ಬಾಗಲಕೋಟೆ:ಪಿಎಫ್​ಐ ಮೇಲೆ ಎನ್​ಐಎ ದಾಳಿಯಾದಾಗಲೇ, ಮುಂದಿನ ದಿನಗಳಲ್ಲಿ ಪಿಎಫ್ಐ ಕುರಿತಂತೆ ಹೊಸ ಹೊಸ ಸುದ್ದಿಗಳು ಬರುತ್ತವೆ ಎಂದು ಹೇಳಿದ್ದೆ. ಪಿಎಫ್ಐ ವಾಟ್ಸಪ್ ಗ್ರೂಪ್ ಅಡ್ಮಿನ್ ಪಾಕಿಸ್ತಾನದವರು. ಹೀಗಾಗಿ ಹೊಸದನ್ನು ಪಿಎಫ್​ಐನಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು, ರಾಮ ಮಂದಿರಕ್ಕೆ ಬಾಂಬ್ ಇಡ್ತೀವಿ ಎಂಬ ಪಿಎಫ್​ಐ ಸುದ್ದಿ ವಿಚಾರವಾಗಿ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.
170ಕ್ಕೂ ಹೆಚ್ಚು ಬೇರೆ ಬೇರೆ ದೇಶದ ಜನರು ಭಾರತವನ್ನು ಒಡೆಯಲು ಪ್ರಯತ್ನ ಪಟ್ಟರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ 176 ಪ್ರಕರಣದಿಂದ 1600 ಕಾರ್ಯಕರ್ತರ ಹೆಸರು ತೆಗೆದು, ಬಿ ರಿಪೋರ್ಟ್ ಸಲ್ಲಿಸಿ ಮನೆಗೆ ಕಳುಹಿಸಿದರು. ಭಾರತವನ್ನು ಒಡೆಯಲು ಸಂಚು ರೂಪಿಸಿದವರನ್ನು ಕರೆತಂದು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಸೂಲಿಬೆಲೆ ಟೀಕಿಸಿದ್ದಾರೆ.
ಪಿಎಫ್ಐ ಬಂಡವಾಳ ಹೊರಗೆ ಬಂದಾಗ ನೀವು ಏನು ಮಾತಾಡುತ್ತೀರಿ ಎಂಬ ಪ್ರಶ್ನೆ ನಾವು ಕೇಳಬೇಕಿದೆ. ಭಾರತದಲ್ಲಿ ಅಸ್ಥಿರತೆ ಉಂಟು ಮಾಡಬೇಕೆಂದು ನಿರಂತರವಾಗಿ ಇಂತಹ ಕೃತ್ಯ ಮಾಡುತ್ತಿದ್ದಾರೆ. ರಾಮಮಂದಿರಕ್ಕೆ ಬಾಂಬ್ ಇಡೋದು ಇವರ ನಿರಂತರ ಪ್ರಕ್ರಿಯೆಯಲ್ಲಿ ಒಂದು. ಅವರು ರಾಮಮಂದಿರಕ್ಕೆ ಮಾತ್ರ ನಿಲ್ಲಲ್ಲ, ಹೀಗೆ ಬಿಟ್ರೆ ಕಾಶಿ ಕಾರಿಡಾರ್​ ಒಡೆಯುತ್ತೇವೆ ಎಂದು ಹೇಳುತ್ತಾರೆ.
ಹಳೆಯ ಪೀಳಿಗೆಯ ಹಿಂದು-ಮುಸಲ್ಮಾನರು ಬಾಂಧವ್ಯ ಚೆನ್ನಾಗಿ ಇಟ್ಟುಕೊಂಡಿದ್ದರು. ಹೊಸ ಪೀಳಿಗೆಯ ಮುಸಲ್ಮಾನರಿಗೆ ಹಿಂದು ಸಂಸ್ಕೃತಿ, ಭಾರತೀಯ ಸಂಸ್ಕೃತಿ, ಸಭ್ಯತೆ ಕಂಡರೆ ಆಗುತ್ತಿಲ್ಲ. ಪಾಕಿಸ್ತಾನ ಜಿಂದಾಬಾದ್ ಎನ್ನುವುದು ಹಲವು ವರ್ಷಗಳಿಂದ ಪಿಎಫ್ಐನಂತಹ ಸಂಘಟನೆಗಳು ಹುಟ್ಟು ಹಾಕಿರುವ ಅಂಶಗಳು. ಹೀಗಾಗಿ ಎನ್ಐಎ ಭೇದಿಸಬೇಕಾಗಿರುವುದು ಬಹಳಷ್ಟಿದೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
