ಚಾಮರಾಜನಗರ:ಲೈಂಗಿಕ ದುರುದ್ದೇಶದಿಂದ 8 ವರ್ಷದ ಬಾಲಕಿಯ ಗುಪ್ತಾಂಗಕ್ಕೆ ಕೈ ಹಾಕಿ ದೌರ್ಜನ್ಯವೆಸಗಿದ್ದ ಕಾಮುಕನಿಗೆ ಮಕ್ಕಳ ಸ್ನೇಹಿ ಮತ್ತು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಯಳಂದೂರು ಪಟ್ಟಣದ ಮೊತ್ತದಕೇರಿ ಬೀದಿಯ ಮಹೇಶ್(28) ಶಿಕ್ಷೆಗೊಳಗಾದವ. ಈತ ತನ್ನ ಮನೆಗೆ ಟಿವಿ ನೋಡಲು ಬಂದಿದ್ದ 8 ವರ್ಷದ ಬಾಲಕಿ ಮೇಲೆ ಕೃತ್ಯವೆಸಗಿದ್ದ ಆರೋಪ ಹೊತ್ತಿದ್ದನು. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಳಂದೂರು ಆರಕ್ಷಕ ವೃತ್ತ ನಿರೀಕ್ಷಕ ಎ.ಕೆ.ರಾಜೇಶ್ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಕ್ಕಳ ಸ್ನೇಹಿ ಮತ್ತು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎ.ಸಿ.ನಿಶಾರಾಣಿ ಅವರು, ಆರೋಪಿ ಮಹೇಶ್ ಕೃತ್ಯವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯ ಕಲಂ 4ಕ್ಕೆ 20 ವರ್ಷ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಶಿಕ್ಷೆ, ಕಲಂ 8ಕ್ಕೆ 3 ವರ್ಷ ಶಿಕ್ಷೆ, 5 ಸಾವಿರ ರೂ. ದಂಡ, ದಂಡ ಕಟ್ಟಲಾಗದಿದ್ದರೆ 6 ತಿಂಗಳ ಶಿಕ್ಷೆ, ಕಲಂ 12ಕ್ಕೆ 1 ವರ್ಷ ಶಿಕ್ಷೆ, 5 ಸಾವಿರ ರೂ. ದಂಡ, ದಂಡ ಪಾವತಿಸಲಾಗದೆ ಇದ್ದರೆ 6 ತಿಂಗಳ ಶಿಕ್ಷೆ ವಿಧಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರವನ್ನು 30 ದಿನಗಳ ಒಳಗೆ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.
ಎಸ್​ಐಗೆ ಧಮ್ಕಿ ಹಾಕುತ್ತಲೇ ನಾಲಗೆ ಹರಿಯಬಿಟ್ಟ ಮಾಜಿ ಶಾಸಕ ಸುರೇಶ್​ಗೌಡ! ಒಂದು ಸಲ ನಿಮ್ಮ ಸ್ಟೇಷನ್ ಬಳಿ ಮಲಗಿದ್ದೆ, ಇನ್ನೊಂದು ಬಾರಿ ಮಲಗಬೇಕಾಗುತ್ತೆ…

ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ

HDKಗೆ ನಾಣ್ಯ​, ನೇಗಿಲು, ಸ್ಕೂಲ್​ ಬ್ಯಾಗ್​, ಕಬ್ಬು, ಬೆಲ್ಲದ ಹಾರ… ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪಂಚರತ್ನ ಯಾತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − sixteen =
Remember me
