ಚಾಮರಾಜನಗರ:ವರುಣನ ಅಬ್ಬರದ ಪರಿಣಾಮ ಉಕ್ಕಿ ಹರಿದ ಕಾವೇರಿ ತಮಿಳುನಾಡಿನ ನೀರಿನ ದಾಹ ತಣಿಸಿದ್ದಾಳೆ. ಇದರಿಂದಾಗಿ ತಲೆದೋರಲಿದ್ದ ಕಾವೇರಿ ವಿವಾದ ಸಧ್ಯಕ್ಕೆ ದೂರವಾಗಿದೆ.
ಕಬಿನಿ ಹಾಗು ಕೆ.ಆರ್.ಎಸ್ ನಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನಲೆಯಲ್ಲಿ ಒಂದೇ ವಾರದಲ್ಲಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ 33.55 ಟಿಎಂಸಿ ನೀರು ಹರಿದಿದೆ. ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಹೊಗೇನಕಲ್ ಮೂಲಕ ಮೆಟ್ಟೂರು ಜಲಾಶಯಕ್ಕೆ 33.55 ಟಿಎಂಸಿ ನೀರು ಸೇರಿದೆ.
ಆಗಸ್ಟ್ 7 ರಂದು ಕೇವಲ 28.99 ಟಿಎಂಸಿ ಇದ್ದ ನೀರು ಇಂದು 61.54 ಟಿಎಂಸಿಗೆ ಏರಿಕೆಯಾಗಿದೆ. ಮೆಟ್ಟೂರು ಜಲಾಶಯದ ಗರಿಷ್ಠ ಮಟ್ಟ 120 ಅಡಿ ಇದ್ದು ಆಗಸ್ಟ್ 7 ರಂದು ನೀರಿನ ಮಟ್ಟ 65 ಅಡಿ ಇತ್ತು. ಇದೀಗ ಜಲಾಶಯದ ನೀರಿನ ಮಟ್ಟ 97 ಅಡಿಗೆ ಏರಿದ್ದು ಒಂದೇ ವಾರದಲ್ಲಿ 32 ಅಡಿ ಭರ್ತಿಯಾಗಿದೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + one =
Remember me
