ಚಾಮರಾಜನಗರ:ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಮೇ21 ರಂದು ಕರೊನಾ ಧೃಡಪಟ್ಟಿರುವ ಸೋಂಕಿತ( ರೋಗಿ-1471) ಜಿಲ್ಲೆ ಜನರನ್ನು ಸಂಪರ್ಕಿಸಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ದೋಸೆ ತವಾದಿಂದ ಹೊಡೆದು ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾದ ಪ್ರಿಯಕರ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಯಳವರಹುಂಡಿಯ ವರನೊಂದಿಗೆ ಚಾಮರಾಜನಗರ ತಾಲೂಕಿನ ಸೋಮವಾರಪೇಟೆಯ ವಧುವಿನ ವಿವಾಹ ಮೇ 20ರಂದು ನಡೆದಿತ್ತು. ವರನ ಮನೆಯಲ್ಲೇ ನಡೆದ ಮದುವೆಗೆ ‌ಮಂಡ್ಯದಲ್ಲಿ ಕರೊನಾ ಧೃಡಪಟ್ಟಿರುವ ಸೋಂಕಿತ ಭಾಗವಹಿಸಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಗೋಮಾಳ ವಿಚಾರಕ್ಕೆ ಗ್ರಾಪಂ ಸದಸ್ಯನನ್ನು ಹತ್ಯೆ ಮಾಡಿದ್ದ ಆರೋಪಿ ಸೆರೆ ಹಿಂದಿದೆ ರೋಚಕ ಸ್ಟೋರಿ
ಯಳವರಹುಂಡಿಯಲ್ಲಿ ಈ ಸಂಬಂಧ ಸೋಂಕಿತನನ್ನು ಸಂಪರ್ಕಿಸಿದ್ದವರನ್ನು ಗುರುತಿಸುವ ಕಾರ್ಯ ನಡೆಯುತ್ತಿರುವುದು ಸೋಮವಾರಪೇಟೆಯಿಂದ ವಧುವಿನೊಂದಿಗೆ ವಿವಾಹದಲ್ಲಿ ಭಾಗಿಯಾಗಿದ್ದವರಿಗೆ ತಿಳಿದು ಇಡೀ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಮದುವೆಗೆ ಗ್ರಾಮದಿಂದ 70ಕ್ಕೂ ಹೆಚ್ಚು ಜನರು ತೆರಳಿದ್ದರು. ಇವರಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ ನಮಗೂ ಕರೊನಾ ಬರುತ್ತದೆ. ಕೂಡಲೇ ಅಧಿಕಾರಿಗಳು ಸೋಂಕಿತ ಸಂಪರ್ಕ ಮಾಡಿದ್ದವರನ್ನು ಗುರುತಿಸಿ ಕ್ವಾರಂಟೈನ್ ಗೊಳಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಂಡ್ಯ ಸೋಂಕಿತನ ಪ್ರಯಾಣದ ವಿವರ ಅಧಿಕೃತವಾಗಿ ಇಲಾಖೆಯಿಂದ ಕೈ ಸೇರಿಲ್ಲ ಎಂದು ಈ ಕುರಿತು ಡಿಎಚ್ ಒ ಡಾ.ಎಂ.ಸಿ.ರವಿ ವಿಜಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಕರೊನಾಕ್ಕೆ ರುಬೊಲಾ ಚುಚ್ಚುಮದ್ದು, ಮನೆಯವರ ಮೇಲೆ ಪ್ರಯೋಗಿಸಿದ ವೈದ್ಯ
ಟಿಕೆಟ್ ನಿಷೇಧಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬಿಎಂಟಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
