ಬೆಂಗಳೂರು:ಪ್ರಧಾನಿ ಮೋದಿ ಅವರ ರೋಡ್​ ಶೋ ವೇಳೆ ಪುರೋಹಿತರು ಹಾಗೂ ಅರ್ಚಕರಿಂದ ಲೋಕಕಲ್ಯಾಣ ಹಾಗೂ ಮೋದಿಯವರ ಶ್ರೇಯೋಭಿವೃದ್ಧಿಗಾಗಿ ಮಂತ್ರ ಪಠಣ ನಡೆಯಲಿದೆ.
ಜಯನಗರ ಮೆಟ್ರೋ ನಿಲ್ದಾಣದ ಬಳಿ ಶ್ರೀ ಅಭಯ ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಮೋದಿ ರೋಡ್ ಶೋ ಹಾದುಹೋಗಲಿದೆ. ಈ ವೇಳೆ ಸುಮಾರು 50 ಮಂದಿ ಪುರೋಹಿತರು ಹಾಗೂ ಅರ್ಚಕರಿಂದ ವೇದ ಮಂತ್ರ ಪಠಣ ಕಾರ್ಯಕ್ರಮ ನಡೆಯಲಿದೆ. ಲೋಕಕಲ್ಯಾಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಶ್ರೇಯೋಭಿವೃದ್ಧಿಗಾಗಿ ಮಂತ್ರ ಪಠಣ ಮಾಡಲಿದ್ದಾರೆ.
ಇದನ್ನೂ ಓದಿ:ಭಾರತದ ಚಿನ್ನದ ಬೇಡಿಕೆ ಶೇ.17 ಇಳಿಕೆ: ವಿಶ್ವ ಚಿನ್ನ ಮಂಡಳಿ ವರದಿ
ಧಾನಿ ಮೋದಿ ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ನಿನ್ನೆ ರಾತ್ರಿಯೇ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಡು ಮಲ್ಲೇಶ್ವರ ದೇಗುಲದಲ್ಲಿ ಪ್ರಧಾನಿ ಮೋದಿ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪೊಲೀಸ್ ಮತ್ತು ಎಸ್ಪಿಜಿ ಕಾಡುಮಲ್ಲೇಶ್ವರದ ಭದ್ರತೆಯನ್ನು ವಸಿಕೊಂಡಿದ್ದಾರೆ. ಈಗಾಗಲೇ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ಪ್ರಧಾನಿ ಮೋದಿ ಅವರ ರೋಡ್​ ಶೋ ಉದ್ದಕ್ಕೂ ಜಾನಪದ ಕಲಾತಂಡಗಳ ಮೆರಗು ಇರಲಿದೆ. ಅಲ್ಲದೆ, ಸೃಷ್ಟಿಕಲಾ ವಿದ್ಯಾಲಯದ ವಿದ್ಯಾರ್ಥಿನಿಯರ ಮೂರು ತಂಡಗಳಿಂದ ಸೌತ್ ಎಂಡ್ ಸರ್ಕಲ್ ಬಳಿ ಪ್ರಧಾನಿ ಮೋದಿ ಮುಂದೆ ನೃತ್ಯ ಪ್ರದರ್ಶನ ನಡೆಯಲಿದೆ. ಸದ್ಯ ಸರ್ಕಲ್ ಬಳಿಕ ಕಲಾ ತಂಡ ಅಭ್ಯಾಸ ಮಾಡುತ್ತಿದೆ.
ಪ್ರಧಾನಿ ಮೋದಿ ರೋಡ್​ ಶೋ ಹಿನ್ನೆಲೆ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಸಂಚರಿಸದೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್​ಬಿಐ ಲೇಔಟ್, ಜೆ.ಪಿ. ನಗರ, ರೋಸ್ ಗಾರ್ಡನ್, ಜೆ.ಪಿ. ನಗರ, ಸಿರ್ಸಿ ಸರ್ಕಲ್, ಜೆ.ಜೆ. ನಗರ, ಬಿನ್ನಿಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ರಸ್ತೆ, ಆಮುಗಂ ಸರ್ಕಲ್, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣಾಶ್ರಮ, ಉಮಾ ಟಾಕೀಸ್, ಟಿ.ಆರ್. ಮಿಲ್, ಚಾಮರಾಜಪೇಟೆ ಮುಖ್ಯ ರಸ್ತೆ, ಬಾಳೇಕಾಯಿ ಮಂಡಿ, ಕೆ.ಪಿ. ಅಗ್ರಹಾರ, ಮಾಗಡಿ ಮುಖ್ಯರಸ್ತೆ, ಚೋಳೂರುಪಾಳ್ಯ, ಎಂ.ಸಿ. ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ಎಂ.ಸಿ. ಲೇಔಟ್, ನಾಗರಬಾವಿ ಮುಖ್ಯರಸ್ತೆ, ಬಿಜಿಎಸ್ ಮೈದಾನ, ಹಾವನೂರು ಸರ್ಕಲ್, ಬಸವೇಶ್ವರನಗರ 8ನೇ ಮುಖ್ಯರಸ್ತೆ ಮತ್ತು 15ನೇ ಮುಖ್ಯರಸ್ತೆ, ಶಂಕರಮಠ, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ವೃತ್ತ, ಎಂಕೆಕೆ ರಸ್ತೆ, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆ ಮತ್ತು ಸ್ಯಾಂಕಿ ರಸ್ತೆ ಬಳಸದಂತೆ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮತದಾನ ಮಾಡದವರಿಗೆ ಮೇ 10ರಂದು ಪ್ರವಾಸಿ ಸ್ಥಳಗಳಲ್ಲಿ ನೋ ಎಂಟ್ರಿ!
* ರೋಡ್ ಶೋ ಮಾರ್ಗದ ಅಕ್ಕಪಕ್ಕದ ಕಟ್ಟಡ, ಮನೆಗಳ ಮಹಡಿ ಮೇಲೆ ನಿಲ್ಲಲು ಅವಕಾಶವಿಲ್ಲ.* ಹೋಟೆಲ್, ಅಂಗಡಿ, ಮಳಿಗೆಗಳ ವಹಿವಾಟು ಬಂದ್.* ಕಟ್ಟಡಗಳ ಬಳಿ, ಒಳಗೆ ಅಪರಿಚಿತರು ಒಳಪ್ರವೇಶಿಸದಂತೆ ನಿರ್ಬಂಧ.* ನಿಗದಿತ ಸ್ಥಳದಲ್ಲಿ ನಿಂತು ರೋಡ್ ಶೋ ವೀಕ್ಷಿಸಬೇಕು.* ಕಟ್ಟಡಗಳ ಒಳಗೆ ಮತ್ತು ಹೊರಗೆ ಅಡ್ಡಾಡಲು ಅವಕಾಶವಿಲ್ಲ

ಮಲ್ಲೇಶ್ವರದ ಕಾಡು ಮಲ್ಲೇಶ್ವರ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ: ದೇವಸ್ಥಾನದಲ್ಲಿ ಸಕಲ ಸಿದ್ಧತೆ

ಮನ್ ಕೀ ಬಾತ್​ಗೆ ಗೈರಾದ ವಿದ್ಯಾರ್ಥಿಗಳಿಗೆ ದಂಡ!

ಜಿಎಸ್​ಟಿ ಸಂಗ್ರಹ ಮಾಸಿಕ ದಾಖಲೆ; ಏಪ್ರಿಲ್​ನಲ್ಲೇ 1,87,035 ಕೋಟಿ ರೂ. ಕಲೆಕ್ಷನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
