ಚಾಮರಾಜನಗರ:ಮಲೆ ಮಹದೇಶ್ವರ ಉತ್ಸವ ಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ.
ಚಿನ್ನದ ಕರಡಿಗೆ ಸರದಿ ಅರ್ಚಕರ ಸುಪರ್ದಿನಲ್ಲಿತ್ತು. ಇದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಒಡೆವೆಯಾಗಿದ್ದು, ನಾಪತ್ತೆ ಪ್ರಕರಣ ಬೆಳಕಿಗೆ ಬಂದರೂ ಅಧಿಕಾರಿಗಳು ಮೌನ ವಹಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಚಿನ್ನದ ಕರಡಿಗೆ ಕಾಣೆಯಾಗಿ ಐದಾರು ದಿನ ಕಳೆದರೂ ಯಾವುದೇ ದೂರು ದಾಖಲಾಗಿಲ್ಲ. ಇದರ ನಡುವೆ ಅರ್ಚಕರ ಗುಂಪುಗಳ ನಡುವಿನ ಮುಸುಕಿನ ಗುದ್ದಾಟದ ಫಲ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಸಂಶಯ ವ್ಯಕ್ತವಾಗಿದೆ. ಅರ್ಚಕರಲ್ಲೇ ಮೂರು ಗುಂಪು ಇದೆ. ಅರ್ಚಕರ ಗುಂಪುಗಳ ನಡುವಿನ ಒಳ ವೈಮನಸ್ಸನಿ ಪರಿಣಾಮ ಎನ್ನಲಾಗಿದೆ.
ಇದನ್ನೂ ಓದಿರಿ:ವಿಶ್ವಗುರು ಬಸವಣ್ಣನ ಮೂರ್ತಿಗೆ ಡಾ. ವಿಜಯ ಸಂಕೇಶ್ವರ ಅವರಿಂದ 1 ಕೋಟಿ ರೂ ದೇಣಿಗೆ
ಒಂದು ಗುಂಪಿಗೆ ಕೆಟ್ಟ ಹೆಸರು ತರಲು ಮತ್ತೊಂದು ಗುಂಪು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದ ಕರಡಿಗೆಯನ್ನು ಹುಂಡಿಗೆ ಹಾಕಿರಬಹುದಾದ ಅನುಮಾನವೂ ಇದೆ. ಹೀಗಾಗಿ ಇಂದು ನಡೆಯಲಿರುವ ಹುಂಡಿ ಎಣಿಕೆ ವೇಳೆ ಚಿನ್ನದ ಕರಡಿಗೆ ಸಿಕ್ಕರೆ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎನ್ನಲಾಗಿದೆ. ಇಲ್ಲವೇ ಸರದಿ ಅರ್ಚಕರಿಂದ ಹೊಸ ಚಿನ್ನದ ಕರಡಿಗೆ ಮಾಡಿಸಿ ಪ್ರಕರಣಕ್ಕೆ ಇತಿಶ್ರಿ ಹಾಡಲೂ ಸಹ ನಿರ್ಧಾರ ಮಾಡಿದ್ದಾರೆನ್ನಲಾಗಿದೆ.
ಸದ್ಯ ಮಲೆ ಮಹದೇಶ್ವರನ ಚಿನ್ನದ ಕರಡಿಗೆ ನಾಪತ್ತೆಯಾಗಿರುವುದು ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಚಿನ್ನದ ಕರಡಿಗೆ, ನಾಳೆ ಇತರೆ ಚಿನ್ನದ ಒಡವೆ ನಾಪತ್ತೆಯಾದರೆ ಯಾರು ಜವಬ್ದಾರರೆಂದು ಪ್ರಶ್ನಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಅಸ್ಸಾಂನಲ್ಲಿ ವಿಜಯವಾಣಿ: ಚಹಾ ತೋಟದ ಕಾರ್ವಿುಕರ ಬವಣೆಗೆ ಹೊಣೆ ಯಾರು?

ವಿಜಯವಾಣಿ ಜಗದಗಲ ಅಂಕಣ: ಕ್ವಾಡ್ ಇತಿಹಾಸ ಮರುಕಳಿಸುತ್ತಿದೆಯೇ?

ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಕೊಹ್ಲಿ, ರೋಹಿತ್‌ಗೆ ಬಡ್ತಿ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:6 + 2 =
Remember me
