ಬೆಂಗಳೂರು:ಹೊಸ ವರ್ಷದ ಹೊಸ್ತಿಲಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಇಂಧನ ಕ್ಷೇತ್ರ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತೆ ವಿದ್ಯುತ್ ದರ ಏರಿಸುವ ಸಲುವಾಗಿ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಶುರುವಾಗಿದೆ. ಕಳೆದ ವರ್ಷ ನವೆಂಬರ್​ನಲ್ಲಿ ಪ್ರತಿ ಯೂನಿಟ್​ಗೆ 33 ಪೈಸೆ ಹೆಚ್ಚಿಸಲು ಕೆಇಆರ್​ಸಿ ಅನುಮತಿ ನೀಡಿತ್ತು. ಆದರೆ ಅದು ಸೀಮಿತ ಅವಧಿಗೆ ನೀಡಿದ ದರ ಏರಿಕೆಯಾಗಿತ್ತು. ಆದ್ದರಿಂದಲೇ ಈಗ ಮತ್ತೊಮ್ಮೆ ಪ್ರತಿ ಯೂನಿಟ್​ಗೆ 1.39 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳು ಸಿದ್ಧವಾಗುತ್ತಿವೆ. ಕರೊನಾ ಕಾರಣದಿಂದ ಎಸ್ಕಾಂಗಳು ಕೇಳಿದಷ್ಟು ದರ ಹೆಚ್ಚಿಸುವುದಕ್ಕೆ ಕೆಇಆರ್​ಸಿ ಒಪ್ಪಿರಲಿಲ್ಲ. ಆದರೆ ಹಿಂದಿನ ಪ್ರಸ್ತಾವನೆ ಬಾಕಿಯೂ ಸೇರಿ ಮುಂದಿನ 2 ವರ್ಷ ವಿದ್ಯುತ್ ದರ ಹೆಚ್ಚಳ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಇದರ ಜತೆಗೆ ಗ್ರಾಹಕರಿಂದ ವಸೂಲಿ ಮಾಡುವ ನಿಗದಿತ ಶುಲ್ಕವನ್ನೂ ಪ್ರತಿ ವರ್ಷ ಹೆಚ್ಚಿಸಲು ನಿರ್ಧರಿಸಲಾಗಿದೆ.
5 ತಿಂಗಳಿಗೆ ಸೀಮಿತ:ಕಳೆದ ವರ್ಷ ನವೆಂಬರ್​ನಲ್ಲಿ ದರ ಹೆಚ್ಚಳಕ್ಕೆ ಕೆಇಆರ್​ಸಿ ನೀಡಿದ್ದ ಅನುಮತಿ ಐದು ತಿಂಗಳಿಗೆ ಸೀಮಿತವಾಗಿತ್ತು. ದರ ಹೆಚ್ಚಳದ ಮೂಲಕ 2473 ಕೋಟಿ ರೂ.ಗಳನ್ನು ಏಳು ತಿಂಗಳ ಅವಧಿಯಲ್ಲಿ ವಸೂಲಿ ಮಾಡಬಹುದಾಗಿದ್ದು, ಅದರಲ್ಲಿ 1443 ಕೋಟಿ ರೂ.ಗಳನ್ನು ನಿಯಂತ್ರಕ ಸ್ವತ್ತಾಗಿ ಇಟ್ಟು ಆ ಮೊತ್ತವನ್ನು 2022-23ನೇ ಸಾಲಿನಲ್ಲಿ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಉಳಿದ 1030 ಕೋಟಿ ರೂ.ಗಳನ್ನು 2021ನೇ ಸಾಲಿನ ಐದು ತಿಂಗಳ ಅವಧಿಗೆ ದರ ಪರಿಷ್ಕರಣೆಯ ಮೂಲಕ ವಸೂಲಿಗೆ ತೀರ್ವನಿಸಲಾಗಿದೆ.
5872 ಕೋಟಿ ರೂಪಾಯಿ ಹೊರೆ:ರಾಜ್ಯದ 5 ಎಸ್ಕಾಂಗಳು 5872 ಕೋಟಿ ರೂ.ಗಳ ಕೊರತೆ ಎದುರಿಸುತ್ತಿವೆ. ಆ ಹೊರೆಯನ್ನು ವಿದ್ಯುತ್ ದರ ಏರಿಕೆಯ ಮೂಲಕ ಭರಿಸಿಕೊಳ್ಳಲು ಮುಂದಾಗಿರುವುದಾಗಿ ಇಂಧನ ಇಲಾ ಖೆಯ ಮೂಲಗಳು ಖಚಿತ ಪಡಿಸಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fifteen =
Remember me
