ದಾವಣಗೆರೆ:ಗೃಹಿಣಿಯೊಬ್ಬಳು 11 ತಿಂಗಳ ಮಗುವಿಗೆ ನೇಣುಬಿಗಿದು ಸಾಯಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಚನ್ನಗಿರಿ ತಾಲೂಕು ದೊಡ್ಡೇರಿಕಟ್ಟೆ ಗ್ರಾಮದಲ್ಲಿ ಇಂದು ಸಂಭವಿಸಿದೆ.
ಶ್ವೇತಾ (26) ಮತ್ತು ಈಕೆಯ ಕಿರಿಯ ಪುತ್ರಿ ಜಾಹ್ನವಿ ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಮನೆ ಮುಂದೆ ಚರಂಡಿ ಕಾಮಗಾರಿಗಾಗಿ ಜೆಸಿಬಿ ಬಂದಿದ್ದರಿಂದ ಶ್ವೇತಾಳ ತಂದೆ ತಿಮ್ಮಪ್ಪ ಆ ಕೆಲಸ ಮಾಡಿಸುತ್ತಿದ್ದರು. ಶ್ವೇತಾಳ ಹಿರಿಯ ಮಗಳು ಯಶಸ್ವಿನಿಯನ್ನ ಅಜ್ಜಿ ಲತಾ ತೋಟದ ಪೂಜೆಗೆಂದು ಕರೆದುಕೊಂಡು ಹೋಗಿದ್ದರು. ಮನೆಯಲ್ಲಿ ಶ್ವೇತಾ ಮತ್ತು ಜಾಹ್ನವಿ ಮಾತ್ರ ಇದ್ದರು.ಇದನ್ನೂ ಓದಿರಿತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ
ತೋಟದಲ್ಲಿ ಪೂಜೆ ನಡೆಯುತ್ತಿದ್ದರೆ ಇತ್ತ ಮನೆಯಲ್ಲಿ ತಾಯಿ-ಮಗು ದುರಂತ ಅಂತ್ಯ ಕಂಡಿದ್ದಾರೆ. ತಿಮ್ಮಪ್ಪ ನೀರು ಕುಡಿಯಲೆಂದು ಮನೆಗೆ ಬಂದಾಗ, ಮನೆಯ ಅಟ್ಟದ ಮೇಲೆ ತೊಲೆಗೆ ಮಗುವನ್ನ ನೇಣು ಹಾಕಿ ನಂತರ ತಾನೂ ನೇಣಿಗೆ ಕೊರಳೊಡ್ಡಿರುವುದು ಬೆಳಕಿಗೆ ಬಂದಿದೆ. ಏನೂ ಅರಿಯದ ಕಂದಮ್ಮ ನೇಣುಬಿಗಿದ ಸ್ಥಿತಿಯಲ್ಲಿ ಸತ್ತಿರು ದೃಶ್ಯ ಮನಕಲಕುವಂತಿತ್ತು.
ಶ್ವೇತಾಗೆ ಕೆಲ ತಿಂಗಳಿನಿಂದ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಗುಣವಾಗಿರಲಿಲ್ಲ. ಇದರಿಂದ ಆಕೆ ಮನನೊಂದಿದ್ದಳು ಎಂದು ತಂದೆ ತಿಮ್ಮಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಚನ್ನಗಿರಿ ಉಪವಿಭಾಗ ಡಿವೈಎಸ್ಪಿ ಬಸವರಾಜ್, ಸಿಪಿಐ ಆರ್.ಆರ್. ಪಾಟೀಲ್, ತಹಸೀಲ್ದಾರ್ ಪಟ್ಟರಾಜ್ ಗೌಡ, ಪಿಎಸ್‌ಐ ಶಿವರುದ್ರಪ್ಪ ಮೇಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

ಶಾಸಕರ ದೌರ್ಜನ್ಯ ಸಹಿಸಲಾಗ್ತಿಲ್ಲ.. ದಯಾಮರಣ ಕೊಡಿ ಎಂದು ಸಿಎಂ ಪುತ್ರನ ಬಳಿ ಕಣ್ಣೀರಿಟ್ಟ ಮಹಿಳೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
