ಹಾಸನ:ಸಂಸದ ಪ್ರಜ್ವಲ್ ರೇವಣ್ಣ ಅವರು ಹಾಸನದಲ್ಲಿ ಇಂದು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಆಗಮಸಿ, ನೆರೆದಿದ್ದ ಅಪಾರ ಅಭಿಮಾನಿಗಳನ್ನು ಖುಷಿ ಪಡಿಸಿದರು. ಮಾತ್ರವಲ್ಲ ಮಹಿಳೆಯರ ಕುರಿತು ತಮ್ಮ ಅನಿಸಿಕೆಗಳನ್ನೂ ಹೇಳಿಕೊಂಡರು.
ಸಮಾರಂಭದಲ್ಲಿ ಮಾತನಾಡುತ್ತ ತಮ್ಮ ತಾಯಿಯ ತ್ಯಾಗವನ್ನು ಜ್ಞಾಪಿಸಿಕೊಂಡ ನಟ ದರ್ಶನ್, ಬೆಳಗ್ಗೆ ಎದ್ದರೆ ರಾತ್ರಿ ಮಲಗುವವರೆಗೂ ಅಮ್ಮನೇ ತಲೆಯಲ್ಲಿ ಇರುತ್ತಾಳೆ. ಇದು ಎಲ್ಲ ಗಂಡು ಮಕ್ಕಳಿಗೂ ಅನ್ವಯ ಎಂದರು. ನನ್ನ ತಾಯಿ ಹುಟ್ಟಿದ್ದು ಎಲ್ಲೋ, ತಂದೆ ಹುಟ್ಟಿದ್ದು ಎಲ್ಲೋ, ಆದ್ರೆ ಅವರಿಬ್ಬರು ಒಂದಾದರು, ನಮಗೆ ಜನ್ಮ ನೀಡಿದರು, ನನ್ನ ತಂದೆಗೆ ಕಿಡ್ನಿ ಫೇಲ್ಯೂರ್​ ಆದಾಗ ನನ್ನ ಅಮ್ಮ ತಂದೆಗೆ ಒಂದು ಕಿಡ್ನಿ ನೀಡಿದರು ಎಂಬುದನ್ನೆಲ್ಲ ನೆನಪಿಸಿಕೊಂಡ ದರ್ಶನ್​, ಹೆಣ್ಣು ಎಲ್ಲ ಕಡೆಯೂ ಇರುತ್ತಾಳೆ, ನಾವೆಲ್ಲ ಸದಾ ಅವರ ಋಣದಲ್ಲೇ ಇರ್ತೀವಿ. ಹೀಗಾಗಿ ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯರಿಗೆ ವಿಷ್ ಮಾಡಬೇಕಂತಿಲ್ಲ ಎಂದು ಹೇಳಿದರು.
ಹಾಸನದಲ್ಲಿಂದು ಮಹಿಳಾ ದಿನಾಚರಣೆ; ಅಚ್ಚರಿ ಮೂಡಿಸಿದ ನಟ ದರ್ಶನ್​ ಆಗಮನ!

ಹುಡುಗಿಯ ಹುಡುಗಾಟಕ್ಕೆ ಕೆರಳಿದ ಆಡು; ಹಿಂದಿನಿಂದ ಬಿತ್ತೊಂದು ಡಿಚ್ಚಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + two =
Remember me
