ಚಾಮರಾಜನಗರ:ಚೆಸ್ಕಾಂ ಕಿರಿಯ ಇಂಜಿನಿಯರ್ ಮೇಲೆ ಮಚ್ಚುಬೀಸಿದ ಲೈನ್​ಮನ್​ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬದನಗುಪ್ಪೆಯಲ್ಲಿ ಬುಧವಾರ ನಡೆದಿದೆ.
ಚೆಸ್ಕಾಂನ ಬದನಗುಪ್ಪೆ ವಿಭಾಗದ ಜೆಇ ಚಂದ್ರಾನಾಯಕ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಆರೋಪಿ, ಲೈನ್​ಮನ್​ ರಾಮಸಮುದ್ರ ನಿವಾಸಿ ಮಹದೇವಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿರಿ5 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಪೊಲೀಸಪ್ಪನ ಪತ್ನಿ ದುರಂತ ಸಾವು: ಗರ್ಭಿಣಿ ಡೆತ್​ ಕೇಸ್​ ಮುಚ್ಚಿಹಾಕಲು ಹುನ್ನಾರ?
ಬದನಗುಪ್ಪೆ ಶಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಸ್ವಾಮಿಯನ್ನು ಚಾಮರಾಜನಗರಕ್ಕೆ ನಿಯೋಜಿಸಲಾಗಿತ್ತು. ಅಲ್ಲಿಗೆ ಹೋಗೋಕೆ ಇಷ್ಟವಿಲ್ಲದ ಮಹದೇವಸ್ವಾಮಿ, ಸರ್​ ಅಲ್ಲಿಗೆ ಬೇಡ ಎನ್ನುತ್ತಾ ಜೆಇ ಜತೆ ವಾಗ್ವಾದಕ್ಕಿಳಿದಿದ್ದ ಎನ್ನಲಾಗಿದೆ.
ಇದೇ ವೇಳೆ ಜೆಇ ಮೇಲೆ ಮಹಾದೇವಸ್ವಾಮಿ ಮಚ್ಚು ಬೀಸಿದ್ದು, ಚಂದ್ರನಾಯಕ್​ರ ಮುಖ, ತಲೆ, ಕೈ ಮೇಲೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿಬಿದ್ದಿದ್ದರು. ಕೂಡಲೇ ಅವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.‌ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹದೇವಸ್ವಾಮಿಯನ್ನು ಬಂಧಿಸಲಾಗಿದೆ.
ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಮಾತು ತಪ್ಪಿದ್ರೆ ಮನೆ ಹಾಳಾಗುತ್ತೆ… ಧರ್ಮಸ್ಥಳ ಶ್ರೀಕ್ಷೇತ್ರದಲ್ಲಿ ಕರ್ಪೂರ ಹಚ್ಚಿ ಜೆಡಿಎಸ್​-ಬಿಜೆಪಿ ಬೆಂಬಲಿತರ ಆಣೆ-ಪ್ರಮಾಣ!

ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

5 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಪೊಲೀಸಪ್ಪನ ಪತ್ನಿ ದುರಂತ ಸಾವು: ಗರ್ಭಿಣಿ ಡೆತ್​ ಕೇಸ್​ ಮುಚ್ಚಿಹಾಕಲು ಹುನ್ನಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
