ಬೆಂಗಳೂರು:ಕರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಲದ ಪ್ರಮಾಣ ವನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದ್ದರೂ ಷರತ್ತುಗಳನ್ನು ಪೂರೈಸಬೇಕಾದ ಅಗ್ನಿಪರೀಕ್ಷೆ ಈಗ ಸರ್ಕಾರಕ್ಕೆ ಎದುರಾಗಿದೆ. ಮೊದಲೇ ಆರ್ಥಿಕ ಕುಸಿತದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಕರೊನಾಘಾತ ತಟ್ಟಿದ ಪರಿಣಾಮ ಸಂಪನ್ಮೂಲ ಸಂಗ್ರಹ ಕಷ್ಟವಾಗಿದೆ. ಆದ್ದರಿಂದಲೇ ಕೇಂದ್ರ ಸರ್ಕಾರ ರಾಜ್ಯಗಳ ಸಾಲದ ಪ್ರಮಾಣವನ್ನು ಜಿಎಸ್​ಡಿಪಿಯ ಶೇ. 3 ರಿಂದ 5ಕ್ಕೆ ಹೆಚ್ಚಳ ಮಾಡಿದೆ. ಆದರೆ ಶೇ.2 ಹೆಚ್ಚುವರಿ ಸಾಲ ಮಾಡುವುದಕ್ಕೆ ಒಂದಷ್ಟು ಷರತ್ತು ಹಾಕಿರುವುದು ಸರ್ಕಾರಕ್ಕೆ ತಲೆ ನೋವು ತರಿಸಿದೆ.
ಹೆಚ್ಚುವರಿ ಸಾಲವೆಷ್ಟು?:ರಾಜ್ಯ ಸರ್ಕಾರ ಈ ವರ್ಷ ಬಜೆಟ್​ನಲ್ಲಿ 53214.13 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿತ್ತು. ಅದರಲ್ಲಿ ಆರ್​ಬಿಐನ ಬಹಿರಂಗ ಮಾರುಕಟ್ಟೆಯಿಂದ 49573 ಕೋಟಿ ರೂ.ಗಳಾಗಿದೆ. ಕೇಂದ್ರ ಸರ್ಕಾರ, ಎನ್​ಸಿಡಿಸಿ, ಆರ್​ಐಡಿಎಫ್ ಹಾಗೂ ಇತರ ಮೂಲಗಳಿಂದ 3641.13 ಕೋಟಿ ರೂ. ಸಾಲ ಪಡೆಯುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಜಿಎಸ್​ಡಿಪಿಯ ಶೇ.2ರಷ್ಟು ಹೆಚ್ಚುವರಿ ಸಾಲ ಮಾಡಲು ಅವಕಾಶ ಸಿಕ್ಕಿರುವುದರಿಂದ 40 ಸಾವಿರ ಕೋಟಿ ರೂ.ಗಳು ಹೆಚ್ಚುವರಿಯಾಗಿ ಆರ್​ಬಿಐನಿಂದ ಸಾಲ ಪಡೆಯುವ ಅವಕಾಶ ಸಿಕ್ಕಿದೆ.
ಕೇಂದ್ರದ ಸೂಚನೆ ಏನು?
ಹೆಚ್ಚುವರಿಯಾಗಿ ಲಭ್ಯವಾಗುವ 40 ಸಾವಿರ ಕೋಟಿ ರೂ.ಗಳ ಸಾಲ ಪಡೆಯಬೇಕೆಂದರೆ ಕೇಂದ್ರ ಸರ್ಕಾರ ವಿಧಿಸಿರುವ ನಾಲ್ಕು ಸುಧಾರಣೆಗಳಲ್ಲಿ ಮೂರನ್ನು ಪೂರೈಸಲು ಒಪ್ಪಿಗೆ ನೀಡಬೇಕಾಗಿದೆ. ಇವುಗಳನ್ನು ಪೂರೈಸದಿದ್ದರೆ ಕೇವಲ 10 ಸಾವಿರ ಕೋಟಿ ರೂ.ಗಳನ್ನು ಮಾತ್ರ ಹೆಚ್ಚುವರಿ ಸಾಲ ಪಡೆಯಬಹುದು. ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ಶೇ.2ರ ಪೈಕಿ ಯಾವುದೇ ಷರತ್ತು ಇಲ್ಲದೆ ಶೇ.0.5 ಸಾಲ ಪಡೆಯಲು ಅವಕಾಶ ಇದೆ. ಕೇಂದ್ರ ಸೂಚಿಸಿರುವ ಸುಧಾರಣೆಗಳಲ್ಲಿ ನಾಲ್ಕರಲ್ಲಿ ಮೂರನ್ನು ಪೂರೈಸುವುದಾಗಿ ಲಿಖಿತವಾಗಿ ತಿಳಿಸಿದರೆ ಶೇ. 0.5 ಸಾಲಕ್ಕೆ ಅವಕಾಶ ಇದೆ. ಮೂರು ಸುಧಾರಣೆಗಳನ್ನು ಜಾರಿಗೆ ತಂದರೆ ಉಳಿದ ಶೇ.1 ಸಾಲ ಪಡೆಯಬಹುದು.
ಏನೇನು ಸುಧಾರಣೆ:ನಗರಾಭಿವೃದ್ಧಿ, ಇಂಧನ, ಸಾರ್ವಜನಿಕ ವಿತರಣಾ ಪದ್ಧತಿ ಹಾಗೂ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್​ನಲ್ಲಿ ಕೆಲವೊಂದು ಸುಧಾರಣೆ ತರಲು ಸೂಚನೆ ನೀಡಿದೆ. ಆದರೆ, ಈ ಸುಧಾರಣೆಗಳ ಅನುಷ್ಠಾನಕ್ಕೆ ಮುಂದಾದರೆ ಸಾರ್ವಜನಿಕ ವಿರೋಧವೂ ಎದುರಾಗಲಿದೆ. ಆದ್ದರಿಂದಲೇ ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿದೆ.
ಎಷ್ಟಿದೆ ಜಿಎಸ್​ಡಿಪಿ?
ರಾಜ್ಯದ ಒಟ್ಟಾರೆ ಉತ್ಪನ್ನ ದರ (ಜಿಎಸ್​ಡಿಪಿ) 2019-20ರಲ್ಲಿ 1698685 ಕೋಟಿ ರೂ.ಗಳಿದ್ದರೆ, 2020-21ನೇ ಸಾಲಿಗೆ ಅದು 1805742 ಕೋಟಿ ರೂ.ಗಳಾಗಬಹುದೆಂದು ಅಂದಾಜು ಮಾಡಲಾಗಿದೆ.
ಸಾಲದ ಪ್ರಮಾಣ?
ರಾಜ್ಯ ಸರ್ಕಾರ ಈ ಸಾಲಿನಲ್ಲಿ 53214.13 ಕೋಟಿ ರೂ.ಗಳ ಸಾಲ ಮಾಡಲು ನಿರ್ಧರಿಸಿತ್ತು. ಇದರಿಂದ ಈ ಹಣಕಾಸು ವರ್ಷದ ಕೊನೆಗೆ ಸಾಲದ ಪ್ರಮಾಣ 368692 ಕೋಟಿ ರೂ.ಗಳಾಗಬಹುದೆಂದು ಅಂದಾಜಿಸಲಾಗಿತ್ತು. ಹೆಚ್ಚುವರಿ 40 ಸಾವಿರ ಕೋಟಿ ರೂ.ಸಾಲ ಪಡೆದರೆ 408692 ಕೋಟಿ ರೂ.ಗಳಾಗುತ್ತದೆ. ಈ ಸಾಲಿನಲ್ಲಿ ಜಿಎಸ್​ಡಿಪಿ ಕಡಿಮೆಯಾದರೆ ಮುಂದಿನ ವರ್ಷಗಳಲ್ಲಿ ಸಾಲದ ಪ್ರಮಾಣವೂ ಕಡಿಮೆಯಾಗುತ್ತದೆ.
ಯೋಜನೆಗಳಿಗೆ ಕಡಿತ
ಈ ವರ್ಷ ತೆರಿಗೆ ಸಂಗ್ರಹ ಹಾಗೂ ಕೇಂದ್ರದ ಅನುದಾನ ಮತ್ತು ತೆರಿಗೆ ಪಾಲು ಎಷ್ಟು ಬರುತ್ತದೆ ಎಂಬುದನ್ನು ಅಂದಾಜು ಮಾಡಲಾಗದ ಸ್ಥಿತಿಯಲ್ಲಿ ಹಣಕಾಸು ಇಲಾಖೆ ಇದೆ. ಆದ್ದರಿಂದ ಮಿತವ್ಯಯದ ಜತೆಗೆ ಯೋಜನೆಗಳಿಗೆ ಕತ್ತರಿ ಪ್ರಯೋಗ ಮಾಡುವ ನಿರ್ಧಾರ ಮಾಡಿದೆ. ಅನುದಾನದ ಲಭ್ಯತೆ ನೋಡಿಕೊಂಡು ಮುಂದುವರಿದ ಯೋಜನೆಗಳಿಗೆ ಹಣ ಬಿಡುಗಡೆಯಾಗುತ್ತದೆ. ಹೊಸ ಯೋಜನೆಗಳ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ. ಅನುದಾನಕ್ಕೆ ತಕ್ಕಂತೆ ವೆಚ್ಚ ಮಾಡಲಾಗುತ್ತದೆ. ಹೆಚ್ಚುವರಿ 40 ಸಾವಿರ ಕೋಟಿ ರೂ. ಸಾಲ ಮಾಡಿಕೊಂಡರೂ ಸಹ ಹೊಂದಾಣಿಕೆ ಮಾಡಲಾಗದ ಸ್ಥಿತಿ ಇದೆ.
ಸಮಸ್ಯೆ ಏನಿದೆ?
ನಗರ ಪ್ರದೇಶದಲ್ಲಿ ಆಸ್ತಿ ತೆರಿಗೆ ಸುಧಾರಣೆಗೆ ಮುಂದಾದರೆ ಸಾರ್ವಜನಿಕರ ವಿರೋಧ ವ್ಯಕ್ತವಾಗ ಲಿದೆ. ಇಂಧನ ಕ್ಷೇತ್ರದಲ್ಲಿ ನಗದು ನೇರ ವರ್ಗಾವಣೆ ಜಾರಿಗೆ ತರಬೇಕಾದರೆ ಮೊದಲು ವಿದ್ಯುತ್ ಬಳಕೆಗೂ ಮೀಟರ್ ಕಡ್ಡಾಯ ಮಾಡಬೇಕು. ಆಗ ರೈತರ ವಿರೋಧ ಬರುತ್ತದೆ. ಆದ್ದರಿಂದಲೇ ಸರ್ಕಾರ ಎಚ್ಚರಿಕೆ ಹೆಜ್ಜೆಯಿಡಲು ಮುಂದಾಗಿದೆ. ಸಂಪುಟದಲ್ಲಿ ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ.
ಷರತ್ತುಗಳೇನು?
| ರುದ್ರಣ್ಣ ಹರ್ತಿಕೋಟೆ
ಬಡವರ ಹಣದಲ್ಲಿ ಕುಬೇರನಾದ ಕೆಐಎಡಿಬಿ ಅಧಿಕಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
