ಬೆಂಗಳೂರು:ಕಳೆದ ಆರು ತಿಂಗಳ ಅವಧಿಯಲ್ಲಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಣಯ ಹಾಗೂ ಯೋಜನೆಗಳು ದೂರಗಾಮಿಯಲ್ಲಿ ಸಾಮಾಜಿಕವಾಗಿ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್) ತನ್ನ ವರದಿಯಲ್ಲಿ ಹೇಳಿದೆ.
ಬೊಮ್ಮಾಯಿ ಸರ್ಕಾರ ಆರು ತಿಂಗಳು ಪೂರ್ಣಗೊಳಿಸಿದ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವರದಿ ಬಿಡುಗಡೆಯಾಗಿತು. ಐಸೆಕ್ ನಿರ್ದೇಶ ಪ್ರೊ.ಡಿ.ರಾಜಶೇಖರ್ ವರದಿಯ ಸಾರಾಂಶವನ್ನು ಸಭೆಯ ಗಮನಕ್ಕೆ ತಂದರು.
ಮುಖ್ಯಮಂತ್ರಿ ನಗರೋತ್ಥಾನ ಯೋಜನೆ (3885 ಕೋಟಿ ರೂ.), ಅಮೃತ ಗ್ರಾಮ ಪಂಚಾಯಿತಿ ಯೋಜನೆ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ, ಗ್ರಾಮ ಒನ್, ರೈತ ಉತ್ಪಾದಕ ಸಂಸ್ಥೆ ರಚನೆ ಮೂಲಕ ತೋಟಗಾರಿಕೆಗೆ ಪ್ರೋತ್ಸಾಹ, ಸೆಕೆಂಡರಿ ಅಗ್ರಿಕಲ್ಚರ್, ರೈತ ವಿದ್ಯಾನಿಧಿ ಸ್ಕಾಲರ್​ಶಿಪ್, ಸಾಮಾಜಿಕ ಪಿಂಚಣಿ ಯೋಜನೆ ಮೊತ್ತ ಹೆಚ್ಚಳ, ಅಮೃತ ಆರೋಗ್ಯ ಮೂಲಸೌಕರ್ಯ ಯೋಜನೆ, ಪಡಿತರ ವಿತರಣೆಯಲ್ಲಿ ಪರಿಷ್ಕರಣೆ, ಇ ಬೆಳಕು ಯೋಜನೆ ಕುರಿತಂತೆ ಐಸೆಕ್ ತಜ್ಞರು ವಿಶ್ಲೇಷಣೆ ನಡೆಸಿ, ಮುಂದಿನ ದಿನಗಳಲ್ಲಿ ಆಗಬಹುದಾದ ಪರಿಣಾಮ ಅಂದಾಜಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ತೀರ್ವನಗಳಿಂದ ಮುಂದಿನ ದಿನಗಳಲ್ಲಿ ರೈತರು, ನಗರ ವಾಸಿಗಳು, ವಿದ್ಯಾರ್ಥಿಗಳು, ಹೆಣ್ಣುಮಕ್ಕಳ ಜೀವನದಲ್ಲಿ ಸುಧಾರಣೆ ಕಾಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ರಾಜ್ಯದ ನಗರ-ಗ್ರಾಮೀಣ ಸೇರಿ ಎಲ್ಲ ಕ್ಷೇತ್ರಗಳನ್ನು ಒಂದಿಲ್ಲೊಂದು ಯೋಜನೆಗಳ ಮೂಲಕ ತಲುಪಿದ್ದು, ಸರ್ವತೋಮುಖ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಾಗಿದೆ. ಸವಾಲು ಎದುರಿಸುವ ಶಕ್ತಿ ಸರ್ಕಾರ ಸಂಪಾದಿಸಿದೆ. ಪಕ್ಷದ ವರಿಷ್ಠರ ದೃಢ ಬೆಂಬಲ, ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
1. ರೈತ ಉತ್ಪಾದಕ ಸಂಸ್ಥೆಯಿಂದ ಸಣ್ಣ, ಅತಿಸಣ್ಣ ರೈತರಿಗೆ ಹೆಚ್ಚಿನ ಅನುಕೂಲ
2. ಸೆಕೆಂಡರಿ ಅಗ್ರಿಕಲ್ಚರ್ ಮತ್ತು ಕೌಶಲ್ಯ ಅಭಿವೃದ್ಧಿಯಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ
3. ಬೆಂಗಳೂರು ಸೇರಿ ಸಣ್ಣಪುಟ್ಟ ಪಟ್ಟಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲ
4. ಸ್ಕಾಲರ್​ಶಿಪ್​ನಿಂದ ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಅದರಲ್ಲೂ ಹೆಣ್ಣುಮಕ್ಕಳಿಗೆ ಹೆಚ್ಚು ಲಾಭ
5. ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಯಾಗುವುದು.
6. ಪಿಂಚಣಿ ಹೆಚ್ಚಳದಿಂದ ವೃದ್ಧರು, ಅಂಗವಿಕಲರಿಗೆ ನೆರವು
ಸರ್ಕಾರ ಹಾಗೂ ಸಂಘಟನೆ ಸಂಬಂಧ ಚೆನ್ನಾಗಿದ್ದರೆ, ಸರ್ಕಾರ ಯಶಸ್ವಿಯಾಗುತ್ತದೆ. ಜನರು ಸಂತೋಷದಿಂದ ಇರುತ್ತಾರೆ ಎನ್ನುವುದಕ್ಕೆ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತವೇ ಸಾಕ್ಷಿಯಾಗಿದ್ದು, ಅವರದೇ ನೇತೃತ್ವದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ.
|ಡಿ.ವಿ.ಸದಾನಂದಗೌಡಕೇಂದ್ರ ಮಾಜಿ ಸಚಿವ
ಬೆಂಗಳೂರು:ರಾಜ್ಯದ ಸರ್ವ ಜನರ ಶ್ರೇಯೋಭಿವೃದ್ಧಿಯೊಂದಿಗೆ ಬಿಜೆಪಿ ತತ್ವ- ಸಿದ್ಧಾಂತಕ್ಕೆ ಬದ್ಧವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಚನೆ-ಯೋಜನೆಗಳಿಗೆ ಪಕ್ಷ ಸದಾ ಬೆಂಗಾವಲಾಗಿರುತ್ತದೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಅಭಯ ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸಿದ ಬೊಮ್ಮಾಯಿ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಉತ್ತಮ ಆಡಳಿತ, ಅಭಿವೃದ್ಧಿ ಕಾರ್ಯಗಳಿಗೆ ವೇಗ, ಆರ್ಥಿಕತೆ, ಜನರ ಜೀವನಮಟ್ಟ ಸುಧಾರಣೆಗೆ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಪಕ್ಷದ ಕಚೇರಿಗೆ ಭೇಟಿ, ಸಭೆಗಳಲ್ಲಿ ಪಾಲ್ಗೊಂಡು ಪಕ್ಷ ದೊಂದಿಗೆ ಸರ್ಕಾರವಿದೆ ಎಂಬ ಸಂದೇಶ ನೀಡಿದ್ದು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲೇ ಪಕ್ಷ ಎದುರಿಸಲಿದ್ದು, 150 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದರು. ಕರ್ನಾಟಕದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಎಲ್ಲರೊಂದಿಗೆ ಎಲ್ಲರ ವಿಕಾಸವನ್ನು ರಾಜ್ಯ ಸರ್ಕಾರ ಸಾಕಾರಗೊಳಿಸುತ್ತಿದೆ ಎಂದರು.
ಸಚಿವರಾದ ಎಸ್.ಟಿ.ಸೋಮಶೇಖರ್, ಆನಂದ್ ಸಿಂಗ್, ಸಂಸದ-ಶಾಸಕರು, ಪಕ್ಷದ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು:ಸಿಎಂ ಬಸವರಾಜ ಬೊಮ್ಮಾಯಿ 62ನೇ ಹುಟ್ಟುಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಪತ್ನಿ ಸಮೇತ ಗೋ ಪೂಜೆ ನೆರವೇರಿಸಿ, 11 ಹಸುಗಳನ್ನು ಆಜೀವ ದತ್ತು ಪಡೆದು ಗೋ ಸಂರಕ್ಷಣೆಗೆ ಮೇಲ್ಪಂಕ್ತಿ ಹಾಕಿದರು. ಬೆಳಗ್ಗೆ ಮನೆಯಲ್ಲಿ ಪತ್ನಿ ಚನ್ನಮ್ಮ ಜತೆ ಸೇರಿ ಗೋ ಪೂಜೆ ನೆರವೇರಿಸಿದ ಅವರು, ತರುವಾಯ ಹಸುವನ್ನು ಮನೆಯಲ್ಲಿ ಕರೆದುಕೊಂಡು ಗೋ ಗ್ರಾಸ ನೀಡಿದರು. ಬಳಿಕ ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹದ ಪಕ್ಕದಲ್ಲಿರುವ ಶ್ರೀ ಮಾರುತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಸಚಿವ ಸಂಪುಟ ಸಹೋದ್ಯೋಗಿಗಳು ಬೊಮ್ಮಾಯಿ ಅವರನ್ನು ಅಭಿನಂದಿಸಿದರು.
ಪಿಎಂ/ಎಚ್​ಎಂ ಹಾರೈಕೆ:ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಲ್ಹಾದವ ಜೋಶಿ, ಮತ್ತಿತರ ನಾಯಕರು, ಗಣ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಹಾರೈಸಿದ್ದಾರೆ.
ಕರೊನಾ ಅಲೆ: ಕರ್ನಾಟಕದಲ್ಲಿ ಯಾವ ರೂಪಾಂತರಿಯ ಪ್ರಭಾವ ಜಾಸ್ತಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
