ಬೆಂಗಳೂರು:ಗೂಗಲ್, ಈಗ ಕೇವಲ ಸರ್ಚ್ ಇಂಜಿನ್ ಆಗಿ ಉಳಿದಿಲ್ಲ. ಇದು ಅದೆಷ್ಟೋ ಜನರಿಗೆ ಅಂತರ್ಜಾಲದ ಪ್ರವೇಶ ಬಿಂದುವಾಗಿದೆ. ಆದರೆ, ಕೃತಕ ಬುದ್ಧಿಮತ್ತೆ ಜಗತ್ತನ್ನು ಆಕ್ರಮಿಸಿಕೊಂಡಂತೆ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಈಗ ಮುಳುಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಎಐ ಚಾಟ್‌ಬಾಟ್ – ಚಾಟ್​ಜಿಪಿಟಿನಿಂದಾಗಿ ಗೂಗಲ್​ ಚಿಂತಾಕ್ರಾಂತವಾಗಿದೆ.
1998 ರಲ್ಲಿ ಹುಟ್ಟಿದಾಗಿನಿಂದ, ಕೇವಲ ಸರ್ಚ್ ಇಂಜಿನ್ ಆಗಿದ್ದ ಗೂಗಲ್, ಯಾಹೂ, ಎಒಎಲ್​, ಬಿಂಗ್​ ನಂತಹ ಇತರ ಸರ್ಚ್ ಇಂಜಿನ್‌ಗಳನ್ನು ಮಾರುಕಟ್ಟೆಯಲ್ಲಿ ಸೋಲಿಸಿ ಮುನ್ನಡೆದಿದೆ. ಇದೀಗ, ಕೃತಕ ಬುದ್ಧಿಮತ್ತೆ ಅಥವಾ ಎಐ ಮಾಹಿತಿ ಪ್ರಪಂಚದ ಸರದಾರ ಗೂಗಲ್​ಅನ್ನು ಸೋಲಿಸಲಿದೆ ಎನ್ನಲಾಗುತ್ತಿದೆ.
ಎಐ ಸಂಶೋಧನಾ ಕಂಪನಿಯಾದ ಓಪನ್​ ಎಐ (OpenAI) ತನ್ನ ಚಾಟ್​ಜಿಪಿಟಿ(ChatGPT) ಎನ್ನುವ ಒಂದು ಚಾಟ್‌ಬಾಟ್ಅನ್ನು ಜಗತ್ತಿನ ಎದುರಿಟ್ಟಾಗ ಅದು ಅದರ ಸೃಜನಶೀಲ ಉತ್ತರಗಳಿಗಾಗಿ ವೈರಲ್ ಆಗಿತ್ತು.
ಅಂದಿನಿಂದ, ನಾವು ಗೂಗಲ್​ನಲ್ಲಿ ಟೈಪ್​ ಮಾಡಿ ಸಂಬಂಧಿಸಿದ ವೆಬ್​ಸೈಟನ್ನು ಹುಡುಕಿ ಉತ್ತರ ಓದುವುದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ. ಚಾಟ್ ​ಜಿಪಿಟಿ ಅಂತಹ ಎಐ ಬಳಸಿಕೊಂಡು ಕೇಳಿದ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಸ್ಕ್ರೀನ್​ ಮೇಲೆಯೇ ನೋಡಬಹುದು ಅಥವಾ ಕೇಳಬಹುದು. ಇದು ಗೂಗಲ್​ಗೆ ಅತೀ ದೊಡ್ಡ ಸವಾಲನ್ನು ಎಸೆದಿದೆ.
ಗೂಗಲ್​ ಬಳಿ ಎಐ ಇಲ್ಲವೇ? ಇದ್ದರೂ ಚಾಟ್ ​ಜಿಪಿಟಿ ಇಂದ ಅದಕ್ಕೆ ಆಗುತ್ತಿರುವ ಸಂಕಷ್ಟ ಏನು?ಗೂಗಲ್​, ತನ್ನ ಆದಾಯವನ್ನು ಗಳಿಸುವುದು ಜಾಹೀರಾತುಗಳಿಂದ. ನಾವು ಏನನ್ನೇ ಹುಡುಕಿದರೂ ಸರ್ಚ್​ ರಿಸಲ್ಟ್​ ವಬರುವಾಗ ಎಲ್ಲದರ ಮೇಲೆ ಜಾಹೀರಾತುಗಳನ್ನೇ ನಾವು ಕಾಣಬಹುದು. ಇದೇ ಸಮಸ್ಯೆಯ ಮೂಲ. ಚಾಟ್​ಜಿಪಿಟಿಈರೀತಿ ಕಾರ್ಯ ನಿರ್ವಹಿಸುವುದಿಲ್ಲ. ಬದಲಾಗಿ, ನಾವು ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ ಬೇಕಾದ ಉತ್ತರವನ್ನು ತಾನೇ ಅಂತರ್ಜಾಲದಲ್ಲಿ ಹುಡುಕಿ ಥೇಟ್​ ಮನುಷ್ಯರಂತೆಯೇ ಸರಳ ವಾಕ್ಯಗಳನ್ನು ರಚಿಸಿ ಉತ್ತರಿಸುತ್ತದೆ. ಇಲ್ಲಿ ನಮ್ಮ ಹಾಗೂ ನಮಗೆ ಬೇಕಾದ ಉತ್ತರದ ನಡುವೆ ಯಾವುದೇ ರೀತಿಯ ಜಾಹೀರಾತುಗಳು ಇರುವುದಿಲ್ಲ.
ಹಾಗಾದರೆ ಗೂಗಲ್​ನ ವಾಯ್ಸ್​ ಅಸಿಸ್ಟೆಂಟ್​ ಏನು?ಗೂಗಲ್​ನ ವಾಯ್ಸ್​ ಅಸಿಸ್ಟೆಂಟ್​ ಕೂಡ ಬಹುತೇಕ ಚಾಟ್​ಜಿಟಿಪಿಯಂತೆಯೇ ಕೆಲಸ ಮಾಡಿದರೂ ಅದು ಎಲ್ಲಾ ರೀತಿಯ ಕ್ಲಿಷ್ಟ ಪ್ರಶ್ನೆಗಳಿಗೂ ಸಮರ್ಪಕವಾಗಿ ಉತ್ತರಿಸುವುದಿಲ್ಲ. ಅನೇಕ ಬಾರಿ ಅದು ನಮಗೆ ಬೇಕಾದ ಉತ್ತರ ಇರುವ ವೆಬ್​ಸೈಟಿನ ಬಗ್ಗೆ ಮಾಹಿತಿ ನೀಡುತ್ತದೆ. ಈ ಮೂಲಕ ಅದು ಜಾಹೀರಾತಿನ ಮೂಲಕ ಬರುವ ಆದಾಯವನ್ನು ಅದು ಕಾಪಾಡಿಕೊಳ್ಳುತ್ತದೆ. ಹೀಗಾಗಿ ಗೂಗಲ್​, ಈ ರೀತಿಯ ಹೊಸ ಟೆಕ್ನಾಲಜಿ ಎದುರು ಗೆಲ್ಲಬೇಕಾದರೆ ತನ್ನ ಬಿಸಿನೆಸ್​ ಮಾಡೆಲ್​ ಕೂಡ ಬದಲಾಯಿಸಿಕೊಳ್ಳ ಬೇಕಾಗುತ್ತದೆ. ಇಂದು ಗೂಗಲ್​ಗೆ ಇರುವ ಸಾಮರ್ಥ್ಯದಲ್ಲಿ ಇದು ಸಾಧ್ಯ ಕೂಡ. ಆದರೆ ಅವರು ಈ ಜಾಹೀರಾತತುಗಳನ್ನು ಪ್ರದರ್ಶಿಸಲು ಹೊಸ ರೀತಿಯ ಉಪಾಯ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಗೂಗಲ್​ನ ಅಂತ್ಯ ಕಟ್ಟಿಟ್ಟ ಬುತ್ತಿ.
ChatGPT ರೀತಿಯಲ್ಲೇ DALL-E ಕೂಡ ಕಾರ್ಯನಿರ್ವಹಿಸುತ್ತಿದೆ. OpenAI ನ, ಪಠ್ಯ ಪ್ರಾಂಪ್ಟ್‌ಗಳ ಆಧಾರದ ಮೇಲೆ ನೀಡುವ ಉತ್ತರಗಳು, ಫಲಿತಾಂಶಗಳು ಜಗತ್ತನ್ನೇ ಬೆರಗುಗೊಳಿಸಿವೆ. ಹಾಗಾಗಿ, ಗೂಗಲ್ ಚಿಂತಿಸಬೇಕಾದುದು ಕೇವಲ ChatGPT ಬಗ್ಗೆ ಮಾತ್ರ ಅಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಹಾಗಾದರೆ ಚಾಟ್​ ಜಿಟಿಪಿ ಅಂತಹ ಬಾಟ್​ಗಳು ಮುಂದಿನ ಭವಿಷ್ಯವೇ?ಅಲ್ಲ. ಏಕೆಂದರೆ ಸದ್ಯಕ್ಕೆ ಇವು ನಾವು ಕೇಳಿರುವ ಪ್ರಶ್ನೆಗಳ ಆಧಾರದಲ್ಲೇ ನಮ್ಮ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡು ನಾವು ಇಷ್ಟಪಡುವ ಉತ್ತರಗಳನ್ನು ನೀಡುತ್ತಿವೆ. ಈ ಮಾದರಿಯ ಸಮಸ್ಯೆ ಏನಪ್ಪಾ ಎಂದರೆ ಒಂದು ನಿರ್ದಿಷ್ಟ ಅವಧಿಯ ನಂತರ ಈ ಬಾಟ್​, ಅಂತರ್ಜಾಲದಲ್ಲೇ ಲಭ್ಯ ಇರುವ ಸುಳ್ಳು ಮಾಹಿತಿಯನ್ನೂ ಜನರಿಗೆ ತಲುಪಿಸಬಹುದು. ಈ ಸಮಸ್ಯೆಯನ್ನು ಮೀರಿ ಚಾಟ್​ಬಾಟ್​ಗಳು ಬೆಳೆದರೆ ಇವು ಖಂಡಿತವಾಗಿಯೂ ಮಾಹಿತಿ ಜಗತ್ತಿನ ಮೇಲೆ ಗೂಗಲ್​ಗೆ ಇರುವ ಪಾರುಪತ್ಯವನ್ನು ಅಂತ್ಯಗೊಳಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 3 =
Remember me
