
ಬೆಂಗಳೂರು:ಬ್ಯಾಂಕ್​ ಸಹಾಯವಾಣಿಯನ್ನು ಗೂಗಲ್​ನಲ್ಲಿ ಸರ್ಚ್​ ಮಾಡಿ ಕರೆ ಮಾಡಿದ ಯುವತಿಗೆ 500 ರೂ. ರಿಫಂಡ್​ ಮಾಡುವ ಸೋಗಿನಲ್ಲಿ ಸೈಬರ್​ ಕಳ್ಳರು 57 ಸಾವಿರ ರೂ. ಕನ್ನ ಹಾಕಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಐಟಿಪಿಎಲ್​ ಮುಖ್ಯ ರಸ್ತೆ ಹೂಡಿಯಲ್ಲಿ ನೆಲೆಸಿರುವ ಯುವತಿ ವಂಚನೆಗೆ ಒಳಗಾದವರು. ಖಾಸಗಿ ಬ್ಯಾಂಕ್​ನಲ್ಲಿ ಖಾತೆ ಹೊಂದಿರುವ ಯುವತಿಯ ಖಾತೆಯಿಂದ 500 ರೂ. ಕಡಿತವಾಗಿತ್ತು. ಇದನ್ನು ಗಮನಿಸಿದ ಯುವತಿ, ವಿಚಾರಣೆ ಮಾಡಲು ಗೂಗಲ್​ನಲ್ಲಿ ತನ್ನ ಬ್ಯಾಂಕಿನ ಟೋಲ್​ ಫ್ರೀ ನಂಬರ್​ ಸರ್ಚ್​ ಮಾಡಿ ಅದರಲ್ಲಿ ಸಿಕ್ಕ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ನಿಮಗೆ ರಿಫಂಡ್​ ಮಾಡುತ್ತೆವೆ ಎಂದು ಹೇಳಿ ಯುವತಿಯ ಬ್ಯಾಂಕ್​ ಖಾತೆ ವಿವರ ಮತ್ತು ಒಟಿಪಿ ನಂಬರ್​ ಸಹ ಪಡೆದುಕೊಂಡು 57,509 ರೂ. ಅನ್ನು ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದಾಗ ಸಣ್ಣ ತಪ್ಪಿನಿಂದ ಹಣ ವರ್ಗಾವಣೆ ಆಗಿದೆ. ವಾಪಸ್​ ಜಮೆ ಮಾಡುತ್ತೆವೆ ಎಂದು ಹೇಳಿ ಮತ್ತೆ ಒಟಿಪಿ ನಂಬರ್​ ಕೇಳಿದ ಆಗ ಅನುಮಾನ ಬಂದು ಕರೆ ಕಟ್​ ಮಾಡಿದ್ದಾರೆ.
ನೊಂದ ಯುವತಿ, ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಯಾವುದೇ ಸಹಾಯವಾಣಿಯನ್ನು ಗೂಗಲ್​ ಸರ್ಚ್​ ಮಾಡಿ ಕರೆ ಮಾಡುವುದು ಸರಿಯಾದ ವಿಧಾನವಲ್ಲ. ಸಂಬಂಧಪಟ್ಟ ಬ್ಯಾಂಕ್​ ಅಥವಾ ಕಂಪನಿ ಕೊಟ್ಟಿರುವ ಅಧಿಕೃತ ಸಹಾಯವಾಣಿಗೆ ಕರೆ ಮಾಡಿ ವಿಚಾರಣೆ ನಡೆಸಬೇಕು. ಸೈಬರ್​ ಕಳ್ಳರು, ವಂಚನೆ ಮಾಡುವ ಉದ್ದೇಶಕ್ಕೆ ಗೂಗಲ್​ನಲ್ಲಿ ತಮ್ಮ ನಂಬರ್​ ನಮೂದು ಮಾಡಿ ವಂಚನೆ ಮಾಡುತ್ತಾರೆ ಎಂದು ವೈಟ್​ಫೀಲ್ಡ್​ ವಿಭಾಗ ಸಿಇಎನ್​ ಪೊಲೀಸರು ಸಲಹೆ ನೀಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 5 =
Remember me
