ಬೆಂಗಳೂರು:ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಮನೆಹಾಳ ಕಾಂಗ್ರಸ್ಸಿಗರು ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯಕ್ಕೆ ಕೊಟ್ಟಿದ್ದೇನು ? ಎಂದು ಹೇಳಲು ತಯಾರಿಲ್ಲ. ಅಧಿಕೃತ ಅಂಕಿ-ಅಂಶಗಳನ್ನು ಒಳಗೊಂಡು ಬಿಡುಗಡೆ ಮಾಡಿ, ಅವರ ‘ಯೋಗ್ಯತೆ ಪಟ್ಟಿ’ಗೆ ಕೈಗನ್ನಡಿ ಹಿಡಿದಿರುವೆ ಎಂದು ವಿಧಾನಸಭೆ ಪ್ರತಿಪಕ್ಷ ಆರ್.ಅಶೋಕ್ ತಿರುಗೇಟು ನೀಡಿದರು.
ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ 2004-05 ರಿಂದ 2023-24ರವರೆಗೆ ಬರಗಾಲ, ಆಲಿಕಲ್ಲು ಮಳೆ, ಭೂಕುಸಿತ, ಅತಿವೃಷ್ಟಿ ಹಾಗೂ ಪ್ರವಾಹ ನೆರವಿಗೆ ರಾಜ್ಯ ಕೇಳಿದ್ದೆಷ್ಟು ? ಕೇಂದ್ರ ಸರ್ಕಾರ ಕೊಟ್ಟಿದ್ದೆಷ್ಟು ? ಮನಮೋಹನ್ ಸಿಂಗ್ ನೇತೃತ್ವದ ಯುಪಿಎ, ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಅವಧಿಯಲ್ಲಿನ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕನ್ನಡಿಗರ ಕೈಗೆ ಚಿಪ್ಪು ಕೊಟ್ಟು, ಮೂರು ನಾಮ ಹಾಕಿರುವುದನ್ನು ಅಧಿಕೃತ ದಾಖಲೆಗಳೇ ಸಾಬೀತುಪಡಿಸುತ್ತವೆ. ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅತಿಹೆಚ್ಚು ಕೊಟ್ಟಿರುವುದನ್ನು ಇವೇ ದಾಖಲೆಗಳು ಹೇಳುತ್ತವೆ ಎಂದು ಆರ್.ಅಶೋಕ್ ಪ್ರತಿಪಾದಿಸಿದರು.
ಅಧಿಕೃತವಾಗಿ ಬಿಡುಗಡೆ ಮಾಡಿದ ಕಾಂಗ್ರೆಸ್ ನ ‘ಯೋಗ್ಯತಾ ಪಟ್ಟಿ’ಯಲ್ಲಿರುವ ಅಂಕಿ-ಅಂಶಗಳನ್ನು ಸುಳ್ಳು ಎಂದು ಸಾಬೀತುಪಡಿಸಬೇಕು. ಇಲ್ಲವೇ ಸಿಎಂ ಸಿದ್ದರಾಮಯ್ಯ ತಾವು ಹೇಳುತ್ತಿರುವುದು ಸುಳ್ಳು ಎಂದು ಒಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು‌.
ಕಾಂಗ್ರೆಸ್ ನೇತೃತ್ವದ ಯುಪಿಎ 10 ವರ್ಷಗಳ ಆಡಳಿತದ ಅವಧಿಯಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ರಾಜ್ಯ ಸರ್ಕಾರ ಒಟ್ಟು 44,838.59 ಕೋಟಿ ರೂ ನೆರವು ಕೇಳಿದ್ದರೆ, ಕೇಂದ್ರ ಸರ್ಕಾರ 4,571.40 ಕೋಟಿ ರೂ. ಅಂದರೆ ಶೇಕಡ 10.20ರಷ್ಟು ನೆರವು ಬಿಡುಗಡೆ ಮಾಡಿದೆ.
ಅದೇ ಬಿಜೆಪಿ ನೇತೃತ್ವದ ಎನ್ ಡಿಎ 10 ವರ್ಷಗಳ ಆಡಳಿತದ ಅವಧಿಯಲ್ಲಿ ರಾಜ್ಯ ಸರ್ಕಾರ ಒಟ್ಟು 25,591 ಕೋಟಿ ರೂ ನೆರವಿಗೆ ಮನವಿ ಮಾಡಿದ್ದರೆ, ಕೇಂದ್ರ ಸರ್ಕಾರ 15,920 ಕೋಟಿ ರೂ ಅಂದರೆ ಶೇಕಡ 62.21ರಷ್ಟು ಹಣ ಬಿಡುಗಡೆ ಮಾಡಿದೆ.
ತುಲನಾತ್ಮಕ ಅಂಕಿ-ಅಂಶಗಳು ಕರ್ನಾಟಕಕ್ಕೆ ಕಾಂಗ್ರೆಸ್ ನಿಂದ ಅನ್ಯಾಯ, ಮೋಸ ಆಗಿರುವುದನ್ನು ಎತ್ತಿ ತೋರಿಸುತ್ತವೆ. ಆಗಲೂ ಕೇಂದ್ರದ ಮುಂದೆ ರಾಜ್ಯ ಸರ್ಕಾರ ಕೇಂದ್ರ ಮುಂದೆ ಭಿಕ್ಷೆಪಾತ್ರೆ ಹಿಡಿದು ನಿಂತಿದ್ದಿಲ್ಲ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ರಾಜ್ಯವನ್ನು ಕಡೆಗಣಿಸಿದ್ದೇಕೆ ? ಎನ್ನುವುದಕ್ಕೆ ಕಾಂಗ್ರೆಸ್ಸಿಗರು ಕೇಳುವ ಧೈರ್ಯ ಮಾಡಲಿಲ್ಲ, ಸತ್ಯ ಜನರ ಮುಂದಿಡುವ ತಾಕತ್ತಿಲ್ಲ ಎಂದು ಆರ್.ಅಶೋಕ್ ಕೆಣಕಿದರು.
ಕೇಂದ್ರದಿಂದ ಅನ್ಯಾಯ, ಮೋಸವೆಂದು ಬೀದಿಗೆ ಇಳಿದಿರುವ ಕಾಂಗ್ರೆಸ್ ನಾಯಕರು ರಾಜಕೀಯ ನಾಟಕವಾಡುತ್ತಿದ್ದಾರೆ. ಚುನಾವಣೆಯಲ್ಲಿ ಜನರ ಗಮನಸೆಳೆದು, ತನ್ನ ಬೊಕ್ಕಸ ಬರಿದಾಗಿರುವುದನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ಮಾಡಿದರು.
ಸಿದ್ದರಾಮಯ್ಯ ಅಲ್ಲ, ಸುಳ್ಳುರಾಮಯ್ಯಗೆ ರಾವಣನಂತೆ 10 ನಾಲಿಗೆಯಿರುವಂತಿದೆ. ಕೇಂದ್ರ ಸರ್ಕಾರಕ್ಕೆ ನಾವು ಪರಿಹಾರ ಕೇಳಿದ್ದು 4,860 ಕೋಟಿ ರೂ.ಗಳೆಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ 18,171 ಕೋಟಿ ರೂ.ಗಳು ಎಂದಿರುವ ಬಗ್ಗೆ ವಿಡಿಯೋ ತುಣುಕು ಪುರಾವೆಯಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾದ ಮೂರು ದಿನಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು. ಕೇಂದ್ರ ಸರ್ಕಾರದ 3,454‌ ಕೋಟಿ ರೂ.ಗೆ ರಾಜ್ಯ ಸರ್ಕಾರ ಅಷ್ಟೇ ಮೊತ್ತ ಸೇರಿಸಿ, ಹಿಂದಿನ ಬಿಜೆಪಿ ಸರ್ಕಾರ ನೀಡಿದಂತೆ ದುಪ್ಪಟ್ಟು ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಲೂಟಿಕೋರ ಕಾಂಗ್ರೆಸ್ ಸರ್ಕಾರ ಕಮಿಷನ್, ಬಿರಿಯಾನಿ ತಿನ್ನಿಸುವುದಕ್ಕೆ ಈ ಹಣ ದುರ್ಬಳಕೆ ಮಾಡಿಕೊಂಡರೆ ಹುಷಾರ್. ಬಿಜೆಪಿ ಕಾವಲು ಕಾಯುತ್ತದೆ, ಬೆಳೆ ನಷ್ಟಕ್ಕೆ ದುಪ್ಪಟ್ಟು ಪರಿಹಾರ ನೀಡದಿದ್ದರೆ ರೈತರ ಪರವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಆರ್.ಅಶೋಕ್ ಎಚ್ಚರಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − seven =
Remember me
