ಚಾಮರಾಜನಗರ:ಕರೊನಾ ವೈರಸ್​ ಅಂತ್ಯದ ಬಗ್ಗೆ ಒಂದಲ್ಲ ಒಂದು ಭವಿಷ್ಯಗಳು ಹೊರಬೀಳುತ್ತಿದ್ದು, ಇದೀಗ ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ ರಾಘವನ್ ಗುರೂಜಿ ಕೂಡ ಮಹಾಮಾರಿ ಕೋವಿಡ್​-19ಗೆ ಕೊನೆ ಯಾವಾಗ ಎಂದು ಭವಿಷ್ಯ ನುಡಿದಿದ್ದಾರೆ.
ಜಾಗತಿಕವಾಗಿ ಮೃತ್ಯುಕೂಪ ನಿರ್ಮಿಸಿ ಸಾವಿನ ರಣಕೇಕೆ ಹಾಕುತ್ತಿರುವ ಕಿಲ್ಲರ್​ ಕರೊನಾ ಜೂನ್ 30ಕ್ಕೆ ಅಂತ್ಯ ಕಾಣಲಿದ್ದು, ಸೆಪ್ಟೆಂಬರ್ 5ಕ್ಕೆ ಅದರ ಶೇಷಗಳು ಉಳಿಯುವುದಿಲ್ಲ ಎಂದು ರಾಘವನ್​ ಗುರೂಜಿ ಹೇಳಿದ್ದಾರೆ.
ಇದನ್ನೂ ಓದಿ:ದುಡಿದ ಹಣವನ್ನೆಲ್ಲ ದೇವಸ್ಥಾನಕ್ಕೆ ನೀಡುತ್ತಿದ್ದ ಈ ವ್ಯಕ್ತಿ ನೆರೆಮನೆ ದಂಪತಿಯ ಕೊಲೆ ಮಾಡುವಷ್ಟು ಕೆಟ್ಟವನಾಗಿದ್ದೇಕೆ?
ಕೊಳ್ಳೇಗಾಲದ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ ಹವನ ನಡೆಸಿದ ಗುರೂಜಿ, ಕರೊನಾ ವಾರಿಯರ್ಸ್​ಗೆ ಹೆಚ್ಚಿನ ಆತ್ಮಸ್ಥೈರ್ಯ ಬರಬೇಕು ಹಾಗೂ ವೈರಸ್ ಎಲ್ಲಾ ದೇಶದಿಂದ ವಿಮುಕ್ತವಾಗಲೆಂದು ಮಹಾಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಸುದರ್ಶನ ಹೋಮ, ಮಹಾ ಧನ್ವಂವತ್ರಿ ಹೋಮ ಹಾಗೂ ಮೃತ್ಯುಂಜಯ ಹೋಮ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಅಣ್ಣನನ್ನು ಬಾವಿಗೆ ಎಸೆದು ತಂಗಿಯನ್ನು ಹೊತ್ತೊಯ್ದ ಕಾಮುಕರು: ಮೂವರು ಅಪ್ರಾಪ್ತರು ಸೇರಿ 7 ಮಂದಿಯಿಂದ ದುಷ್ಕೃತ್ಯ
ದ್ವೇಷದ ರಾಜಕೀಯದಿಂದ ಕರೊನಾ ವೈರಸ್ ಹಬ್ಬಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದರು.(ದಿಗ್ವಿಜಯ ನ್ಯೂಸ್​)
ಕರೊನಾ ವೈರಸ್ ಹುಟ್ಟಿನ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ಅಮೆರಿಕ ಗುಪ್ತಚರ ವಿಭಾಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + 11 =
Remember me
