ಮಂಡ್ಯ:ರಾಜ್ಯಾವ್ಯಾಪಿ ನಡೆಯುತ್ತಿರುವ ಕಾವೇರಿ ಹೋರಾಟದ ಕುರಿತು ಮಂಡ್ಯದಲ್ಲಿ ಮಾತನಾಡಿದ ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, “ಪ್ರತಿವರ್ಷ ಕಾವೇರಿ ನದಿ ಸ್ವಚ್ಛಗೊಳಿಸುತ್ತೇವೆ. ಕಾವೇರಿ ಹೋರಾಟಕ್ಕೆ ಮಾತ್ರ ಬರುವ ಜನರಲ್ಲ ನಾವು, ಅದರ ಉಳಿವಿಗಾಗಿಯು ನಿರಂತರವಾಗಿ ಹೋರಾಟ ಮಾಡ್ತಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಚ್ಚರಿಯಾದ್ರೂ ಇದು ಸತ್ಯ: ನೋಡ ನೋಡುತ್ತಿದ್ದಂತೆ ಹೂವು ನುಂಗಿದ ಗಣೇಶನ ಮೂರ್ತಿ! ವಿಡಿಯೋ ವೈರಲ್​
“ಕಾವೇರಿ ಕರ್ನಾಟಕ, ತಮಿಳುನಾಡು ಇಬ್ಬರಿಗೂ ಸೇರಿದ್ದು, ಬರಗಾಲ ಬಂದಾಗ ಕಾವೇರಿ ಸಮಸ್ಯೆ ಶುರುವಾಗುತ್ತದೆ. ಸಮಸ್ಯೆ ಬಂದಾಗ ಎರಡು ರಾಜ್ಯಗಳು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆದ್ರೆ, ದುರದೃಷ್ಟಕರ ಪ್ರಾಧಿಕಾರ ಹೇಳುವ ಮುನ್ನವೇ ನೀರು ಹರಿಸಿದ್ದಾರೆ. ಕನ್ನಡದ ಮಣ್ಣಿನ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಳ್ಳಲು ಆಗುವುದಿಲ್ಲ” ಎಂದು ಹೇಳಿದರು.
“ಇಬ್ಬರ ನಡುವೆ ಜಗಳ ನಡೆದರೆ ಪ್ರಧಾನಿಗಳು ಬಿಡಿಸೋಕೆ ಬರಬೇಕು. ಆದ್ರೆ, ಇಲ್ಲಿ ಜಗಳವೆ ಆಗಿಲ್ಲ. ಇನ್ನೂ ಪ್ರಧಾನಿ ಹೇಗೆ ಬರಲು ಸಾಧ್ಯ?ತಮಿಳುನಾಡು ನೀರು ಕೇಳುವ ಮುನ್ನವೇ ಕರ್ನಾಟಕ ಸರ್ಕಾರ ನೀರು ಹರಿಸಿದೆ. ಇಬ್ಬರು ಸೆಟಲ್ ಆಗಿರುವಾಗ ಯಾರು ಮಧ್ಯಪ್ರವೇಶ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಪ್ರಧಾನಿ ಮಧ್ಯಸ್ಥಿಕೆಗೆ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಾರೆ. ರಾತ್ರೋ ರಾತ್ರಿ ನೀರು ಬಿಟ್ಟು, ಮೋದಿ ಅವರನ್ನು ಕರೆದರೆ ಹೇಗೆ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್​ ಕುಡಿಯಿರಿ, ಈ ಎಲ್ಲಾ ರೋಗದಿಂದ ಮುಕ್ತಿ ಪಡೆಯಿರಿ
“ಎಲ್ಲಿವರೆಗೂ ಮಗು ಅಳುವುದಿಲ್ಲ, ಅಲ್ಲಿಯವರೆಗೆ ತಾಯಿ ಹಾಲು ಕೊಡುವುದಿಲ್ಲ. ಅದಕ್ಕೆ ನಾವೂ ಇಂದು ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಿಮ್ಮ ದೋಸ್ತಿ, ಮೈತ್ರಿ ಉಳಿಸಿಕೊಳ್ಳಲು ನೀರು ಬಿಡುತ್ತಿದ್ದೀರಾ” ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾವೇರಿ ಕಿಚ್ಚು; ನಾವೆಲ್ಲರೂ ಇಲ್ಲಿ ಐದು ನಿಮಿಷ ಕುಳಿತರೆ ಸಮಸ್ಯೆ ಬಗೆಹರಿಯುತ್ತಾ?: ನಟ ಶಿವರಾಜ್​ಕುಮಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
