ಹಾಸನ:ತಾಳಿ ಕಟ್ಟುವ ವೇಳೆ ಪ್ರೇಯಸಿಯ ವಿವಾಹಕ್ಕೆ ಮಾಜಿ ಪ್ರಿಯಕರ ಎಂಟ್ರಿ ಕೊಟ್ಟ ಪರಿಣಾಮ ಮದುವೆ ಮುರಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ.
ಗುರುವಾರ (ಮಾರ್ಚ್​ 21) ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಬೇಲೂರು ಮೂಲದ ಯುವತಿ ಹಾಗೂ ಶಿವಮೊಗ್ಗ ಮೂಲದ ಯುವಕನ ಮದುವೆಯನ್ನು ಬೇರೊಬ್ಬ ಯುವಕ ಎಂಟ್ರಿ ಕೊಟ್ಟು ನಿಲ್ಲಿಸಿದ್ದಾನೆ. ಹಾಸನ ಹೊರವಲಯದ ಗವೇನಹಳ್ಳಿಯ ನವೀನ್ ಮದುವೆಗೆ ಅಡ್ಡಿಪಡಿಸಿದ ಯುವಕ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಬೀದರ್​ ಕ್ಷೇತ್ರಕ್ಕೆ ಈಶ್ವರ್​ ಖಂಡ್ರೆ ಪುತ್ರನ ಹೆಸರು ಫೈನಲ್​; ಸಿಎಂ-ಡಿಸಿಎಂ ಭೇಟಿಯಾಗಿ ಅಭಿನಂದಿಸಿದ ಸಾಗರ್​
ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್​​ ಮದುವೆಗೆ ಅಡ್ಡಿ ಪಡಿಸಿದ್ದಾನೆ. ತಾಳಿ ಕಿತ್ತುಕೊಂಡು ಯುವತಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟುಹಿಡಿದಿದ್ದಾನೆ. ಹೀಗಾಗಿ ಕಲ್ಯಾಣಮಂಟಪದಲ್ಲಿ ಕೆಲಕಾಲ‌ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪ್ರೀತಿ ವಿಚಾರ ತಿಳಿದು ಮದುಮಗ ಪ್ರಮೋದ್ ಕುಮಾರ್ ಮದುವೆ ಬೇಡ ಎಂದು ಕಲ್ಯಾಣ ಮಂಟಪದಿಂದ ಹೊರಟು ಹೋಗಿದ್ದಾನೆ.
ವಿಚಾರ ತಿಳಿದು ಮಧ್ಯಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವತಿ ತನ್ನನ್ನ ಪ್ರೀತಿಸುತ್ತಿದ್ದಳು. ತನಗೆ ವಿಚಾರ ಮುಚ್ಚಿಟ್ಟು ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬೇಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
