ಬೆಂಗಳೂರು:ಹಳೆಯ ಕಥೆಗಳನ್ನು ಪ್ರಸ್ತುತ ಕಾಲದ ಹೊಸ ಓದುಗರಿಗೆ ಪರಿಚಯಿಸುವ ಅಗತ್ಯದ ಹಿನ್ನೆಲೆಯಲ್ಲಿ ‘ಚಾರುವಸಂತ’ ಕಾವ್ಯ ಬರೆದಿದ್ದೇನೆ ಎಂದು ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಹೇಳಿದ್ದಾರೆ. ಅಮನ್ ಪ್ರಕಾಶನದ ವತಿಯಿಂದ ಭಾನುವಾರ ಖಾಸಗಿ ಹೋಟೆಲ್​ನಲ್ಲಿ ಏರ್ಪಡಿಸಿದ್ದ ಹಂಪ ನಾಗರಾಜಯ್ಯ ರಚಿಸಿರುವ ‘ಚಾರುವಸಂತ’ ಕಾವ್ಯವನ್ನು ಡಾ. ಮಾಹೇರ್ ಮನ್ಸೂರ್ ಮತ್ತು ಡಾ. ಷಾಕಿರ ಖಾನಂ ಹಿಂದಿ ಭಾಷೆಗೆ ಅನುವಾದಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾವ್ಯವನ್ನು ಬರೆಯುವ ಮುನ್ನ ಒಂದು ದಿನ ನಾನು ಮಲಗಿದ್ದ ಸಂದರ್ಭದಲ್ಲಿ ವಾಗ್ದೇವಿ ದರ್ಶನವಾಯಿತು. ಇದಾದ ಬಳಿಕ ಒಂದು ತಿಂಗಳಲ್ಲಿ ಈ ಕಾವ್ಯವನ್ನು ರಚಿಸಿದ್ದೆ. 2003ರಲ್ಲಿ ಪ್ರಕಟವಾಯಿತು. ದೇಶೀಯ ಕಾವ್ಯವಾಗಿರುವ ಇದು 16 ಭಾಷೆಗಳಿಗೆ ಅನುವಾದವಾಗಿದ್ದು, ಮೂರನೇ ಬಾರಿ ಹಿಂದಿ ಭಾಷೆಗೆ ಅನುವಾದಗೊಂಡಿರುವುದು ಸಂತಸ ತಂದಿದೆ ಎಂದರು.
ಯಾವ ಮಡಿವಂತಿಕೆ ಇಲ್ಲದೆ ಪ್ರಾಚೀನ, ಆಧುನಿಕ ಹಾಗೂ ನವ್ಯ ಸೇರಿ ಎಲ್ಲ ತರಹದ ಕಾವ್ಯಗಳನ್ನು ಅಭ್ಯಾಸ ಮಾಡಿದೆ. ವಿಶೇಷವಾಗಿ ಸಂಸ್ಕೃತ ಮತ್ತು ಪ್ರಾಕೃತ ಭಾಷೆಯನ್ನು ಅಧ್ಯಯನ ಮಾಡುವ ಅವಕಾಶ ನನಗೆ ಒದಗಿ ಬಂದಿತ್ತು. ಕಾಲೇಜಿನಲ್ಲಿ ಸಂಸ್ಕೃತವನ್ನು ಕಲಿತೆ. ವೈಯಕ್ತಿಕವಾಗಿ ಪ್ರಾಕೃತ ಕಾವ್ಯವನ್ನು ಅಭ್ಯಾಸ ಮಾಡಿದೆ. ಈ ಸಂದರ್ಭದಲ್ಲಿ ಸಾಮಾನ್ಯ ಜನರಿಗೂ ರಾಮಾಯಣ ಕಥೆ ತಲುಪಿರುವುದು ತಿಳಿಯಿತು. ಸಂಸ್ಕೃತದಲ್ಲಿ ಬಿಡಿ ಕಥೆಗಳನ್ನು ಇಟ್ಟುಕೊಂಡು ಕೆಲವರು ದೊಡ್ಡ ಕಾವ್ಯಗಳನ್ನು ರಚಿಸಿದ್ದಾರೆ. ಅಂತಹ ಕಥೆಗಳಲ್ಲಿ ಚಾರುವಸಂತ ಕಥೆಯೂ ಒಂದು. ಅನನ್ಯತೆ, ಮೋಹಕತೆ, ಕಥಾನಾಯಕನ ಬದುಕಿನ ಏಳು-ಬೀಳುಗಳು, ದೊಡ್ಡ ಕುಟುಂಬ, ಒಬ್ಬ ವರ್ತಕ, ಸ್ತ್ರೀಯರ ದುಃಖ-ದುಮ್ಮಾನ, ಅವಿಭಕ್ತ ಕುಟುಂಬಗಳು ಹಾಗೂ ತ್ಯಾಗ ಸೇರಿ ಎಲ್ಲವನ್ನೂ ಒಳಗೊಂಡ ಅಂಶಗಳು ‘ಚಾರುವಸಂತ’ ಕಥೆಯಲ್ಲಿದೆ ಹಂಪನಾ ಹೇಳಿದರು.
ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ಹಿರಿಯ ವಿದ್ವಾಂಸ ಪ್ರೊ. ಅಶ್ವತ್ಥನಾರಾಯಣ ಘಟ್ಟಮ ರಾಜು, ಅನುವಾದಕರಾದ ಡಾ. ಮಾಹೇರ್ ಮನ್ಸೂರ್ ಮತ್ತು ಡಾ. ಷಾಕಿರ ಖಾನಂ ಮತ್ತಿತರರಿದ್ದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅದಷ್ಟೂ ಕಾವ್ಯ ಮತ್ತು ಕವಿತೆಗಳನ್ನು ಓದಬೇಕೆಂದು ಅಗಾಗ ಹೇಳುತ್ತಿರುತ್ತೇನೆ. ಕಾವ್ಯಗಳಲ್ಲಿ ವಿಷಯಗಳು ಸಮಗ್ರವಾಗಿ ಇರುತ್ತದೆ. ಚಿಕ್ಕದನ್ನು ದೊಡ್ಡದಾಗಿ ಹೇಳುವ ಶಕ್ತಿ ಕವಿತೆಗೆ ಇದೆ. ಚಾರುವಸಂತ ಕಾವ್ಯದಲ್ಲಿ ಪ್ರೇಮ, ವಾತ್ಸಲ್ಯ, ಸಂಸಾರ ಮತ್ತು ವ್ಯಾಪಾರ ಸೇರಿ ಎಲ್ಲ ಅಂಶಗಳಿವೆ. ಜಾಗತೀಕರಣ ಮತ್ತು ಖಾಸಗೀಕರಣ ಬಗ್ಗೆಯೂ ಇದೆ. ಇವತ್ತಿನ ಸಾಮಾಜಿಕ ಸಮಸ್ಯೆಗಳ ಮೇಲೆ ಅದು ಬೆಳಕು ಚೆಲ್ಲುತ್ತದೆ.
|ರವೀಂದ್ರ ಭಟ್ಟಪ್ರಜಾವಾಣಿ ಸಂಪಾದಕ
ಮತ್ತೆ ಬಿಡುಗಡೆ ಆಗಲಿದೆ ಅಪ್ಪು ಅಭಿನಯದ ಕೊನೇ ಚಿತ್ರ ಜೇಮ್ಸ್​; ಕಾರಣವಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − two =
Remember me
