ಬೆಂಗಳೂರು:ಡೇಟಿಂಗ್​ ವೆಬ್​ಸೈಟ್​ ಮೂಲಕ ಸಾಫ್ಟ್​ವೇರ್​ ಇಂಜಿನಿಯರ್​ವೊಬ್ಬನಿಗೆ ವಾಟ್ಸ್ಆ್ಯಪ್​ ವಿಡಿಯೋ ಕಾಲ್​ ಮಾಡಿದ ಯುವತಿಯರು ಬೆತ್ತಲೆ ದೃಶ್ಯ ತೋರಿಸಿದರು. ಬಳಿಕ ಯುವತಿಯರ ಮಾತು ನಂಬಿ ಆತನೂ ಬಟ್ಟೆ ಬಿಚ್ಚಿ ಬರೋಬ್ಬರಿ 16 ಲಕ್ಷ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾನೆ.
ಈ ಸಂಬಂಧ ವೈಟ್​ಫೀಲ್ಡ್​ನ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿರುವ 27 ವರ್ಷದ ಟೆಕ್ಕಿ ದೂರು ನೀಡಿದ್ದಾರೆ. ಡಿ.3ರಂದು ಟೆಕ್ಕಿ, ಡೇಟಿಂಗ್​ ವೆಬ್​ಸೈಟ್​ನಲ್ಲಿ ನೋಡುತ್ತಿದ್ದಾಗ ಶ್ವೇತಾ ಎಂಬಾಕೆ ಪರಿಚಯವಾಗಿ ಮೊಬೈಲ್​ ನಂಬರ್​ ವಿನಿಮಯ ಮಾಡಿಕೊಂಡು “ನಮ್ಮ ಸೇವೆ ಬೇಕಾದರೆ ಮೊದಲಿಗೆ 2 ಸಾವಿರ ರೂ. ಆನ್​ಲೈನ್​ನಲ್ಲಿ ಪಾವತಿಸುವಂತೆ’ ಸೂಚಿಸಿದ್ದಾರೆ. ಅದಕ್ಕೆ ಒಪ್ಪಿದ ಟೆಕ್ಕಿ, ಆನ್​ಲೈನ್​ನಲ್ಲಿ 2 ಸಾವಿರ ರೂ. ವರ್ಗಾವಣೆ ಮಾಡಿದ್ದಾನೆ. ಆನಂತರ ಶ್ವೇತಾ ಕರೆ ಮಾಡಿ ನಿಕಿತಾ ಎಂಬಾಕೆಯ ಮೊಬೈಲ್​ ನಂಬರ್​ ಕೊಟ್ಟು ಈಕೆ ನಿಮ್ಮ ಸೇವೆಗೆ ಬರುತ್ತಾಳೆ ಎಂದಿದ್ದಾಳೆ. ಇದಾದ ಕೆಲವೇ ನಿಮಿಷಗಳಲ್ಲಿ ನಿಕಿತಾ ಕರೆ ಮಾಡಿ ಸಂಭಾಷಣೆ ನಡೆಸಿದ್ದಾಳೆ. ಸಲುಗೆಯಿಂದ ಮಾತುಕತೆ ಶುರು ಮಾಡಿದ ಯುವತಿಯರು ವಿಡಿಯೋ ಕಾಲ್​ ಮಾಡುವಂತೆ ಹೇಳಿದ್ದಾರೆ.
ಅದನ್ನೇ ಕಾಯುತ್ತಿದ್ದ ಟೆಕ್ಕಿ, ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ ಮಾಡಿದಾಗ ಮೊದಲು ಯುವತಿಯರು ಬೆತ್ತಲೆ ದೃಶ್ಯ ತೋರಿಸಿ ಪ್ರಚೋದನೆ ಮಾಡಿದ್ದಾರೆ. ಆನಂತರ ಟೆಕ್ಕಿಗೆ ‘ನೀನೂ ಬಟ್ಟೆ ಬಿಚ್ಚು’ ಎಂದೇಳಿ ಬಿಚ್ಚಿಸಿ ವಿಡಿಯೋ ರೆಕಾರ್ಡ್​ ಮತ್ತು ಸ್ಕ್ರೀನ್​ ಶಾರ್ಟ್​ ತೆಗೆದುಕೊಂಡಿದ್ದಾರೆ.ಇದನ್ನೂ ಓದಿರಿಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?
ಬಳಿಕ ವಿಡಿಯೋ ಕಾಲ್​ ಕಟ್​ ಮಾಡಿದ ಯುವತಿಯರು ಟೆಕ್ಕಿ ವಾಟ್ಸ್​ಆ್ಯಪ್​ಗೆ ಅಶ್ಲೀಲ ವಿಡಿಯೋ ಮತ್ತು ಫೋಟೋ ಕಳುಹಿಸಿ ಬ್ಲ್ಯಾಕ್​ಮೇಲ್​ ಮಾಡಲು ಶುರು ಮಾಡಿದ್ದಾರೆ. ‘ಆನ್​ಲೈನ್​ನಲ್ಲಿ ಹಣ ವರ್ಗಾವಣೆ ಮಾಡದಿದ್ದರೆ ನಿನ್ನ ಫೇಸ್​ಬುಕ್​, ಟ್ವಿಟರ್​, ಇನ್​ಸ್ಟಾಗ್ರಾಮ್​ನಲ್ಲಿ ಅಶ್ಲೀಲ ವಿಡಿಯೋ ಅಪ್​ಲೋಡ್​ ಮಾಡುತ್ತೇವೆ’ ಎಂದು ಬೆದರಿಸಿದ್ದಾಳೆ. ಬೇರೆ ದಾರಿ ಕಾಣದ ಟೆಕ್ಕಿ, ತಕ್ಷಣ ಮೊಬೈಲ್​ ಬ್ಯಾಂಕಿಂಗ್​ ಮೂಲಕ ಹಣ ವರ್ಗಾವಣೆ ಮಾಡಿದ್ದಾನೆ. ಮತ್ತೆ ಅದೇ ಡೇಟಿಂಗ್​ ವೆಬ್​ಸೈಟ್​ನಿಂದ ಪ್ರೀತಿ ಅಗರ್​ವಾಲ್​ ಮತ್ತು ಶೇರಿನ್​ ಎಂಬುವರು ಕರೆ ಮಾಡಿ ಟೆಕ್ಕಿಯ ಅಶ್ಲೀಲ ವಿಡಿಯೋವನ್ನು ಕಳುಹಿಸಿ ಹಣ ಸುಲಿಗೆಗೆ ಇಳಿದಿದ್ದಾರೆ.ಇದನ್ನೂ ಓದಿರಿರೇಣುಕಾಚಾರ್ಯರನ್ನು ಅಟ್ಟಾಡಿಸಿದ್ದ ಕೋತಿಗೆ ತ್ಯಾವರೆಕೊಪ್ಪದಲ್ಲಿ ಸಿಕ್ತು ಸಂಗಾತಿ!
ಹಂತ ಹಂತವಾಗಿ ಪಂಜಾಬ್​ ನ್ಯಾಷನಲ್​ ಬ್ಯಾಕ್​, ಎಚ್​ಡಿಎಫ್​ಸಿಸಿ ಬ್ಯಾಂಕ್​, ಎಸ್​ಬಿಐ ಬ್ಯಾಂಕ್​ ಖಾತೆಗಳಿಗೆ ಕೇವಲ 10 ದಿನಗಳಲ್ಲಿ 16 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾರೆ. ಇಷ್ಟಾದರೂ ಬಿಡದೆ ಮತ್ತೆ ಮತ್ತೆ ಹಣ ಕೇಳಿದಾಗ ಬ್ಯಾಂಕ್​ ಖಾತೆ ಖಾಲಿ ಮಾಡಿಕೊಂಡಿದ್ದ ಟೆಕ್ಕಿ ದಿಕ್ಕು ತೋಚದೆ ಸೈಬರ್​ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ಆರೋಪಿಗಳಾದ ಶೇರಿನ್​, ಶ್ವೇತಾ, ಪ್ರೀತಿ ಅಗರ್​ವಾಲ್​ ಮತ್ತು ನಿಖಿತಾ ಎಂಬುವರ ವಿರುದ್ಧ ಎಫ್​​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಮೊಬೈಲ್​ ನಂಬರ್​ ಆಧರಿಸಿ ತನಿಖೆ ಕೈಗೊಳ್ಳಲಾಗಿದೆ.
ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

ಅಕ್ರಮ ಸಂಬಂಧ ಮುರಿದುಕೊಳ್ಳಲು ಒಲ್ಲೆ… ಎನ್ನುತ್ತ ಬಂದಾಕೆ ಪ್ರಿಯಕರನ ಜತೆಗೂಡಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ಳು

ನಾಪತ್ತೆಯಾಗಿದ್ದ ತಾಯಿ-ಮಗಳು ನಾಲೆಯಲ್ಲಿ ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eight =
Remember me
