ಚಾಮರಾಜನಗರ:‘ಸತ್ತೋಯ್ತಪ್ಪ ಸತ್ತೋಯ್ತು‌.. ರೈತರ ಪಾಲಿಗೆ ಸರ್ಕಾರ ಸತ್ತೋಯ್ತು.. ಎಂದು ಹಾಡುತ್ತಾ, ಚಪ್ಪಾಳೆ ತಟ್ಟಿಕೊಂಡು ರೈತ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ ತಡೆದು ನೃತ್ಯ ಮಾಡಿದರು.
ರೈತ ವಿರೋಧಿ ಮಸೂದೆ ಜಾರಿ ಹಿಂಪಡೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ರೈತರು ಮತ್ತು ರೈತಪರ ಹೋರಾಟಗಾರರು ಸರ್ಕಾರದ ವಿರುದ್ಧ ಬೀದಿಗಿಳಿದು ಆಕ್ರೋಶ ಹೊರಹಾಕಿದರು. ಚಾಮರಾಜನಗರದ ಹೆದ್ದಾರಿಯಲ್ಲೂ ಪ್ರತಿಭಟನಾನಿರತ ರೈತರು ಸರ್ಕಾರವನ್ನು ಅನಕಿಸುವಂತೆ ನೃತ್ಯ ಮಾಡುವ ಮೂಲಕ ಅಸಮಾಧಾನ ಹೊರಹಾಕಿದರು.
ರಸ್ತೆ ತಡೆ ಹಿನ್ನೆಲೆ ಬೆಳಗ್ಗೆ ವೇಳೆ ತೆರಳುವ ಸರಕು ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಸ್ತೆ ತಡೆ ನಡೆಸಿ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಬಾರದು ಎಂದು ಪೊಲೀಸರು ಭಾನುವಾರ ರೈತ ಮುಖಂಡರಿಗೆ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಬ್ಬು ಬೆಳೆಗಾರರ ಸಂಘದ ಮೈಸೂರು-ಚಾಮರಾಜನಗರ ಕಾರ್ಯಾಧ್ಯಕ್ಷರು ‘ಲಾಠಿ, ಬೂಟಿಗೆ ನಾವು ಬೆದರುವುದಿಲ್ಲ. ಜಿಲ್ಲಾದ್ಯಂತ ರಸ್ತೆ ತಡೆ ನಡೆಯಲಿದೆ’ ಎಂದಿದ್ದರು.
ರೈತ ವಿರೋಧಿ ಮಸೂದೆ ಜಾರಿ ಹಿಂಪಡೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್​ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ರೈತರು ಪ್ರತಿಭಟಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿಪ್ರತಿಭಟನಾನಿರತ ರೈತರು ಸರ್ಕಾರವನ್ನು ಅಣಕಿಸುವಂತೆ ನೃತ್ಯ ಮಾಡುವ ಮೂಲಕ ಅಸಮಾಧಾನ ಹೊರಹಾಕಿದರು.#Farmers#Bund#Chamarajanagarpic.twitter.com/L9JJFUgsm6
— Vijayavani (@VVani4U)September 28, 2020

https://www.vijayavani.net/karnataka-bund-farmers-protest-in-chamarajanagar/
ರೈತ ಹೋರಾಟಗಾರರ ಫೋನ್ ಕದ್ದಾಲಿಕೆ! ಸರ್ಕಾರದ ವಿರುದ್ಧ ಕಿಡಿಕಾರಿದ ಮಾಜಿ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 8 =
Remember me
