ಬೆಂಗಳೂರು:ಯಾವುದೇ ಬಸ್​ನಲ್ಲೂ ಚಿಲ್ಲರೆ ಸಮಸ್ಯೆ ಮಾತ್ರ ತಪ್ಪಿದ್ದಲ್ಲ. ಚಿಲ್ಲರೆ ಕೊಡಿ ಎಂಬ ಕಂಡಕ್ಟರ್​ ಬೇಡಿಕೆಯನ್ನು ಪ್ರಯಾಣಿಕರಲ್ಲಿ ಕೆಲವರಾದರೂ ಎದುರಿಸಬೇಕಾಗುತ್ತದೆ. ಹಲವು ವರ್ಷಗಳಿಂದ ಕಾಡುತ್ತಲೇ ಇರುವ ಈ ಸಮಸ್ಯೆಗೆ ಇದೀಗ ಕಂಡಕ್ಟರ್​ ಕೊರಳಲ್ಲೇ ಪರಿಹಾರ ಕಲ್ಪಿಸಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಯ್ದ ಕೆಲವು ಬಸ್​ಗಳಲ್ಲಿ ಚಿಲ್ಲರೆ ಸಮಸ್ಯೆಗೆ ಈ ಪರಿಹಾರ ಒದಗಿಸಲಾಗಿದೆ. ಅಂದರೆ ಆ ಬಸ್​ನ ಕಂಡಕ್ಟರ್​ಗೆ ಖಾತೆಯ ಕ್ಯೂರ್​ ಕೋಡ್ ಕೊಟ್ಟು ಅದನ್ನು ಕೊರಳಿಗೆ ನೇತು ಹಾಕಿಕೊಂಡಿರಲು ಇಲಾಖೆ ಸೂಚಿಸಿದೆ. ಚಿಲ್ಲರೆ ಇರದ ಪ್ರಯಾಣಿಕರು ಈ ಕ್ಯೂರ್​ ಕೋಡ್ ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಖರೀದಿಸಬಹುದು. ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದರೆ ಇದು ಎಲ್ಲೆಡೆ ಜಾರಿಗೆ ಬರುವ ಸಾಧ್ಯತೆ ಇದೆ.
@nw_krtcis has introduced#UPIbased payments on board our buses with support of@PhonePe.Initial Pilot is being done in one depot.Further roll out will depend on the response from public and our staff#DigitalIndia#Cashless#Transportationpic.twitter.com/gK0GrsGfcC— Bharath Selvan (@Bharath_Selvan)September 1, 2023
@nw_krtcis has introduced#UPIbased payments on board our buses with support of@PhonePe.Initial Pilot is being done in one depot.Further roll out will depend on the response from public and our staff#DigitalIndia#Cashless#Transportationpic.twitter.com/gK0GrsGfcC
ಅಂದಹಾಗೆ, ಸಾರಿಗೆ ಸಂಸ್ಥೆ ಇಂಥದ್ದೊಂದು ವ್ಯವಸ್ಥೆ ಮಾಡಿದ್ದರೂ ಇದು ತಡವೇ ಎನ್ನಬಹುದು. ಏಕೆಂದರೆ ಚಿಲ್ಲರೆ ಸಮಸ್ಯೆಯಿಂದ ಬೇಸತ್ತ ಪ್ರಯಾಣಿಕರು ಕ್ಯೂರ್​ ಕೋಡ್ ಸಿಸ್ಟಂ ತನ್ನಿ ಎಂದು ಎರಡು ವರ್ಷಗಳ ಹಿಂದಿನಿಂದಲೇ ಬೇಡಿಕೆ ಇಡುತ್ತ ಬಂದಿದ್ದರು. ಬಿಎಂಟಿಸಿ ಬಸ್​ನಲ್ಲಿ ಚಿಲ್ಲರೆ ಸಮಸ್ಯೆ ತಪ್ಪಿಸಲು ಏಕೆ ಕ್ಯೂರ್ ಕೋಡ್ ವ್ಯವಸ್ಥೆ ಕಲ್ಪಿಸಬಾರದು ಎಂದು ಪ್ರಯಾಣಿಕರೊಬ್ಬರು 2021ರಲ್ಲೇ ಕೇಳಿದ್ದರು. ಕಡೆಗೂ ಅದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಜಾರಿಗೆ ಬಂದಿದೆ.
KSRTC ಯನ್ನು ಯಾವಾಗ BHIM UPI ತಂತ್ರಜ್ಞಾನಕ್ಕೆ ಒಳಪಡಿಸುತ್ತೀರ?ಇನ್ನು ಎಷ್ಟು ದಿನ ಪ್ರಯಾಣಿಕರು ಮತ್ತು KSRTC ನಿರ್ವಾಹಕರು ಚಿಲ್ಲರೆ ಸಮಸ್ಯೆಯಿಂದ ಜಗಳವಾಡಬೇಕು?ಎಲ್ಲ ನಿರ್ವಾಹಕರಿಗೂ BHIM UPI QR code lable ಅವರ ಕೊರಳಿಗೆ ಹಾಕಿ,ಅವರ ಮೊಭೈಲ್ ನಂಬರ್ ಗೆ ಮೇಸೆಜ್ ಬರುವ ಹಾಗೆ ಮಾಡಿ,ಚಿಲ್ಲರೆ ಸಮಸ್ಯೆ ತಪ್ಪುತ್ತದೆ.@LaxmanSavadi— @GMM KUMAR(ModiKaParivar) (@mohankumargm86)January 13, 2021
KSRTC ಯನ್ನು ಯಾವಾಗ BHIM UPI ತಂತ್ರಜ್ಞಾನಕ್ಕೆ ಒಳಪಡಿಸುತ್ತೀರ?ಇನ್ನು ಎಷ್ಟು ದಿನ ಪ್ರಯಾಣಿಕರು ಮತ್ತು KSRTC ನಿರ್ವಾಹಕರು ಚಿಲ್ಲರೆ ಸಮಸ್ಯೆಯಿಂದ ಜಗಳವಾಡಬೇಕು?ಎಲ್ಲ ನಿರ್ವಾಹಕರಿಗೂ BHIM UPI QR code lable ಅವರ ಕೊರಳಿಗೆ ಹಾಕಿ,ಅವರ ಮೊಭೈಲ್ ನಂಬರ್ ಗೆ ಮೇಸೆಜ್ ಬರುವ ಹಾಗೆ ಮಾಡಿ,ಚಿಲ್ಲರೆ ಸಮಸ್ಯೆ ತಪ್ಪುತ್ತದೆ.@LaxmanSavadi
Sir how about giving a QR code to the BMTC conducters?Its very tough during morning journey (ಚಿಲ್ಲರೆ ಕೊಡಿ ಸರ್ ಅಂತ ಅವ್ರು ಚಿಲ್ರೆ ಇಲ್ಲ ಸರ್ ಅಂತ ನಾವು)#BMTC#bangalore#Karnataka@CMofKarnataka@sriramulubjppic.twitter.com/zCV3Sh4Q5Y— ಗುರುವ (@Kiran15808879)November 8, 2021
Sir how about giving a QR code to the BMTC conducters?Its very tough during morning journey (ಚಿಲ್ಲರೆ ಕೊಡಿ ಸರ್ ಅಂತ ಅವ್ರು ಚಿಲ್ರೆ ಇಲ್ಲ ಸರ್ ಅಂತ ನಾವು)#BMTC#bangalore#Karnataka@CMofKarnataka@sriramulubjppic.twitter.com/zCV3Sh4Q5Y
ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
