ಬೆಂಗಳೂರು: ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್ ವಾರ್ ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಬಗ್ಗೆ ಸಹಾನುಭೂತಿ ಹೊಂದಿದವರು ಜಾಲತಾಣದಲ್ಲಿ ಟೀಕೆ ಟಿಪ್ಪಣಿ ಮಾಡಿಕೊಂಡಿದ್ದಾರೆ.ಕಾಂಗ್ರೆಸ್ ರಾಜ್ಯ ಘಟಕವು ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸುವ ಅಭಿಪ್ರಾಯದ ಜತೆಗೆ ಇಸ್ರೋ ಸ್ಥಾಪನೆ ವಿಚಾರವನ್ನೇ ಕೆದಕಿದೆ.‘ಬಾಹ್ಯಾಕಾಶ ಸಂಶೋಧನೆಗಾಗಿ ಭಾರತೀಯ ರಾಷ್ಟ್ರೀಯ ಸಮಿತಿ’ ಸ್ಥಾಪನೆಗೆ ಇಟ್ಟಿಗೆ ಇಟ್ಟಿದ್ದೇ ನೆಹರು. ಭಾರತ ಸ್ವತಂತ್ರಗೊಂಡ ಹೊತ್ತಿನಲ್ಲಿ ನೆಲದ ಮೇಲಿನ ಸವಾಲುಗಳೇ ಬೆಟ್ಟದಷ್ಟಿರುವಾಗ ದೇಶದ ಮೊದಲ ಪ್ರಧಾನಿ, ನವಭಾರತದ ನಿರ್ಮಾತೃ ಜವಾಹರ್ ಲಾಲ್ ನೆಹರುರವರು ಬಾಹ್ಯಾಕಾಶದ ಕನಸು ಕಂಡಿದ್ದರು ಎಂದು ಪ್ರತಿಪಾದಿಸಿದೆ.ಅಷ್ಟೇ ಅಲ್ಲದೇ, ಬಾಹ್ಯಾಕಾಶ ಸಂಶೋಧನೆಯ ಸಲುವಾಗಿ ನೆಹರುರವರು ಹಾಕಿದ್ದ ಅಡಿಗಲ್ಲಿನ ಹೆಸರೇ ಬಾಹ್ಯಾಕಾಶ ಸಮಿತಿ, ಅದು ಇಂದು ಇಸ್ರೋ ಆಗಿ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಸಾಧನೆಗೈಯುತ್ತಿದೆ. ವಿಜ್ಞಾನದೆಡೆಗಿನ ನೆಹರುರವರ ಆಸಕ್ತಿ, ದೇಶದಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಲು ಅವರು ಕೈಗೊಂಡ ಕ್ರಮಗಳೇ ಇಂದಿನ ಭಾರತದ ಸಾಧನೆಗಳಿಗೆ ಬುನಾದಿ. ವಿಜ್ಞಾನ, ಜ್ಞಾನಗಳು ಮಾತ್ರ ಭಾರತದ ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲವು ಎಂಬುದನ್ನು ದೇಶವನ್ನಾಳಿದ ಹಿರಿಯರು ನಂಬಿದ್ದರು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿ, 60ರ ದಶಕದಲ್ಲಿ ಸಣ್ಣ ಶೆಡ್‌ನಲ್ಲಿ ಪ್ರಾರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದಿರುವ ಇಸ್ರೋ ಶ್ರಮಕ್ಕೆ ನಾವೆಲ್ಲ ಅಭಿನಂದಿಸುತ್ತೇವೆ. ಇದರೊಂದಿಗೆ ದೇಶದ ಮೊದಲ ಪ್ರಧಾನಿಗಳಾದ ಜವಹರಲಾಲ್ ನೆಹರು ಅವರು ಕಂಡ ಕನಸು ಇಂದು ನನಸಾಗಿರುವುದಕ್ಕೆ ಭಾರತೀಯನಾಗಿ ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − two =
Remember me
