ಬೆಂಗಳೂರು:ಪತ್ರಿಕೋದ್ಯಮದಲ್ಲಿ ಮಹಿಳೆಯರಿಗೆ ಹಲವು ಸಮಸ್ಯೆಗಳ ಜತೆಗೆ ತಂತ್ರಜ್ಞಾನದ ಸವಾಲುಗಳು ಎದುರಾಗಿದ್ದು, ಧೃತಿಗೆಡದೆ ಸ್ವೀಕರಿಸ ಬೇಕು ಎಂದು ಹಿರಿಯ ಪತ್ರಕರ್ತೆ ಡಾ. ವಿಜಯಾ ಸಲಹೆ ನೀಡಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬುಧವಾರ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಮಹಿಳೆ: ಹೊಸ ಸವಾಲುಗಳು’ ವಿಷಯ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಸುಲಭದಲ್ಲಿ ಕೆಲಸ ಸಿಗುವು ದಿಲ್ಲ. ಸಿಕ್ಕರೂ ಎದುರಾಗುವ ಸಮಸ್ಯೆಗಳು ಬಹಳಷ್ಟಿವೆ. ವೃತ್ತಿಯ ಜತೆಗೆ ಕುಟುಂಬ ನಿರ್ವಹಣೆ ಜವಾಬ್ದಾರಿಯೂ ಇರುತ್ತದೆ. ಇವುಗಳಿಂದ ಒತ್ತಡ ಸಹಜ. ಆದರೆ ಯಾವುದಕ್ಕೂ ಅಳುಕದೇ ದಿಟ್ಟತನದಿಂದ ಮುಂದೆ ಸಾಗಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಎನ್. ಭೃಂಗೀಶ್ ಮಾತನಾಡಿ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುತ್ತಿರುವ ತೊಂದರೆಗಳನ್ನು ನಿಯಂತ್ರಿಸಲು ಪ್ರತಿ ಇಲಾಖೆಯಲ್ಲಿಯೂ ಪ್ರತ್ಯೇಕ ಘಟಕ ಪ್ರಾರಂಭಿಸಬೇಕು. ತಿಂಗಳಿಗೊಂದು ಸಭೆ ನಡೆಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಬೇಕು ಎಂದರು.
ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖಸ್ಥ ಪ್ರೊ. ಓಂಕಾರ ಕಾಕಡೆ, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಸಿದ್ದರಾಜು, ಕಾರ್ಯದರ್ಶಿ ಸಿ. ರೂಪಾ, ಭಾರತೀಯ ವಿದ್ಯಾ ಭವನದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶ್ರೀಧರಮೂರ್ತಿ ಉಪಸ್ಥಿತರಿದ್ದರು. ಅಕ್ಕಮಹಾದೇವಿ ಮಹಿಳಾ ವಿವಿ ಹೊರತಂದಿರುವ ‘ಮಹಿಳಾ ಧ್ವನಿ’ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಹಲವು ಸಮಸ್ಯೆ ಎದುರಿಸುತ್ತಿದ್ದಾರೆ:ಮಾಧ್ಯಮದಲ್ಲಿ ಮಹಿಳಾ ವಿಷಯಗಳ ವ್ಯಾಪ್ತಿ ಶೇ.5 ಮಾತ್ರ ಇದೆ. ಪ್ರಾದೇಶಿಕ ಮಾಧ್ಯಮಗಳಲ್ಲಿ ಪತ್ರಕರ್ತೆಯರ ಸಂಖ್ಯೆ ಕಡಿಮೆ ಇದೆ ಎಂದು ಎಂದು ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ನ ಸ್ಥಾನಿಕ ಸಂಪಾದಕಿ ಸಾಂತ್ವನಾ ಭಟ್ಟಾಚಾರ್ಯ ಹೇಳಿದರು. ವಿದ್ಯುನ್ಮಾನ ಮಾಧ್ಯಮದಲೂ ಪತ್ರಕರ್ತೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ ಇದು ಹೊರಜಗತ್ತಿಗೆ ಕಾಣಿಸುವುದಿಲ್ಲ ಎಂದು ತಿಳಿಸಿದರು.
ಬ್ರಿಟೀಷರ ಸಾಮ್ರಾಜ್ಯಶಾಹಿ ವಿರೋಧಿಸಲು ಹಾಗೂ ಜನರಲ್ಲಿ ರಾಷ್ಟ್ರಪ್ರಜ್ಞೆ ಮೂಡಿಸಲು ಹುಟ್ಟಿಕೊಂಡ ಪತ್ರಿಕೋದ್ಯಮದಲ್ಲಿ ಇತರೆ ಕ್ಷೇತ್ರಗಳಂತೆಯೇ ಸಮಸ್ಯೆಗಳು ಹಾಗೂ ಸವಾಲುಗಳು ಮುಂದುವರಿದುಕೊಂಡು ಬಂದಿದೆ. ಅವನ್ನು ದಿಟ್ಟತನದಿಂದ ಎದುರಿಸಬೇಕು.
| ಡಾ. ಆರ್. ಪೂರ್ಣಿಮಾ ಹಿರಿಯ ಪತ್ರಕರ್ತೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + twelve =
Remember me
