ಆಂಧ್ರದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಅಧಿಕಾರ ನೀರಾವರಿ, ಬಂಡವಾಳ ಆಕರ್ಷಣೆಯಲ್ಲಿ ಆಕ್ರಮಣಕಾರಿ ಶೈಲಿ
| ಮೃತ್ಯುಂಜಯ ಕಪಗಲ್ ಬೆಂಗಳೂರು
ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಲ್ಲಿರುವ ಟಿಡಿಪಿ ನಾಯಕ ಚಂದ್ರಬಾಬುನಾಯ್ಡು ಅವರು ನರೇಂದ್ರ ಮೋದಿಗೆ ಮಾತ್ರವಲ್ಲ, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೂ ಸದಾ ತೂಗುಗತ್ತಿಯಾಗಲಿದ್ದಾರೆ.
ಆಂಧ್ರಪ್ರದೇಶದಲ್ಲಿ ಎನ್​ಡಿಎ ಮೈತ್ರಿಕೂಟ ಗೆದ್ದಿದೆ. ಕೂಟದ ಸದಸ್ಯ ಪಕ್ಷ ಟಿಡಿಪಿ ನಿಚ್ಚಳ ಬಹುಮತ ಸಾಧಿಸುವುದರೊಂದಿಗೆ ಚಂದ್ರಬಾಬುನಾಯ್ಡು ಎರಡನೇ ಬಾರಿ ಸಿಎಂ ಆಗಲಿದ್ದಾರೆ. ಈ ಹಿಂದೆ ಪ್ರಸ್ತಾಪ ಮಾಡಿದ್ದ ಉದ್ಯಮ-ವಹಿವಾಟು ಮತ್ತಿತರ ಯೋಜನೆಗಳಿಗೆ ವೇಗ ನೀಡಲಿದ್ದಾರೆ. ಕೇಂದ್ರದಲ್ಲಿ ಮೈತ್ರಿಕೂಟದ ಭಾಗವಾಗಲಿರುವ ಕಾರಣ ಹೆಚ್ಚಿನ ಬಲವೂ ಸಿಗಲಿದೆ.
ಆತಂಕದ ಮೂಲ: ಆಂಧ್ರಪ್ರದೇಶ ಸಿಎಂ ಚಂದ್ರಬಾಬುನಾಯ್ಡು ಕಾರ್ಯಶೈಲಿ, ತಜ್ಞತೆಯು ಕರ್ನಾಟಕದಲ್ಲಿ ಆಡಳಿತ ಚುಕ್ಕಾಣಿ ಹಿಡಿದವರಿಗೆ ಗೊತ್ತು. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲ ಮಗ್ಗಲುಗಳ ಅರಿವಿದೆ. ಉದ್ಯಮಗಳು, ಬಂಡವಾಳ ಆಕರ್ಷಣೆ, ನೀರಾವರಿ ಯೋಜನೆಗಳ ಅನುಷ್ಠಾನ ವಿಷಯದಲ್ಲಿ ಟಿಡಿಪಿ ನಾಯಕನದು ಆಕ್ರಮಣಕಾರಿ ಶೈಲಿಯಾಗಿದ್ದು, ನೀತಿ-ನಿರ್ಧಾರಗಳನ್ನು ಅನುಕೂಲಕ್ಕೆ ತಕ್ಕಂತೆ ಕ್ಷಿಪ್ರವಾಗಿ ಬದಲಾಯಿಸುವ ತಾಕತ್ತುಳ್ಳವರು. ರಾಜ್ಯಕ್ಕೆ ಬರಬೇಕಾಗಿದ್ದ ಕಿಯಾ ಮೋಟಾರ್ಸ್ ಆಂಧ್ರಪ್ರದೇಶಕ್ಕೆ ಸೆಳೆಯಲು ಅಸ್ತಿವಾರ ಹಾಕಿದವರೇ ನಾಯ್ಡು ಎನ್ನುವುದು ನಾಯಕರಿಗೆ ಗೊತ್ತಿದೆ. ಅಷ್ಟೇ ಅಲ್ಲ, ನಾಯ್ಡು ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ ಆಗಿರುವುದು ಕರ್ನಾಟಕದ ಆತಂಕಕ್ಕೆ ಮೂಲ ಕಾರಣವಾಗಿದೆ.
ನೀರಾವರಿಯಲ್ಲೂ ಎತ್ತಿದ ಕೈ:ಕೃಷ್ಣಾ ಎರಡನೇ ನ್ಯಾಯಾಧಿಕರಣ ರಚನೆ, ವಿಚಾರಣೆ, ಅಂತಿಮ ತೀರ್ಪು ಪ್ರಕಟಿಸುವ ಮುನ್ನ ಕೃಷ್ಣಾ ಕಣಿವೆ ಹೆಚ್ಚುವರಿ ನೀರು ಬಳಕೆಗೆ ಅವಿಭಜಿತ ಆಂಧ್ರ ಸಿಎಂ ಆಗಿ ನಾಯ್ಡು ಶರವೇಗದಲ್ಲಿ ಕೆಲಸ ಮಾಡಿದ್ದರು. ಹಂದ್ರಿನೀವ, ಕುಲವರ್ತಿ, ಶ್ರೀಗುರುರಾಘವೇಂದ್ರ ಏತ ನೀರಾವರಿ, ಜುರಾಲಾ ಲಿಂಕ್ ಸೇರಿ 11 ನೀರಾವರಿ ಯೋಜನೆಗಳನ್ನು ಅನಧಿಕೃತವಾಗಿ ಕೈಗೆತ್ತಿಕೊಂಡರು. ವ್ಯರ್ಥ ನೀರು ಬಳಕೆಗಾಗಿ ಜಾರಿಗೆ ತಂದ ಯೋಜನೆಗಳೆಂದು ಸಮರ್ಥಿಸಿಕೊಂಡು, ಕೃಷ್ಣಾ ಎರಡನೇ ನ್ಯಾಯಾಧಿಕರಣದಿಂದ ಸಕ್ರಮ ಮಾಡಿಕೊಂಡರು. ಕಣಿವೆಯ ಮೇಲ್ಭಾಗದಲ್ಲಿರುವ ಕರ್ನಾಟಕಕ್ಕೆ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ, ಬ್ಯಾರೇಜ್​ಗಳ ನಿರ್ಮಾಣ ಯೋಜನೆಗಳಿಗೆ ಅಡ್ಡುಗಾಲು ಹಾಕಿ, ಹೆಚ್ಚುವರಿ ನೀರು ಕೆಳಭಾಗಕ್ಕೆ ಸರಾಗವಾಗಿ ಹರಿಯುವಂತೆ ನೋಡಿಕೊಂಡರು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಕ್ಕೆ ತಗಾದೆ ತೆಗೆದರೆ, ತುಂಗಭದ್ರಾ ಹೂಳಿಗೆ ಪರಿಹಾರವಾಗಿ ರೂಪಿಸಿದ ನವಲಿ ಸಮತೋಲನ ಜಲಾಶಯಕ್ಕೆ ಪರ್ಯಾಯವಾಗಿ ಸಮಾನಾಂತರ ಕೆಸಿ ಕೆನಾಲ್ ಪ್ರಸ್ತಾವನೆ ಮಂಡಿಸಿದ್ದರು. ಇದೀಗ ಮೋದಿ ಮೂರನೇ ಬಾರಿ ಪ್ರಧಾನಿಯಾಗಲು ಚಂದ್ರಬಾಬುನಾಯ್ಡು ಬೆಂಬಲಿಸಿದ್ದು, ತಮ್ಮ ಪ್ರಭಾವ ಬಳಸಿಕೊಂಡು ಕರ್ನಾಟಕದ ಪ್ರಸ್ತಾವಿತ ಯೋಜನೆಗಳಿಗೆ ಅಡ್ಡಗಾಲು ಹಾಕುವ ಭೀತಿಯಿದೆ.
ತ್ವರಿತ ಅಧಿಸೂಚನೆ ನಿರೀಕ್ಷೆ:ಕೃಷ್ಣಾ ಎರಡನೇ ನ್ಯಾಯಾಧಿಕರಣದ ಐತೀರ್ಪ ಹೊರಬಿದ್ದು ದಶಕವೇ ಕಳೆದಿದೆ. ತೆಲಂಗಾಣದ ತಕರಾರಿನಿಂದ ಅಂತಿಮ ಅಧಿಸೂಚನೆ, ಹೆಚ್ಚುವರಿ ಲಭ್ಯ ನೀರು ಬಳಕೆ ಸಾಧ್ಯವಾಗಿಲ್ಲ. ಕರ್ನಾಟಕದ ಜತೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೂ ತಲೆನೋವಾಗಿದೆ. ಮೂರು ರಾಜ್ಯಗಳಲ್ಲಿ ಎನ್​ಡಿಎ ಸರ್ಕಾರವಿರುವ ಕಾರಣ ಅಧಿಸೂಚನೆ ತ್ವರಿತವಾಗಿ ಪ್ರಕಟವಾಗುವ ನಿರೀಕ್ಷೆಯಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ಮನವೊಲಿಸಿದರೆ ಬಿಕ್ಕಟ್ಟು ಬಗೆಹರಿಯಲಿದೆ. ಜತೆಗೆ ಜಲಸಂಪನ್ಮೂಲ ಖಾತೆ ನಿರ್ವಹಿಸಿದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಸಂಸದರಾಗಿದ್ದು, ಒತ್ತಾಸೆ ನೀಡಲಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ವ್ಯಾಜ್ಯವಿದ್ದಾಗ್ಯೂ ಕಾವೇರಿ ತೀರ್ಪಿನ ಅಧಿಸೂಚನೆ ಪ್ರಕಟವಾಗಿತ್ತು. ಇದೇ ಮಾದರಿಯನ್ನು ಕೃಷ್ಣಾಕ್ಕೂ ಅನ್ವಯಿಸಲು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದರೆ ಮುಂದಿನ ದಾರಿ ಸುಗಮವಾಗಲಿದೆ.
ಮಧ್ಯಂತರ ಜಾಮೀನು ಅರ್ಜಿ ವಜಾ ಬೆನ್ನಲ್ಲೇ ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಭೇಟಿಯಾದ ಪತ್ನಿ ಸುನಿತಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
