ಹಾಸನ:ನಗರದ ಸಂತೆಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆಗೆ ಅತಿಥಿಯಾಗಿ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಆಗಮಿಸಿದ್ದು, ನೆರೆದಿದ್ದ ಜನರಿಗೆ ಸಂಸದ ಪ್ರಜ್ವಲ್ ರೇವಣ್ಣ, ಜಿಲ್ಲಾ ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ ಅವರ ದರ್ಶನ ಜೊತೆ ಜೊತೆಯಾಗಿಯೇ ಆಗಿದೆ. ಈ ಸಂದರ್ಭದಲ್ಲಿ ರೇವಣ್ಣ ಅವರ ನಿವಾಸಕ್ಕೆ ದರ್ಶನ್​ ಭೇಟಿ ನೀಡಿ ಪ್ರಜ್ವಲ್​-ಭವಾನಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅಚ್ಚರಿಯನ್ನೂ ಮೂಡಿಸಿದರು.
ಲೋಕಸಭೆ ಚುನಾವಣೆ ವೇಳೆ ಸಂಸದೆ ಸುಮಲತಾ ಪರ ಪ್ರಚಾರದಲ್ಲಿ ತೊಡಗಿಕೊಂಡು ನಿಖಿಲ್ ಸೋಲಿಗೆ ಕಾರಣವಾಗಿದ್ದ ದರ್ಶನ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದರು. ಹೀಗಾಗಿ ದೇವೇಗೌಡರ ಕುಟುಂಬ ಹಾಗೂ ದರ್ಶನ್ ನಡುವಿನ ಸಂಬಂಧ ಹದಗೆಟ್ಟಿತ್ತು.
ಹೀಗಿರುವಾರ ಪ್ರಜ್ವಲ್ ರೇವಣ್ಣ ದರ್ಶನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಲ್ಲದೆ, ಅವರೊಂದಿಗೆ ಸ್ನೇಹಪರವಾಗಿ ನಡೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಕಾರಿನಲ್ಲಿಯೇ ದರ್ಶನ್ ಅವರನ್ನು ಮನೆಗೆ ಕರೆತಂದ ಪ್ರಜ್ವಲ್, ಅವರೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಿದರು. ಭವಾನಿ ರೇವಣ್ಣ ಹಾಗೂ ಡಾ.ಸೂರಜ್ ಸಹ ದರ್ಶನ್ ಅವರನ್ನು ಆತ್ಮೀಯತೆಯಿಂದ ಮಾತನಾಡಿಸಿದರು.
ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು:ಸಂಸದರ ನಿವಾಸದಲ್ಲಿ ದರ್ಶನ್ ಇರುವ ವಿಷಯ ತಿಳಿದ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ಅಕ್ಕಪಕ್ಕದ ಕಟ್ಟಡಗಳು, ಕಾಂಪೌಂಡ್ ಏರಿ ನಿಂತು ನೆಚ್ಚಿನ ನಟನ ಪರ ಘೋಷಣೆ ಕೂಗಿದರು. ಹೀಗಿದ್ದರೂ ದರ್ಶನ್ ಒಮ್ಮೆ ಮಾತ್ರ ಮನೆಯಿಂದ ಹೊರ ಬಂದು ಅಭಿಮಾನಗಳತ್ತ ಕೈಬೀಸಿದರು.
ನಮ್ಮಿಬ್ಬರ ಸ್ನೇಹ ಎಂಟು ವರ್ಷಗಳದ್ದು, ಇದಕ್ಕೆ ರಾಜಕೀಯ ಬಣ್ಣ ಬೇಡ, ಕೆಲವರು ರಾಜಕೀಯ ಬಣ್ಣ ಕಟ್ಟುವ ಮಾತನಾಡಿದ್ದು ನಮಗೆ ಗೊತ್ತಾಗಿದೆ. ಆದರೆ ಸ್ನೇಹವೇ ಬೇರೆ ರಾಜಕೀಯವೇ ಬೇರೆ. ಅದಕ್ಕೂ ಮೀರಿದ್ದು ನಮ್ಮ ಸ್ನೇಹ ಎಂದು ದರ್ಶನ್​ ಜತೆಗಿನ ಒಡನಾಟದ ಬಗ್ಗೆ ಪ್ರಜ್ವಲ್​ ಹೇಳಿಕೊಂಡರು. ನಾನು ಯಾವುದೇ ರಾಜಕೀಯ ಲಾಭಕ್ಕೆ ದರ್ಶನ್ ಅವರನ್ನು ಈ ಕಾರ್ಯಕ್ರಮದಲ್ಲಿ ಬಳಸಿಕೊಂಡಿಲ್ಲ ಎಂದೂ ಪ್ರಜ್ವಲ್​ ಹೇಳಿದರು. ನಮ್ಮ ಪ್ರಜ್ವಲ್ ರೇವಣ್ಣ ಅವರು ಫಸ್ಟ್ ಟೈಂ ಕರೆದಿದ್ದಾರೆ ಹೀಗಾಗಿ ಬಂದಿದ್ದೇನೆ ಎಂದು ದರ್ಶನ್​ ಹೇಳಿದರು. ಹಾಸನದಲ್ಲಿ ಯಂಗ್ ಎಂಪಿಯನ್ನು ಆರಿಸಿದ್ದೀರಿ, ನಿಜಕ್ಕೂ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿ ಎಂದರು ದರ್ಶನ್​.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
