ಬೆಂಗಳೂರು:ನ್ಯಾಯಾಧೀಶರ ಮನೆಯಲ್ಲಿ ಮದುವೆ ಇದೆ. ಸೀರೆ ತೋರಿಸಿ ಎಂದು ಪೋಸ್​ ನೀಡುತ್ತ 120 ಸೀರೆಗಳನ್ನು ಆಯ್ಕೆ ಮಾಡಿದಳಾಕೆ. ಬಳಿಕ ಅವೆಲ್ಲವನ್ನೂ ಎತ್ತಿಕೊಂಡು, ಮನೆಯವರಿಗೆ ತೋರಿಸಿ ಬಂದು ಹಣ ಕೊಡುವೆ ಎಂದು ಹೋದವಳು ಈಗ ಪೊಲೀಸರ ಅತಿಥಿ! ಬಂಧಿತಳನ್ನು ಶಶಿಕಲಾ ಎಂದು ಗುರುತಿಸಲಾಗಿದೆ.
ವಂಚನೆ ಎಸಗಿದ್ದು ಹೀಗೆ:ಸೀರೆ ಅಂಗಡಿಗೆ ಬಂದಿತ್ತೊಂದು ಫೋನ್ ಕರೆ. ಹಲೋ ನಾನು ಜಡ್ಜ್ ಮನೆಯಿಂದ ಮಾತನಾಡುತ್ತಿದ್ದೇನೆ. ನಮ್ಮ ಮನೇಲಿ ಮದುವೆ ಇದೆ. ಒಂದಷ್ಟು ಪಾಟೂರು ಪಟ್ಟೆ ಸೀರೆ ಬೇಕು. ನಮ್ಮ ಮನೆಯಿಂದ ಒಬ್ಬರನ್ನು ನಿಮ್ಮ ಅಂಗಡಿಗೆ ಕಳುಹಿಸುತ್ತಿರುವೆ ಎಂಬ ಸಂದೇಶದೊಂದಿಗೆ ಆ ಫೋನ್​ ಕರೆ ಕಟ್ ಆಗಿತ್ತು.
ಇದನ್ನೂ ಓದಿ:ಚಾಮರಾಜಪೇಟೆ ಪಿಎಸ್ಐ ಅಮಾನತು- ಅತ್ಯಾಚಾರ ದೂರು ದಾಖಲು, ಬ್ಲ್ಯಾಕ್​ಮೇಲ್​ನ ಪ್ರತಿದೂರು
ಕೆಲ ಹೊತ್ತಿನ ಬಳಿಕ ಈ ಮಹಿಳೆ ಅಂಗಡಿಗೆ ಎಂಟ್ರಿ ಕೊಟ್ಟಿದ್ದಳು. ಸೀರೆಗಳನ್ಹು ಬಳಿಕ ಸಂಪಿಗೆ ಹಳ್ಳಿಯಲ್ಲಿರುವ ಅಪಾರ್ಟ್​ಮೆಂಟ್​ಗೆ ತರಿಸಿಕೊಂಡಿದ್ದಳು. ಆದರೆ ಹಣ ಪಾವತಿಸಿರಲಿಲ್ಲ. ಸೀರೆಗಳ ಒಟ್ಟು ಮೌಲ್ಯ 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ವಂಚನೆ ಅರಿವಿಗೆ ಬರುತ್ತಲೇ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)
ಪೇಟೆ ರೌಡಿ ಹೇಳಿಕೆಗೆ ನಾನ್ಯಾಕೆ ಉತ್ತರಿಸಲಿ : ಸುಮಲತಾ ಅಂಬರೀಷ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
