


ಶಿವಾನಂದ ತಗಡೂರು,ಬೆಂಗಳೂರು:ಬೇಸಿಗೆ ಮುನ್ನವೇ ಇಷ್ಟೊಂದು ವಿದ್ಯುತ್ ಕೊರತೆ ಎದುರಾಗುವುದೆಂದು ರಾಜ್ಯ ಸರ್ಕಾರ ನಿರೀಕ್ಷಿಸಿರಲಿಲ್ಲ. ವಿದ್ಯುತ್ ಉತ್ಪಾದನೆಗೆ ಹಿಂದಿನ ಸರ್ಕಾರಗಳು ಆದ್ಯತೆ ನೀಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎನ್ನುವುದನ್ನು ಸ್ವತಃ ಮುಖ್ಯಮಂತ್ರಿಗಳೇ ವ್ಯಕ್ತಪಡಿಸಿರುವುದು ಈಗಿನ ವಾಸ್ತವ ಸ್ಥಿತಿಗೆ ಹಿಡಿದ ಕನ್ನಡಿ.ನಾಡು ಬೆಳಗಿಸಲು ಕರ್ನಾಟಕ ವಿದ್ಯುತ್ ನಿಗಮಕ್ಕೆ (ಕೆಪಿಸಿ) ಮೂಲಕ ಕೈಗೆತ್ತಿಕೊಂಡಿದ್ದ ಛತ್ತೀಸ್‌ಗಡ ವಿದ್ಯುತ್ ಯೋಜನೆಗಳಿಗೆ ಸರ್ಕಾರವೇ ದಶಕದ ಹಿಂದೆಯೇ ಎಳ್ಳು ನೀರು ಬಿಟ್ಟಿದ್ದ ಪರಿಣಾಮ ಈ ವರ್ಷ ದುಬಾರಿ ಬೆಲೆ ತೆರಬೇಕಾಗಿದೆ.ವಿದ್ಯುತ್ ಸ್ವಾವಲಂಬಿ ಸಾಮರ್ಥ್ಯದ ಕನಸಿನಲ್ಲಿ ಬೀಗುತ್ತಿದ್ದ ರಾಜ್ಯಕ್ಕೆ ಈ ಬಾರಿ ಆಘಾತ ಎದುರಾಗಿದ್ದು, ಮತ್ತೆ ವಿದ್ಯುತ್ ಉತ್ಪಾದನೆಯತ್ತ ಗಂಭೀರವಾಗಿ ಗಮನಹರಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಏನಿದು ಛತ್ತೀಸ್‌ಗಡ ಯೋಜನೆ?ವಿದ್ಯುತ್ ಬರ ನೀಗಿಸುವ ನಿಟ್ಟಿನಲ್ಲಿ 2008ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಛತ್ತೀಸ್‌ಗಡದಲ್ಲಿ 1600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕೈಗೆತ್ತಿಕೊಂಡಿತ್ತು.ಉತ್ತರ ಭಾರತ ರಾಜ್ಯಗಳಿಂದ ಕಲ್ಲಿದ್ದಲನ್ನು ಇಲ್ಲಿಗೆ ತಂದು ವಿದ್ಯುತ್ ಉತ್ಪಾದನೆ ಮಾಡುವುದು ದುಬಾರಿ ಆಗುವುದರಿಂದ ಅಲ್ಲಿಯೇ ಘಟಕ ಸ್ಥಾಪನೆ ಮಾಡಿ ವಿದ್ಯುತ್ ಉತ್ಪಾದನೆ ಮಾಡುವುದು ಸೂಕ್ತ ಎನ್ನುವ ನಿರ್ಣಯಕ್ಕೆ ಬಂದಿದ್ದ ಯಡಿಯೂರಪ್ಪ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು. ಅದಕ್ಕೆ ಅಗತ್ಯ ಆರ್ಥಿಕ ನೆರವು ಬಜೆಟ್‌ನಲ್ಲಿ ಒದಗಿಸಿದ್ದರು.ಛತ್ತೀಸ್‌ಗಡ ಸರ್ಕಾರದ ಸಹಯೋಗದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದರಿಂದ ಅಲ್ಲಿನ ಸರ್ಕಾರ ಈಗಾಗಲೆ 200 ಕೋಟಿ ರೂ ಅಂದಾಜಿನಲ್ಲಿ 1100 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಟ್ಟಿದೆ. ಮಹಾನದಿಯಿಂದ ನೀರು ಪಡೆಯಲು ಯೋಜನೆಗೆ ಅಗತ್ಯವಿರುವ ಬ್ಯಾರೇಜ್ ನಿರ್ಮಾಣ ಕಾಮಗಾರಿಯೂ ಆಗಿದೆ. ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳುವುದು ಬಾಕಿ ಇದೆ. ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಯಂತ್ರೋಪಕರಣ ಅಳವಡಿಕೆ ಮತ್ತಿತರ ಕೆಲಸಗಳು ಮಾತ್ರ ಆಗಬೇಕಾಗಿದೆ. ಕಲ್ಲಿದ್ದಲು ಹಂಚಿಕೆ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡರೆ, ರಾಜ್ಯಕ್ಕೆ ವಿದ್ಯುತ್ ಲಭ್ಯವಾಗುವ ಹಾದಿ ಸುಲುಭವಾಗಲಿದೆ.
ಎನ್‌ಟಿಪಿಸಿ ಸಹಭಾಗಿತ್ವಕ್ಕೆ ಯತ್ನಛತ್ತೀಸ್‌ಗಡದ ಈ ವಿದ್ಯುತ್ ಯೋಜನೆಗೆ ಎನ್‌ಟಿಪಿಸಿ ಜೊತೆಯಲ್ಲಿ ಕೈ ಜೋಡಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಟಿಪಿಸಿ ಅಧಿಕಾರಿಗಳ ಜತೆ ಮಾತುಕತೆ ನಡೆದು, ಸರ್ಕಾರದ ಅನುಮತಿ ನಿರೀಕ್ಷಿಸುವ ಹಂತಕ್ಕೆ ಹೋಗಿತ್ತು. ಯೋಜನೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ)ಗೆ ಶೇ.51 ಪಾಲು ಇಟ್ಟುಕೊಂಡು, ಶೇ.49 ಪಾಲನ್ನು ಎನ್‌ಟಿಪಿಸಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿತ್ತು. ಆದರೆ, ಈ ತನಕ ಎನ್‌ಟಿಪಿಸಿ ಸಹಭಾಗಿತ್ವ ಬಗ್ಗೆ ಯಾವುದೇ ಅಂತಿಮ ತೀರ್ಮಾನಗಳು ಆಗಲಿಲ್ಲ. ಈಗಲಾದರೂ ಸರ್ಕಾರ ಈ ಬಗ್ಗೆ ಗಮನ ನೀಡಬೇಕಿದೆ.
ರಾಜ್ಯದ ನಿರೀಕ್ಷೆ ಏನು?ದೇಶದ ಒಟ್ಟು ಉತ್ಪಾದಿತ ವಿದ್ಯುತ್‌ನಲ್ಲಿ ಶೇ.18ರಷ್ಟು (43 ಸಾವಿರ ಮೆವಾಗೂ ಹೆಚ್ಚು) ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಬಹು ದೊಡ್ಡ ಪಾತ್ರ ನಿರ್ವಹಣೆ ಮಾಡುತ್ತಿರುವ ಎನ್‌ಟಿಪಿಸಿ, ಛತ್ತೀಸ್‌ಗಡದಲ್ಲಿ 3500 ಮೆಗಾವಾಟ್ ಸಾಮರ್ಥ್ಯದ 3 ಉಷ್ಣ ವಿದ್ಯುತ್ ಘಟಕಗಳನ್ನು ಹೊಂದಿದೆ. ಬಿಸಲಾಪುರದಲ್ಲಿ 1980 ಐಎಗಾವಾಟ್ ವಿದ್ಯುತ್ ಉತ್ಪಾದನೆ ಕೇಂದ್ರವೂ ಇದೆ. ಪೂರ್ಣ ಪ್ರಮಾಣದ ವಿದ್ಯುತ್ ಘಟಕಗಳಿರುವಾಗ, ಸಹಭಾಗಿತ್ವ ಹೊಂದಿದರೆ ಎಲ್ಲ ಕಾರ್ಯಗಳು ಸುಗಮವಾಗಬಹುದು ಎನ್ನುವುದು ರಾಜ್ಯ ಸರ್ಕಾರದ ನಿರೀಕ್ಷೆ.
ಸರ್ಕಾರದ ಗಂಭೀರ ಗಮನವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದ ರಾಜ್ಯಕ್ಕೆ ಈ ಬಾರಿ ವಿದ್ಯುತ್ ಕೊರತೆ ಎದುರಾಗಿದ್ದರಿಂದ ಬಾಕಿ ಇರುವ ಯೋಜನೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಿದೆ. ವಿದ್ಯುತ್ ಸಮಸ್ಯೆ ಬಗ್ಗೆಯೇ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯುತ್ ಉತ್ಪಾದನೆ ಬಗ್ಗೆಯೂ ಗಮನ ನೀಡಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮಕ್ಕೆ (ಕೆಪಿಸಿ) ಸೂಚಿಸಿದ ಬಳಿಕ ಹಳೆ ಕಡತಗಳು ಈಗ ಜೀವ ಪಡೆದುಕೊಂಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + nineteen =
Remember me
