೆಂಬುದನ್ನು ತೋರಿಸುತ್ತೇವೆ ಎಂದು ಚಕ್ರವರ್ತಿ ಸೂಲಿಬೆಲೆ ಸವಾಲೆಸೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − fourteen =
Remember me
