ಮೈಸೂರು:ನೆನಪು ಮತ್ತು ಕನಸು ಇರುವ ಭಾಷೆ ಮಾತ್ರ ಉತ್ತುಂಗ ಸ್ಥಾನ ತಲುಪಿ ಅಜರಾಮರವಾಗುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಭಾರತೀಯ ಭಾಷಾ ಸಂಸ್ಥಾನ ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ಭಾನುವಾರ ವರ್ಚರ್ುವಲ್ ಮೂಲಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ಥಳಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಭಾಷೆ ಉಳಿದು ಬೆಳೆಯಬೇಕಾದರೆ ಅದಕ್ಕೆ ನೆನಪು ಇರಬೇಕು. ಅದನ್ನು ಮುಂದೆ ಹೇಗೆ ಬೆಳೆಸಬೇಕು ಎನ್ನುವ ಕನಸು ಕಾಣಬೇಕು. ಆಗ ಮಾತ್ರ ಒಂದು ಭಾಷೆ ಅಜರಾಮರವಾಗುತ್ತದೆ. ಇಂತಹ ಸೌಭಾಗ್ಯ ಕನ್ನಡದ್ದಾಗಿದ್ದು, ಅದನ್ನು ಹಿಂದಿನವರು ಕಾಪಾಡಿಕೊಂಡು ಬಂದಿದ್ದಾರೆ. ಮುಂದಿನ ಪೀಳಿಗೆ ಬೆಳೆಸುವ ಪ್ರಯತ್ನ ಮಾಡಬೇಕು ಎಂದರು. ಇಂದಿನ ಸನ್ನಿವೇಶದಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಅನ್ನದ ಭಾಷೆ ಎನ್ನುವ ಭ್ರಮೆ ಸೃಷ್ಟಿಸಲಾಗಿದೆ. ಇದರಿಂದಾಗಿ ಕನ್ನಡ ಸೇರಿ ಇತರ ಎಲ್ಲ ಭಾಷೆಗಳೂ ಇಂಗ್ಲಿಷ್ ಪ್ರಭಾವಕ್ಕೆ ಒಳಪಟ್ಟಿವೆ. ಮೆಕಾಲೆಯ ಶಿಕ್ಷಣ ನೀತಿಯಿಂದ ಬಂದಿರುವ ಇಂತಹ ಭ್ರಮೆಗಳಿಂದ ಇನ್ನಾದರೂ ಹೊರಬರಬೇಕಿದೆ. ಇಂಗ್ಲಿಷ್ ಹೊರತಾದ ಸ್ವತಂತ್ರ ಅಸ್ಮಿತೆಯನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಭಾಷಾ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಪತ್ರಿಕೆ, ಸಾಹಿತ್ಯ ಸೇರಿ ಇನ್ನಿತರ ಕಡೆ ಬಳಸುವ ಭಾಷೆಯನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಆ ಮೂಲಕ ಇಂಗ್ಲಿಷ್ ಬಿಟ್ಟು ನಮಗೆ ಸ್ವತಂತ್ರವಾದ ಅಸ್ತಿತ್ವವಿದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಕಂಬಾರ ಹೇಳಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಮಾತನಾಡಿ, ರಾಜ್ಯೋತ್ಸವ ದಿನದಂದು ಶಾಸ್ತ್ರೀಯ ಕನ್ನಡ ಭಾಷೆಯ ಅತ್ಯುನ್ನತ ಸಂಸ್ಥೆ ವಿವಿಯ ಆವರಣಕ್ಕೆ ಸ್ಥಳಾಂತರವಾಗá-ತ್ತಿರá-ವುದು ಸ್ವಾಗತಾರ್ಹ. ಕೇಂದ್ರೀಯ ಭಾಷಾ ಸಂಸ್ಥಾನ (ಸಿಐಐಎಲ್) ಕೂಡ ಮೊದಲು ಗಂಗೋತ್ರಿ ಆವರಣದಲ್ಲಿಯೇ ಆರಂಭಗೊಂಡು ಬೆಳೆದು ನಿಂತಿದೆ ಎಂದರು. ತಮಿಳು ಭಾಷೆಯವರು ತಮ್ಮ ಪಾಲಿಗೆ ಬಂದಿರುವ ಅನುದಾನವನ್ನು ಬಹುಪಾಲು ಬಳಸಿಕೊಂಡು ಭಾಷೆ ಬೆಳವಣಿಗೆಗೆ ಮುಂದಾಗಿದ್ದಾರೆ. ಕನ್ನಡದಲ್ಲಿ ಆ ಕೆಲಸ ಆಗಿಲ್ಲ ಎನ್ನಲಾಗುತ್ತಿದ್ದು, ಇತ್ತ ಗಮನ ನೀಡಿ ಕನ್ನಡ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದುಕೊಳ್ಳುವಾಗ ಇದ್ದ ಉತ್ಸಾಹ ಬಳಿಕ ಕುಗ್ಗಿದಂತಾಗಬಾರದು ಎಂದು ಸಲಹೆ ನೀಡಿದರು.
ಆನ್​ಲೈನ್ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮಶೆಟ್ಟಿ, ವಿದ್ವಾಂಸಆರ್.ವಿ.ಎಸ್. ಸುಂದರಂ ಇತರರು ಮಾತನಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
