ಚಾಮರಾಜನಗರ:ಏನೂ ಅರಿಯದ ಕಂದಮ್ಮನ ಮೇಲೆ 55 ವರ್ಷದ ಕಾಮುಕನೊಬ್ಬ ವಿಕೃತಿ ಮೆರೆದಿದ್ದು, ನೋವಿನಿಂದ ಬಳಲುತ್ತಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಂಜುನಾಥ ನಗರದಲ್ಲಿ ಈ ದುಷ್ಕೃತ್ಯ ಸಂಭವಿಸಿದ್ದು, ಆರೋಪಿ ವೇಣುಗೋಪಾಲ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಚಾಕೋಲೇಟ್​ ಕೊಡಿಸುವ ಮತ್ತು ಚೆಂಡಿನ ಆಸೆ ತೋರಿಸಿ 5 ವರ್ಷ ವಯಸ್ಸಿನ ಬಾಲಕಿ ಮೇಲೆ ವೇಣುಗೋಪಾಲ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿಯ ಜನನಾಂಗದಲ್ಲಿ ಗಾಯದ ಗುರುತುಗಳನ್ನು ಗಮನಿಸಿದಾಗ ಪ್ರಕರಣ ಬೆಳೆಕಿಗೆ ಬಂದಿದೆ ಎಂದು ಸಂತ್ರಸ್ತ ಮಗುವಿನ ಪಾಲಕರು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದಾರೆ.
ಈ ಘಟನೆ ಸಂಭವಿಸಿ ಮೂರ್ನಾಲ್ಕು ದಿನಗಳಾಗಿದ್ದು, ಪಾಲಕರು ದೂರು ಕೊಡಲು ಆರಂಭದಲ್ಲಿ ಹಿಂಜರಿದಿದ್ದು ಎನ್ನಲಾಗಿದೆ. ಜನನಾಂಗದಲ್ಲಿ ಆದ ಗಾಯಕ್ಕೆ ಚಿಕಿತ್ಸೆಕೊಡಿಸಲೆಂದು ಮಗುವನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪಾಲಕರಿಗೆ ಧೈರ್ಯತುಂಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಪಾಲಕರು ಆರೋಪಿ ವಿರುದ್ಧ ಕೇಸು ದಾಖಲಿದ್ದಾರೆ. ದೂರಿನ ಮೇರೆಗೆ ಗುರುವಾರ ಆರೋಪಿಯನ್ನು ಬಂಧಿಸಲಾಗಿದೆ.
ತುಂಬಾ ಆಸೆಯೊಂದಿಗೆ ಬಂದ ಗೆಳತಿಯನ್ನು ರಾತ್ರೋರಾತ್ರಿ ಕಾರಿನಿಂದ ಕೆಳಗಿಳಿಸಿ ಮಾಡಬಾರದ್ದನ್ನು ಮಾಡಿದ್ಲು!

ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − sixteen =
Remember me
