ಚಾಮರಾಜನಗರ:ಕರೊನಾ ಲಸಿಕೆ ಪಡೆದ ನಂತರ ಮದ್ಯಪಾನ ಸೇವಿಸಬಾರದೆಂಬ ತಜ್ಞರ ಸಲಹೆ ಹಿನ್ನಲೆಯಲ್ಲಿ ಶೇಕಡ 40ಕ್ಕು ಹೆಚ್ಚು ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯುಲು ಹಿಂಜರಿಯುತ್ತಿದ್ದಾರೆ.
ಲಸಿಕೆ ಪಡೆದರೆ ಮದ್ಯಪಾನದಿಂದ ವಂಚಿತರಾಗಬೇಕಾಗುತ್ತದೆ ಎಂದು ಸಿಬ್ಬಂದಿ ದೂರ ಉಳಿದರೇ ಎಂಬ ಪ್ರಶ್ನೆ ಕೇಳಿಬಂದಿದೆ. 20 ದಿನ ಕಳೆದರು ಸರ್ಕಾರಿ ಆರೋಗ್ಯ ವಲಯದ ಸಿಬ್ಬಂದಿ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ.
ಇದನ್ನೂ ಓದಿರಿ:ಹೆಂಡತಿಗೆ ಕಳ್ಳತನ ಮಾಡೋ ಚಟ- ಇದು ಮನೋರೋಗವೆ? ಪ್ಲೀಸ್​ ಪರಿಹಾರ ಹೇಳಿ..
ಜನವರಿ 16ರಿಂದಲೇ ಕೋವಿಡ್​ ಲಸಿಕಾ ಅಭಿಯಾನ ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕೇವಲ ಶೇ. 58 ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ಮೊದಲ ಹಂತದ ನಿಗದಿತ ಗುರಿ 4853 ( ಸರ್ಕಾರಿ ವಲಯ).ಆದರೆ, ಇಂದಿನವರೆಗೆ ಲಸಿಕೆ ಪಡೆದವರ ಸಂಖ್ಯೆ ಕೇವಲ 2826.
ಹೀಗಿರುವಾಗ ಆರೋಗ್ಯಾಧಿಕಾರಿಗಳು ಹೇಳುವುದೇ ಬೇರೆ. ಹೊಸ ಲಸಿಕೆ ಆಗಿರುವುದರಿಂದ ಆತಂಕ ಸಹಜ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಮುಂದೆ ಬರುತ್ತಿಲ್ಲ. ಅವರ ಅನುಮಾನಗಳನ್ನು ಪರಿಹರಿಸಿ ಇನ್ನು ಮೂರು ದಿನಗಳಲ್ಲಿ ಗುರಿ ಸಾಧಿಸುತ್ತೇವೆ. ಇಂದಿನಿಂದ ಖಾಸಗಿ ಆರೋಗ್ಯ ಸಂಸ್ಥೆಗಳ ಸಿಬ್ಬಂದಿಗೆ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸುತ್ತೇವೆ ಎಂದು ಚಾಮರಾಜನಗರ ಡಿಎಚ್ಓ ಡಾ.ಎಂಸಿ ರವಿ ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಏಲಿಯನ್​ಗಳು ಮಾನವ ಸಂಪರ್ಕಕ್ಕೆ ಯತ್ನಿಸುತ್ತಿವೆ: ಖಗೋಳ ಭೌತಶಾಸ್ತ್ರಜ್ಞ ಕೊಟ್ಟ ಸ್ಫೋಟಕ ಕಾರಣ ಹೀಗಿದೆ…

ಅತ್ತ ಅಮೆರಿಕದಲ್ಲಿ ಟೆಕ್ಕಿ ಪತಿ ವಾಸ: ಇತ್ತ ಮಗಳ ಜತೆ ಮಹಿಳೆ ನೇಣಿಗೆ ಶರಣಾಗಿದ್ದೇಕೆ?

ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 3 =
Remember me
