ಚಾಮರಾಜನಗರ:ಚುನಾವಣಾಧಿಕಾರಿಯ ಎಡವಟ್ಟಿನಿಂದಾಗಿ ಬಿಜೆಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಪ್ರಸಂಗ ಹನೂರು ತಾಲೂಕಿನ ಹೂಗ್ಯಂನಲ್ಲಿ ನಡೆದಿದೆ.
ಕಣ್ಣು ಕಾಣಲ್ಲ ಎಂದು ಗ್ರಾ.ಪಂ.ಸದಸ್ಯೆಯೊಬ್ಬರು ಮತ ಹಾಕಲೂ ಸಹಾಯ ಕೋರಿದ್ದರು. ಆದರೆ, ಸದಸ್ಯೆಯ ದಿಕ್ಕು ತಪ್ಪಿಸಿ ಬೇರೊಬ್ಬ ಅಭ್ಯರ್ಥಿಗೆ ಚುನಾವಣಾಧಿಕಾರಿ ಮತ ಹಾಕಿಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿರಿ:ಮದುವೆಗೆ ಬಟ್ಟೆ ಖರೀದಿಸಲು ತೆರಳಿದ ವಧುವನ್ನು ಮಾರ್ಗ ಮಧ್ಯೆಯೇ ಹೊತ್ತೊಯ್ದ ಜವರಾಯ!​
ಮೊನ್ನೆ ನಡೆದ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಬೆಂಬಲಿತೆ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಿರುವ ಆರೋಪ ಚುನಾವಣಾಧಿಕಾರಿ ಸಿದ್ದಪ್ಪಾಜಿಗೌಡ ವಿರುದ್ಧ ಕೇಳಿಬಂದಿದ್ದು, ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.
ಹೂಗ್ಯಂ ಗ್ರಾ.ಪಂ.ನಲ್ಲಿ 20 ಸ್ಥಾನವಿದ್ದು,10ರಲ್ಲಿ ಬಿಜೆಪಿ, 8ರಲ್ಲಿ ಕಾಂಗ್ರೆಸ್ ಹಾಗೂ ಒಂದು ಜೆಡಿಎಸ್ ಮತ್ತು ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಬಿಜೆಪಿ ಪ್ಲಾನ್ ಮಾಡಿತ್ತು.
ಕಣ್ಣು ಕಾಣುವುದಿಲ್ಲ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಚುನಾವಣಧಿಕಾರಿ ಬಳಿಕ ಗ್ರಾ.ಪಂ.ಸದಸ್ಯೆ ಈಶ್ವರಿ ನೆರವು ಕೇಳಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ದಿಕ್ಕು ತಪ್ಪಿಸಿರೋ ಆರೋಪ ಎದುರಾಗಿದ್ದು, ಮತ್ತೇ ಅಧ್ಯಕ್ಷಗಾದಿಗೆ ಚುನಾವಣೆ ನಡೆಸುವಂತೆ ಡಿಸಿಗೆ ಗ್ರಾ.ಪಂ.ಸದಸ್ಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿರಿ:ಸೆಕ್ಸ್​ ವೇಳೆ ದುರಂತ ಸಾವಿಗೀಡಾದ ವ್ಯಕ್ತಿ: ಮರಣೋತ್ತರ ವರದಿಯಲ್ಲಿತ್ತು ಬೆಚ್ಚಿಬೀಳಿಸೋ ಸಂಗತಿ!
ಚುನಾವಣಾಧಿಕಾರಿಗಳು ಕಾಂಗ್ರೆಸ್ ಪರ ಕೆಲಸ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.(ಏಜೆನ್ಸೀಸ್​)
ಚೆನ್ನಾಗಿ ನೋಡಿಕೊಳ್ಳುವುದಾಗಿ ನಂಬಿಸಿ ರಾತ್ರಿ ಮನೆಗೆ ಕರೆದೊಯ್ದ ಪತಿ ಮಾಡಿದ್ದು ನೀಚ ಕೆಲಸ!

ಬೆಂಗಳೂರು ಸಮೀಪ ಭೀಕರ ಅಪಘಾತ: ಮೂವರು ಯುವಕರು ಸ್ಥಳದಲ್ಲೇ ದುರ್ಮರಣ

ಅವಳ ಕೈಬಿಡಲಾರೆ, ಆದ್ರೆ ಮದ್ವೆಯಾದರೆ ಸಾಯ್ತೇನೆ ಅಂತಿದ್ದಾರೆ ಅಮ್ಮ- ಪ್ಲೀಸ್​ ಪರಿಹಾರ ಹೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
